- Thursday
- November 21st, 2024
ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಕಲ್ಲುಗುಂಡಿ ಹೊರಠಾಣೆ ಕಚೇರಿಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಠಾಣಾಧಿಕಾರಿ ಚಾಮಯ್ಯರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಲಯನ್ ವಾಸುದೇವ ಕಟ್ಟೆಮನೆ, ಲಯನ್ ಪ್ರಶಾಂತ್ ಬಾಲನ್, ಲಯನ್ ಕಿಶೋರ್ ಪಿ.ಬಿ ಉಪಸ್ಥಿತರಿದ್ದರು.
ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ನೂತನ ನಿರ್ದೇಶಕರಾಗಿ ಸಂಜಯ್ ನೆಟ್ಟಾರ್ ಆಯ್ಕೆಯಾಗಿದ್ದಾರೆ. ಇವರು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾಗಿದ್ದಾರೆ.
ಸುಳ್ಯ: ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಇಂದು ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಮಲ್ಪೆ ಇವರಿಗೆ ಟ್ರಸ್ಟ್ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು.ತೆಂಕು -- ಬಡಗು ತಿಟ್ಟು ಮತ್ತು ತಾಳಮದ್ಧಳೆಯಲ್ಲೂ ಪ್ರಸಿದ್ಧಿ ಪಡೆದ ಕರಾವಳಿಯ ಸಾಮ್ರಾಟ " ಸಾಮಗ "ಅವರ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಮತ್ತು ಉಪಾಧ್ಯಕ್ಷರಾದ ಶಶಿಧರ ಎಂ ಜೆ...
ಬಳ್ಪ ಗ್ರಾಮದ ಅಡ್ಡಬೈಲು - ಬೀದಿಗುಡ್ಡೆ - ಬೋಗಾಯನಕೆರೆ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಎಸ್. ಅಂಗಾರರಿಂದ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕಾರ್ಯಕ್ರಮವು ನ. 9ರಂದು ಬಳ್ಪ ಶ್ರೀ ಭಾರತೀ ತೀರ್ಥ ಸಭಾಂಗಣದಲ್ಲಿ ನಡೆಯಿತು. ಬಿ.ಜೆ.ಪಿ. ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ...
ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇದರ ವತಯಿಂದ ಮ್ಯಾಟ್ ಮತ್ತು ಪಿಲ್ಲೋ ತಯಾರಿ ತರಬೇತಿ ಕಾರ್ಯಕ್ರಮ ವು ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಯುವತಿ ಮಂಡಲ ದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು. ಅನೇಕ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.
ಕರ್ನಾಟಕ ರಾಜ್ಯ ಸರಕಾರದಿಂದ ಕೊಡಲ್ಪಡುವ "ಸಹಕಾರಿ ರತ್ನ " ಪ್ರಶಸ್ತಿಗೆ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಭಾಜನರಾಗಿದ್ದಾರೆ. ಇವರು ಐವರ್ನಾಡು ಪ್ರಾ.ಕೃ.ಪ.ಸ.ಸಂಘ ಗೌರವಾಧ್ಯಕ್ಷರಾಗಿದ್ದಾರೆ. ಹಾಗೂ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಶಾಸಕ ಎಸ್. ಅಂಗಾರ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಧಿಕಾರ ಸ್ವೀಕರಿಸಿದರು. ಕೃಷ್ಣ ಶೆಟ್ಟಿ ಕಡಬ ಅವರ ಬದಲಾಗಿ ಮನೋಹರ ರೈ ಅವರನ್ನು ಸರಕಾರ ನೇಮಕಗೊಳಿಸಿತ್ತು. ಅಧಿಕಾರ ಸ್ವೀಕಾರ ವೇಳೆ ಸಮಿತಿ ಸದಸ್ಯರುಗಳಾದ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್...
ಚುನಾವಣೆ ಕಳೆದು ಒಂದೂವರೆ ವರ್ಷಗಳ ಬಳಿಕ ಸುಳ್ಯದ ಜನತೆಯ ಬಹಳ ನಿರೀಕ್ಷೆಯಲ್ಲಿದ್ದ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರುಗಳ ಅಧಿಕಾರ ಸ್ವೀಕಾರ ಇಂದು ನಡೆಯಿತು. ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿರುವ ಅಧ್ಯಕ್ಷ ವಿನಯ್ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕರವರು ಇಂದು ಬೆಳಗ್ಗೆ ೧೦.೩೫ ಸಮಯ ನಿಗದಿಪಡಿಸಿ ಪಕ್ಷದ ಮುಖಂಡರು ಹಾಗೂ ನಗರ ಪಂಚಾಯತ್ನ ಎಲ್ಲಾ ಸದಸ್ಯರ ಸಮ್ಮುಖದಲ್ಲಿ...
ಖಾಸಗಿ ಬಸ್ ನಿಲ್ದಾಣದ ಎದುರು ಫುಟ್ ಪಾತ್ ಕುಸಿತಗೊಂಡು ಹಲವು ಸಮಯ ಕಳೆದರೂ ದುರಸ್ತಿ ಪಡಿಸಿರಲಿಲ್ಲ. ಇದಕ್ಕೆ ಬಿದ್ದು ಕೆಲವರು ಗಾಯಗೊಂಡ ಘಟನೆ ಕೂಡ ನಡೆದಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಫುಟ್ ಪಾತ್ ದುರಸ್ತಿಗೊಳಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಕರವೇ ಅಧ್ಯಕ್ಷ ಅಶೋಕ್ ಕುಮಾರ್,ರುಕ್ಮಯ್ಯ ಕುರುಂಜಿ,ನಾರಾಯಣ, ಗಣೇಶ ಪಲ್ಲತಡ್ಕ,ವಿಜಯ ಕುರುಂಜಿ,ಚಿದಾನಂದ ಕಲ್ಲಗುಡ್ಡೆ,ಯೋಗೀಶ್...
ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿ ಅವರಿಗೆ ಯಾವುದೇ ಪರಿಹಾರ ಸಿಗದೇ ಅವರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ತಿಳಿಸಿದ್ದರು. ಈ ಬಗ್ಗೆ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ಸಂದಿಸಿದ್ದು...
Loading posts...
All posts loaded
No more posts