ಸುಳ್ಯ: ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಇಂದು ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಮಲ್ಪೆ ಇವರಿಗೆ ಟ್ರಸ್ಟ್ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು.
ತೆಂಕು — ಬಡಗು ತಿಟ್ಟು ಮತ್ತು ತಾಳಮದ್ಧಳೆಯಲ್ಲೂ ಪ್ರಸಿದ್ಧಿ ಪಡೆದ ಕರಾವಳಿಯ ಸಾಮ್ರಾಟ ” ಸಾಮಗ “ಅವರ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಮತ್ತು ಉಪಾಧ್ಯಕ್ಷರಾದ ಶಶಿಧರ ಎಂ ಜೆ ಅವರ ಗುಣಗಾನ ಮಾಡಿ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ದೀರಕ್ರಾಸ್ತ, ನಗರ ಪಂಚಾಯತ್ ಮಾಜಿ ಸದಸ್ಯರಾದ ಮುಸ್ತಫ, ಸುಧೀರ್ ರೈ ಮೇನಾಲ , ಟ್ರಸ್ಟ್ ಕೋಶಾಧಿಕಾರಿ ಗೋಕುಲ್ ದಾಸ್, ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ, ಭವಾನಿ ಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಮೋಹಿತ್ ಮತ್ತಿತರರು ಉಪಸ್ಥಿತರಿದ್ದರು.