Ad Widget

ಕಳಂಜ ಗ್ರಾಮದಲ್ಲಿ ಮುಗಿಯದ ನೆಟ್ವರ್ಕ್ ಸಮಸ್ಯೆ

"ಹಲೋ…… ಹಲೋ….. ಎಂಚ ಉಲ್ಲರ್…… ಹಲೋ…. ಕೇನುಜಿ"! ಈ ರೀತಿಯಾದ ನೆಟ್ವರ್ಕ್ ಸಮಸ್ಯೆ ಕಳಂಜ ಗ್ರಾಮದಲ್ಲಿ ಹೇರಳವಾಗಿದೆ. ಸದ್ಯ ಪೋನ್ ಕರೆಮಾಡಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದ್ದು, ಇಂಟರ್ನೆಟ್ ದೂರದ ಮಾತಾಗಿದೆ. ಕೊರೋನಾದ ಸಂಕಟಕಾಲದಲ್ಲಿ ಇಂದು ವಿದ್ಯಾರ್ಥಿಗಳ ಶಿಕ್ಷಣವುಆನ್ ಲೈನ್ ಮುಖಾಂತರ ನಡೆಯುತ್ತಿದ್ದು, ಇಂಟರ್ನೆಟ್ ಕೈಕೊಡುವ ಕಾರಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕುಂಟಾಗುತ್ತಿದೆ. ಇದರ ಜೊತೆಗೆ ಅನೇಕ...

ಗೂನಡ್ಕ ದರ್ಕಾಸ್ ಪರಿಸರದಲ್ಲಿ ಭಾರಿ ಮಳೆಗೆ ಕುಸಿದ ಬರೆ, ಮಣ್ಣಿನಡಿಗಾದ ಬೋರ್

ಸುಳ್ಯ ಗೂನಡ್ಕ ದರ್ಕಸ್ ಪರಿಸರದಲ್ಲಿ ಭಾರಿ ಮಳೆಗೆ ಮನೆಯ ಹಿಂಬದಿಯ ಮಣ್ಣಿನ ಬರೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಮನೆಯವರು ನೀರಿಗಾಗಿ ಬಳಸುತ್ತಿದ್ದ ಬೋರ್ ಮಣ್ಣಿನಡಿಯಲ್ಲಿ ಮುಚ್ಚಿ ಹೋದ ಘಟನೆ ವರದಿಯಾಗಿದೆ.
Ad Widget

ದನ ಸಾಗಾಟ ಪ್ರಕರಣ – ಕೊಲೆ ಯತ್ನ ಆರೋಪಿಗೆ ಜಾಮೀನು

ಜುಲೈ 14 ರಂದು ಆರೋಪಿ ಅಬ್ದುಲ್ ಫಾರೂಕ್ ಎಂಬವರು ತನ್ನ ಪಿಕ್ ಅಪ್ ವಾಹನದಲ್ಲಿ ಎರಡು ದನ ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಪುತ್ತೂರು ಸುಳ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜ್ಯೋತಿ ಸರ್ಕಲ್ ಬಳಿ ಕಾಯುತ್ತಿದ್ದು ಸದ್ರಿ ವಾಹನವನ್ನು ಠಾಣೆಯ ಹೆಚ್ ಸಿ ಒಬ್ಬರು...

ಅಪಾಯದ ಸ್ಥಿತಿಯಲ್ಲಿದ್ದ ತೆಂಗಿನ ಮರವೊಂದನ್ನು ತೆರವುಗೊಳಿಸಿದ ಎಸ್ ವೈ ಎಸ್, ಎಸ್ ಎಸ್ ಎಫ್ ತಂಡ

ಸುಳ್ಯ ಅನ್ಸಾರಿಯ ನಿರ್ಗತಿಕರ ಕೇಂದ್ರ ಸಂಪರ್ಕಿಸುವ ರಸ್ತೆ ಬಳಿ ಬರೆಯ ಮೇಲಿನಿಂದ ತಂಗಿನಮರ ಒಂದು ಬೀಳುವ ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಸುಳ್ಯ ಎಸ್ ವೈ ಎಸ್ ,ಎಸ್ ಎಸ್ ಎಫ್ ತಂಡದ ಸದಸ್ಯರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು. ಕಾರ್ಯಾಚರಣೆಯಲ್ಲಿ ಆರಿಸ್ ಬೋರುಗುಡ್ಡೆ, ಶರೀಫ್ ಜಯನಗರ , ಶಾಕಿರ್ ಮೊಗರ್ಪಣೆ,...

ಸುಳ್ಯ ನಗರದ ವಿವಿಧೆಡೆಗಳಲ್ಲಿ ಬರೆಕುಸಿತ

ಸುಳ್ಯ ನಗರದ ಕೆಲವು ಭಾಗಗಳಲ್ಲಿ ಬರೆಕುಸಿತ ಉಂಟಾಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಒಂದೆಡೆ ಕೊರೋನಾ ಮಹಾಮಾರಿಯು ಸುಳ್ಯವನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಯು ತನ್ನ ರುದ್ರ ನರ್ತನದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಕುಂಬರ್ಚೋಡು ಮನೆಯ ಮೇಲೆ ಬರೆ ಕುಸಿದು ಬಿದ್ದು ಸಂಪೂರ್ಣ ಹಾನಿ

ನಿನ್ನೆ ಸಂಜೆಯಿಂದಲೇ ಸುರಿದ ಭಾರಿ ಮಳೆಯಿಂದ ಸುಳ್ಯ ಕುಂಬರಚ್ಚೋಡು ಬಳಿ ರಾತ್ರಿ ವೇಳೆ ಮನೆ ಮೇಲೆ ಬರೆ ಕುಸಿದುಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಬರೆ ಜರಿಯುವ ಸಂದರ್ಭದಲ್ಲಿ ಮನೆ ಮಂದಿ ಹೊರಗಡೆ ಬಂದಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .

ಕೌಡಿಚ್ಚಾರ್ ನ ವ್ಯಕ್ತಿಗೆ ಸುಳ್ಯ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡ

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೌಡಿಚ್ಚಾರ್ ನ ವ್ಯಕ್ತಿಗೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡಪಟ್ಟಿದೆ.

ಪೆರುವಾಜೆ : ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ

ಇಂದಿರಾ ಪ್ರಿಯದರ್ಶನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಉದ್ಘಾಟಿಸಿ ಶುಭಹಾರೈಸಿದರು.ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿ ಬಾಗಿಲು ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕೃಷ್ಣಪ್ಪ, ಪೆರುವಾಜೆ ಗ್ರಾಮ...

ಆಲೆಟ್ಟಿಯ ವ್ಯಕ್ತಿಗೆ ಇಂದು ಕೋವಿಡ್ ಪಾಸಿಟಿವ್

ಆಲೆಟ್ಟಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಇಂದು ಕೊರೊನ ಪಾಸಿಟಿವ್ ಬಂದಿದೆ. ಅವರನ್ನು ಸುಳ್ಯ ಕೋವಿಡ್ ಆಸ್ಪತ್ರೆ ನಲ್ಲಿ ಕಾರಂಟೈನ್ ಗೊಳಪಡಿಸಲಾಗಿದೆ.

ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ನದಿಗಳು, ಕೆಲವೆಡೆ ಹಾನಿ

ಸುಳ್ಯ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ನದಿ, ಹೊಳೆ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ಸುಳ್ಯದ ಪಯಸ್ವಿನಿ ನದಿ ಕೂಡ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ, ತೋಟಗಳಿಗೆ ನೀರು ನುಗ್ಗಿದೆ.ಕಲ್ಲುಗುಂಡಿಯ ಕಡೆಪಾಲದ ಬಳಿ ಬರೆ ಕುಸಿದು ರಸ್ತೆಗೆ ಮರ ಬಿದ್ದಿದ್ದನ್ನು ಅಗ್ನಿಶಾಮಕ ದಳ ತೆರವುಗೊಳಿಸಿದೆ. ಅನೆಗುಂಡಿ ಬಳಿ ಬರೆಕುಸಿದಿದೆ, ಕುಕ್ಕಂದೂರು ಸಮೀಪ...
Loading posts...

All posts loaded

No more posts

error: Content is protected !!