ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ನಿವೃತ್ತಿ


ಆಪರೇಶನ್ ವಿಜಯ್ ಕಾರ್ಗಿಲ್ ನಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಡಿ.31ರಂದು ಭೂಸೇನೆಯಿಂದ ನಿವೃತ್ತಿಯಾದರು . ಇವರು ಡಿಸೆಂಬರ್ 1990ರಲ್ಲಿ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ವಿಭಾಕಕ್ಕೆ ಸೇರ್ಪಡೆಯಾಗಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.

. . . . . . . . .

ಇವರು ಭಾರತದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್,ಉತ್ತರ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮುಂಬೈಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಜಮ್ಮು ಮತ್ತು ಕಾಶ್ಮೀರದ ಬೇರೆ ಬೇರೆ ಪ್ರದೇಶಗಳಲ್ಲಿ ಸುಮಾರು 11 ವರ್ಷ ಸೇವೆ ಸಲ್ಲಿಸಿರುತ್ತಾರೆ. ಫೆಬ್ರವರಿ 2017ರಿಂದ ಬೆಂಗಳೂರಿನ ಮಿಲಿಟರಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತುದಾರ ಹಾಗೂ ತರಬೇತಿ ಮೇಲ್ವಿಚಾರಕರಾಗಿ ಸುಮಾರು 4 ವರ್ಷಗಳ ಕಾಲ ಭಾರತೀಯ ಸೇನೆ ಹಾಗೂ ಭಾರತದ ಮಿತ್ರ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್ ಅಫ್ಗಾನಿಸ್ತಾನ, ಶ್ರೀಲಂಕಾ, ಘಾನ,ಮ್ಯಾನ್ಮಾರ್ ಮೊದಲಾದ ದೇಶದ ಸೈನಿಕರಿಗೂ ತರಬೇತು ನೀಡಿದ್ದಾರೆ. 2018 ಮೇ ತಿಂಗಳಲ್ಲಿ ಇವರ ಅತ್ಯುತ್ತಮ ಸೇವೆಗೆ ಆರ್ಮಿ ಕಮಾಂಡರ್ ಲೇ ಜನರಲ್ ಯಂ.ಯಂ ನರವಾನೆ ಯವರಿಂದ ವಿಶೇಷ ಪದಕವನ್ನು ಪಡೆದಿರುತ್ತಾರೆ. ಅಫ್ಗಾನಿಸ್ತಾನ ಆರ್ಮಿಯಿಂದ ಕೂಡ ಪ್ರಶಸ್ತಿ ಪತ್ರವನ್ನು ಪಡೆದಿರತ್ತಾರೆ. ಇವರು ಭಾರತೀಯ ಭೂ ಸೇನೆಯಲ್ಲಿ ಸೈನಿಕರಾಗಿ ಸೇರಿ ಹಲವು ಪದೋನ್ನತಿಯನ್ನು ಪಡೆದು ಜನವರಿ 26-2020ಕ್ಕೆ ಲೆಫ್ಟಿನೆಂಟ್ ಹಾಗೂ 15 ಆಗಸ್ಟ್ 2020ಕ್ಕೆ ಕ್ಯಾಪ್ಟನ್ ಆಗಿ ಭಾರತ ಸರಕಾರದಿಂದ ವಿಶೇಷ ಪದೋನ್ನತಿಯನ್ನು ಪಡೆದಿರುತ್ತಾರೆ. ಹೀಗೆ ಪದೋನ್ನತಿ ಹೊಂದಿ ಕ್ಯಾಪ್ಟನ್ ಆದ ಮಿಲಿಟರಿ ಪೊಲೀಸ್ ವಿಭಾಗದಲ್ಲಿ ಜಿಲ್ಲೆಯ ಮೊದಲಿಗರಾಗಿರುತ್ತಾರೆ. ಮಿಲಿಟರಿ ಪೊಲೀಸ್ ವಿಭಾಗ ಭಾರತೀಯ ಭೂ ಸೇನೆಯಲ್ಲಿ 1939ರಿಂದ ಸೇವೆ ಸಲ್ಲಿಸುತ್ತಿದ್ದರು.

. . . . . . .


ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆಯವರು ಹಲವಾರು ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.ಅದರಲ್ಲಿ ಆಪರೇಶನ್ ವಿಜಯ್ ಕಾರ್ಗಿಲ್ ಕದನ ಪ್ರಮುಖವಾದದ್ದು. ಇದರಲ್ಲಿ ಯುದ್ಧ ಪದಕವನ್ನು ಪಡೆದಿರುತ್ತಾರೆ. ಪತ್ನಿ ಶಾಂತಾಮಣಿ ಯವರು ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ಗೌರವ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಳ್ಯ ತಾಲೂಕು ಪೆರುವಾಜೆ ಗ್ರಾಮ ನಿವಾಸಿಯಾಗಿರುವ ಇವರು ಮಾವಿನಕಟ್ಟೆ ಶ್ರೀ ಕೃಷ್ಣ ಮಣಿಯಾಣಿ ಹಾಗೂ ಜಾನಕಿಯವರ ಮಗ. ಪುತ್ರಿ ಸುಶ್ಮಿತಾ ಪಿ. 9ನೇ ತರಗತಿ ಸಾಂದೀಪನಿ ಶಾಲೆಯಲ್ಲೂ, ಪುತ್ರ ಹಿತೇಶ್ ಪಿ. 4ನೇ ತರಗತಿ ಜ್ಞಾನ ಗಂಗಾ ಶಾಲೆ ಬೆಳ್ಳಾರೆಯಲ್ಲಿ ವಿಧ್ಯಾಭ್ಯಾಸ ಮಾಡುತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading