ಜೆಸಿಐ ಸುಳ್ಯ ಸಿಟಿ ಹಾಗೂ ಎನ್‌ಎಸ್‌ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ವತಿಯಿಂದ ಹೊಸ ವರ್ಷ ಆಚರಣೆ

ಜೆಸಿಐ ಸುಳ್ಯ ಸಿಟಿ ಹಾಗೂ ಎನ್‌ಎಸ್‌ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಜಂಟಿ ಆಶ್ರಯದಲ್ಲಿ “ಹೊಸ ವರ್ಷ -2021” ರ ಆಚರಣಾ ಕಾರ್ಯಕ್ರಮವನ್ನು ಕೊಡಿಯಾಲಬೈಲ್ ಕಾಲೋನಿಯಲ್ಲಿ ತೆಂಗಿನ ಗಿಡವನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಉಬರಡ್ಕ ಗ್ರಾಮ ಪಂಚಾಯತ್ ನ ಸದಸ್ಯರಾದ ಮಮತಾ ಕುದ್ಪಾಜೆ, ನಿವೃತ್ತ ಸೈನಿಕರಾದ ನವೀನ ಕುಮಾರ್, ಸ. ಪ್ರ.ದ.ಕಾ.ಸುಳ್ಯ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಶ್ರೀಮತಿ ಸುರೇಖಾ ಹಾಗೂ ಸ್ವಯಂ ಸೇವಕರು, ಜೆಸಿಐ ಸುಳ್ಯ ಸಿಟಿಯ ನಿಯೋಜಿತ ಜೆಸಿ ಚಂದ್ರಶೇಖರ್ ಕನಕಮಜಲು ಹಾಗೂ ಜೆಸಿಐಯ ಪದಾಧಿಕಾರಿಗಳು ಮತ್ತು ಕಾಲೊನಿಯ ಫಲಾನುಭವಿಗಳು ಉಪಸ್ಥಿತರಿದ್ದರು. ಜೇಸೀ ಐ ಸುಳ್ಯ ಸಿಟಿ ಸ್ಥಾಪಕ ಜೇಸೀ ಮನಮೋಹನ್ ಬಳ್ಳಡ್ಕ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading