ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿ ಅವರಿಗೆ ಯಾವುದೇ ಪರಿಹಾರ ಸಿಗದೇ ಅವರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ತಿಳಿಸಿದ್ದರು. ಈ ಬಗ್ಗೆ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ಸಂದಿಸಿದ್ದು ನ.8 ರಂದು ಸುಳ್ಯ ತಹಶೀಲ್ದಾರ್ ಅನಂತಶಂಕರ ರವರು ಜಯರಾಮ ನಾಯರ್ ಅವರಿಗೆ 25 ಸಾವಿರ ದ ಚೆಕ್ ವಿತರಣೆ ಮಾಡಿದರು.
- Friday
- November 1st, 2024