- Tuesday
- April 1st, 2025

ಐವರ್ನಾಡು ಪ್ರಾ. ಕೃ. ಪ. ಸಹಕಾರ ಸಂಘದ ವತಿಯಿಂದ ಆ. 13 ರಂದು ಅಪರಾಹ್ನ 2 ಗಂಟೆಗೆ ಯಂತ್ರದ ಮೂಲಕ ಅಡಿಕೆ ಮರ ಏರುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ದ ಕುಮಾರಸ್ವಾಮಿ ಪ್ರೌಢಶಾಲಾ ವಿದ್ಯಾರ್ಥಿನಿ ಸಾಗರಿಕಾ ಪಿ.ಎಚ್. ಪೂಜಾರಿಕೋಡಿ 615 ಅಂಕ ಪಡೆದು ಉತ್ತಮ ಸಾಧನೆ ಮಾಡಿರುತ್ತಾಳೆ.ಈಕೆ ನೋಟರಿ ಹಾಗೂ ವಕೀಲರಾಗಿರುವ ಗುತ್ತಿಗಾರು ಗ್ರಾಮದ ಹರೀಶ್ ಪೂಜಾರಿಕೋಡಿ ಮತ್ತು ಪ್ರೇಮ ದಂಪತಿಗಳ ಪುತ್ರಿ. ಇವರ ಇನ್ನೊಬ್ಬಳು ಪುತ್ರಿ ನಿಹಾರಿಕಾ ಪಿ.ಎಚ್. ಈ ಬಾರಿಯ ನವೋದಯ...

ಎಸ್.ಎಸ್.ಎಲ್.ಸಿ 2019-20 ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನೀಯನಾದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನುಷ್ ಎ.ಎಲ್ ರವರ ಮನೆಗೆ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ನಿಯೋಗವು ಭೇಟಿ ನೀಡಿ ಸಮಿತಿಯ ವತಿಯಿಂದ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಅಭಿನಂದನಾ ಫಲಕ ಹಾಗೂ ಸಿಹಿತಿಂಡಿ ನೀಡಿ ಸನ್ಮಾನಿಸಲಾಯಿತು....

ಅಜ್ಜಾವರ ಬಯಂಬು ಮೂಲದ ವ್ಯಕ್ತಿಗೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಆಗಿದ್ದಾರೆ. ಇಂದು ಒಟ್ಟು 4 ಪ್ರಕರಣ ಪತ್ತೆಯಾದಂತಾಗಿದೆ.

ದೇವಚಳ್ಳ ಗ್ರಾಮದ ವಾಲ್ತಾಜೆ ಯುವ ಸೇವಾ ಮತ್ತು ಕ್ರೀಡಾ ಸಂಘದ ಸಕ್ರಿಯ ಸದಸ್ಯರಾಗಿದ್ದ ಸೀತಾರಾಮ್ ಮೀನಾಜೆಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಅವರಿಗೆ ಸಂತಾಪ ಸೂಚಿಸಿದ, ನಂತರ ಸಂಘದ ವತಿಯಿಂದ 50 ಕೆಜಿ ಅಕ್ಕಿ ಮತ್ತು 5000 ರೂ ಧನಸಹಾಯವನ್ನು ಅವರ ಮನೆಗೆ ತೆರಳಿ ಪತ್ನಿ ಲಲಿತ ಮಗಳು ರತಿಕ್ಷಾ ಅವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ...

ಗುತ್ತಿಗಾರು ಗ್ರಾಮದ ಅಡ್ಡನಪಾರೆ ಲಕ್ಷ್ಮಣ ಆಚಾರ್ಯ ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 5 ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೋಭಾವತಿ, ಪುತ್ರರಾದ ಮಾಜಿ ಗ್ರಾ.ಪಂ.ಸದಸ್ಯರುಗಳಾದ ಗಂಗಾಧರ, ಭವಾನಿಶಂಕರ, ಪುತ್ರಿ ಚಂದ್ರಕಲಾ ಅಳಿಯ,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ವಿಟ್ಲ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಇಶಾ ಡಿ.ಕೆ., ಎಸ್ ಎಸ್ ಎಲ್.ಸಿ.ಪರಿಕ್ಷೆಯಲ್ಲಿ 601 ಅಂಕ (ಶೇ 96.16) ಗಳಿಸಿರುತ್ತಾಳೆ. ಈಕೆ ಸುಳ್ಯ ತಾಲೂಕು ಎಣ್ಮೂರು ಗ್ರಾಮದ ಗುತ್ತಿಗೆ ಮನೆ ದಿ.ಇಸ್ಮಾಯಿಲ್ ಮತ್ತು ಖದೀಜ ದಂಪತಿಗಳ ಪುತ್ರಿ.

ಐವರ್ನಾಡು ಗ್ರಾಮದ ಬಾಂಜಿಕೋಡಿ ಪ್ರಭಾಕರ ನಾಯಕ್ ಇವರ ಮನೆ ಇಂದು ಕುಸಿದು ಬಿದ್ದಿದೆ. ಮನೆಯ ಮಾಡು ಸಂಪೂರ್ಣ ಕುಸಿದಿದ್ದು, ಗೋಡೆ ಶಿಥಿಲಗೊಂಡಿದೆ. ಸ್ಥಳಕ್ಕೆ ಪಿಡಿಓ, ಗ್ರಾಮಲೆಕ್ಕಾಧಿಕಾರಿ, ಹಾಗೂ ಪಂಚಾಯತ್ ಮಾಜಿ ಸದಸ್ಯರು ಭೇಟಿ ನೀಡಿದ್ದಾರೆ. ಸ್ಥಳೀಯರು ಹಾಗೂ ಹಿತೈಷಿಗಳು ಕುಸಿದಿರುವ ಮನೆಯ ಸಾಮಾಗ್ರಿ ತೆರವುಗೊಳಿಸುವ ಕಾರ್ಯನಡೆಸಿದ್ದಾರೆ. ಕೂಡಲೇ ಸ್ಪಂದಿಸಿದ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ...

ಐವರ್ನಾಡು ಗ್ರಾಮದ ಬಾಂಜಿಕೋಡಿ ಪ್ರಭಾಕರ ನಾಯಕ್ ಇವರ ಮನೆ ಕುಸಿದು ಬಿದ್ದಿದ್ದು ಇವರಿಗೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಒಂದು ವಾರಕ್ಕೆ ಬೇಕಾದ ಆಹಾರ ಕಿಟ್ ಹಾಗೂ ವಿಲೇಜ್ ಟಾಸ್ಕ್ ಫೋರ್ಸ್ ಸಮಿತಿ ಯಿಂದ ರೂ.5000 ದ ಚಕ್ ನೀಡಲಾಯಿತು.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಹಾಗೂ ಇಂದು ಮಗು,ಪತ್ರಕರ್ತ, ಶಿಕ್ಷಕ ಸೇರಿ ಒಟ್ಟು ಐದು ಕೊವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ.ಸೋಮವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡವಾದ ವ್ಯಕ್ತಿಯೊಬ್ಬರ ಪತ್ನಿ ಹಾಗೂ 2 ವರ್ಷದ ಮಗುವಿಗೂ ಮಂಗಳವಾರ ಪಾಸಿಟಿವ್ ಧೃಡವಾಗಿತ್ತು. ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಬುಧವಾರ 3 ಪಾಸಿಟಿವ್ ಧೃಡವಾಗಿದ್ದು, ಇದರಲ್ಲಿ...

All posts loaded
No more posts