ಗಾಂಧಿನಗರ : ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ – ಅಮರ ಸುದ್ದಿ ವರದಿ ಫಲಶ್ರುತಿ

ಸುಳ್ಯ ಗಾಂಧಿನಗರದಲ್ಲಿ ಕುಡಿಯುವ ನೀರಿನ ಯೋಜನೆ ಘಟಕವು ಕಳೆದ ಮಾರ್ಚ್ ತಿಂಗಳಲ್ಲಿ ತಾಂತ್ರಿಕ ದೋಷದಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗದೆ ದುರಸ್ತಿ ಗೊಂಡಿತ್ತು. ಈ ಘಟನೆಯ ವಿವರವನ್ನು ಅಮರ ಸುಳ್ಯ ಸುದ್ದಿ ಪತ್ರಿಕೆಯಲ್ಲಿ ವರದಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮನವಿಯನ್ನು ಮಾಡಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಘಟಕದ ದುರಸ್ತಿಗೆ ಹೊರ ರಾಜ್ಯದಿಂದ ಕೆಲಸಗಾರರು ಬರಬೇಕಾಗಿದ್ದು ಆದಷ್ಟು ಶೀಘ್ರದಲ್ಲಿ ಅವರನ್ನು ಕರೆಸಿ ದುರಸ್ತಿ ಯಲ್ಲಿರುವ ಯಂತ್ರವನ್ನು ಸರಿಪಡಿಸುವುದಾಗಿ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ರವರು ಭರವಸೆಯನ್ನು ನೀಡಿದ್ದರು. ಇದೀಗ ಅವರು ಹೇಳಿದಂತೆ ಯಂತ್ರ ರಿಪೇರಿಯ ಕೆಲಸ ಕಾರ್ಯಗಳು ನಡೆದು ನವಂಬರ್ 10 ರಿಂದ ಸ್ಥಳೀಯರು ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಯೋಜನೆಯನ್ನು ಪಡೆಯುವಂತಾಗಿದೆ. ಈ ಬಗ್ಗೆ ನ.ಪಂ.ಸದಸ್ಯ ಶರೀಫ್ ಕಂಠಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ನ.ಪಂ.ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದ್ದರು.

. . . . . . . . .

ಕಳೆದ 7-8 ತಿಂಗಳುಗಳಿಂದ ನಾದುರಸ್ತಿಯಲ್ಲಿದ್ದ ಗಾಂಧಿನಗರ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಿರುತ್ತದೆ ಎಂದು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading