ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರೆಯಲ್ಲಿ ಸುಳ್ಯ ನಗರವು ಸೇರಿದಂತೆ ನಾನಾ ಕಡೆಗಳಲ್ಲಿ ಇದೀಗ ಯಮ ಕಿಂಕರ ಗುಂಡಿಗಳು ಬಿದ್ದಿದ್ದು ವಾಹನ ಸವಾರರಿಗೆ ಪ್ರಯಾಣ ಬಹಳ ಪ್ರಯಾಸದಾಯಕವಾಗಿದೆ.
ಸುಳ್ಯದ ಗಾಂಧಿನಗರ , ಉಬರಡ್ಕ ಕ್ರಾಸ್ , ಅರಂಬೂರು , ಪೆರಾಜೆ , ಅರಂತೋಡು ಹೀಗೆ ನಾನಾ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾ ಮಳೆಗೆ ರಸ್ತೆಯ ಮಧ್ಯದಲ್ಲಿ ಗುಂಡಿಗಳು ಬಿದ್ದಿದ್ದು ಅಪಘಾತಗಳ ಸಂಖ್ಯೆಯು ಹೆಚ್ಚಳವಾಗಿದ್ದು ಅಲ್ಲಲ್ಲಿ ದ್ವಿಚಕ್ರ ವಾಹನ ಪಲ್ಟಿ , ನಾಲ್ಕು ಚಕ್ರಗಳ ವಾಹನಗಳ ಮಧ್ಯೆ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರಾರು ಇದೀಗ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯ ಎದುರಾಗಿದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ವಾಹನ ಸವಾರರ ಜೀವ ರಕ್ಷಣೆ ಮಾಡಬೇಕಾಗಿದ್ದು ಇನ್ನಾದರೂ ಎಚ್ಚೆತ್ತು ಈ ಯಮಕಿಂಕರ ಗುಂಡಿಗಳನ್ನು ಮುಚ್ಚಿ ಜನರ ಜೀವ ಉಳಿಸುತ್ತದೆಯೇ ರಾಜ್ಯಾ ಹೆದ್ದಾರಿ ವಿಭಾಗ ಎಂದು ಕಾದು ನೋಡಬೇಕಿದೆ.