ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಹಾಗೂ ಇಂದು ಮಗು,ಪತ್ರಕರ್ತ, ಶಿಕ್ಷಕ ಸೇರಿ ಒಟ್ಟು ಐದು ಕೊವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಸೋಮವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡವಾದ ವ್ಯಕ್ತಿಯೊಬ್ಬರ ಪತ್ನಿ ಹಾಗೂ 2 ವರ್ಷದ ಮಗುವಿಗೂ ಮಂಗಳವಾರ ಪಾಸಿಟಿವ್ ಧೃಡವಾಗಿತ್ತು. ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬುಧವಾರ 3 ಪಾಸಿಟಿವ್ ಧೃಡವಾಗಿದ್ದು, ಇದರಲ್ಲಿ ಸುಳ್ಯದ ಜಿಲ್ಲಾಮಟ್ಟದ ಪತ್ರಕರ್ತರೊಬ್ಬರು ಸೇರಿದ್ದಾರೆ. ಇಂದು ಪಾಸಿಟಿವ್ ಬಂದ ವ್ಯಕ್ತಿ ಗಾಂಧಿನಗರದಲ್ಲಿ ರೂಂ ಮಾಡಿಕೊಂಡಿದ್ದು ಮನೆ ಮನೆಗೆ ಹೋಗಿ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಇನ್ನೊಬ್ಬರು ಕಾಣಿಯೂರು ಮೂಲದವರಾಗಿದ್ದು ಕಡಬದಲ್ಲಿ ಶಿಕ್ಷಕರಾಗಿದ್ದಾರೆ.
- Friday
- November 1st, 2024