- Thursday
- November 21st, 2024
ಮಂಗಳೂರು – ಮೈಸೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮಿಸ್ ಕಾಲ್ ಕೊಟ್ಟ ಮೈಸೂರಿನ ದಿಲೀಪ್ ಕುಮಾರ್ ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಸುಳ್ಯ ಪೋಲಿಸರ ವಶಕ್ಕೆ ಪಡೆದ ಘಟನೆ ನಡೆದಿದೆ. ಕೊರೊನಾ ಮಾರ್ಗಸೂಚಿ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ವಿಳಾಸ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕಂಡೆಕ್ಟರ್ ತೆಗೆದುಕೊಳ್ಳಬೇಕಾಗುತ್ತದೆ. ಕಂಡಕ್ಟರ್ ನಂಬರ್ ತೆಗೆದುಕೊಳ್ಳುವ ವೇಳೆ ಹಿಂಬದಿ...
ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116,ಗದಗ 108, ಕೊಪ್ಪಳ 39, ಜನರಿಗೆ ಸೊಂಕು ತಗುಲಿದೆ. ಮೈಸೂರು 281, ಉಡುಪಿ 190, ಬಾಗಲಕೋಟ 184, ದಕ್ಷಿಣ ಕನ್ನಡ 180, ಧಾರವಾಡ 174, ,ಕಲಬುರಗಿ 159, ವಿಜಯಪುರ 158, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ,ಚಿಕ್ಕಬಳ್ಳಾಪುರ 92,...
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಗೋಮುಖ ವ್ಯಾಘ್ರ ಧಾರಾವಾಹಿ ಚಿತ್ರತಂಡದ ಜಂಟಿ ಸಹಯೋಗದಲ್ಲಿ ಸುಳ್ಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೊರಾಂಗಣದಲ್ಲಿ "ಕರೋನ ಫಜೀತಿ" ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮವು ನೆರವೇರಿತು.ಸುಳ್ಯದ ಖ್ಯಾತ ಜ್ಯೋತಿಷ್ಯರು , ಸಾಹಿತಿ , ಚಿತ್ರ ನಿರ್ದೇಶಕ ಹಾಗೂ ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ...
ನಿನ್ನೆ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಸುಳ್ಯ ಮೂಲದ ಮಹಿಳೆಯ ಅಂತ್ಯ ಸಂಸ್ಕಾರ ಅಂಚಿನಡ್ಕ ಮಸೀದಿ ವಠಾರದಲ್ಲಿ ದ.ಕ.ಜಿಲ್ಲಾ ವಿಖಾಯ ತಂಡದ ನೇತೃತ್ವದಲ್ಲಿ ನಡೆಯಿತು, ಸುಳ್ಯ ವಲಯ ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಅಂತ್ಯ ಕ್ರಿಯೆಗೆ ಸಹಕರಿಸಿದರು.
ಸುಳ್ಯದ ನ್ಯಾಯವಾದಿಯಾಗಿರುವ ಧರ್ಮಪಾಲ ಕೊಯಿಂಗಾಜೆ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೋಟರಿ ವಕೀಲರನ್ನಾಗಿ ಭಾರತ ಸರಕಾರ ನೇಮಕ ಮಾಡಿದೆ . ಇವರು ಸುಳ್ಯದಲ್ಲಿ ವಕೀಲ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸ ಹಿ ಪ್ರಾ ಶಾಲೆ ಕೋಲ್ಚಾರು , ಪ್ರೌಡ ಶಿಕ್ಷಣವನ್ನು ಸ. ಪ್ರೌಡ ಶಾಲೆ ಅಜ್ಜಾವರ , ಪದವಿ ಪೂರ್ವ ಹಾಗೂ ಪದವಿ...
ಯು.ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ಯಶೋಧ ರವರ ರಬ್ಬರ್ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಂಡು ಬಂದು ಅದನ್ನು ಸೆರೆ ಹಿಡಿದು ಮೀಸಲು ಅರಣ್ಯಕ್ಕೆ ಬಿಡಲಾಯಿತು . ಹೆಬ್ಬಾವು ಹಿಡಿಯು ಕಾರ್ಯಚರಣೆಯಲ್ಲಿ ಕಲ್ಲುಗುಂಡಿಯ ನಿವಾಸಿಗಳಾದ ಶರತ್ ಕೀಲಾರ್, ರಾಕೇಶ್ ಮತ್ತು ದಬ್ಬಡ್ಕ ಕಉಪ ವಲಯ ಅರಣ್ಯಾಧಿಕಾರಿ ಪಿ.ಜೆ ರಾಘವ ಹಾಗೂ ಸಿಬ್ಬಂದಿಗಳಾದ ಚಂದ್ರಪ್ಪ ಕಾರ್ತಿಕ್ ಹಾಗೂ...
ಸುಳ್ಯದ ಕಲ್ಲುಮುಟ್ಟು ನಿವಾಸಿಯಾಗಿರುವ ಮಹಿಳೆಗೆ ಕೊರೊನ ಭಾದಿಸಿದ್ದು ಜು.23 ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಈ ಮೊದಲು ಪೆರ್ಲಂಪಾಡಿ ನಿವಾಸಿಯಾಗಿದ್ದರು. ಪಾಸಿಟಿವ್ ಬಂದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದ ಮಂಗಳೂರಿನ ಯುನಿಟಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(24.07.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 355ಹಳೆ ಅಡಿಕೆ 305 - 370ಡಬಲ್ ಚೋಲ್ 305 - 370 ಫಠೋರ 220 - 285ಉಳ್ಳಿಗಡ್ಡೆ 110 - 195ಕರಿಗೋಟು 110 - 180 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಮರ್ಕಂಜ ಗ್ರಾಮದ ದೋಳ ದಿ. ಅನಂತಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಗಂಗಮ್ಮ ದೋಳ ಜು.23 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು, ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ತನಗೆ ಸ್ವಂತ ಜಾಗವಿದ್ದರೂ ಹಲವಾರು ವರ್ಷಗಳಿಂದಲೂ ರಸ್ತೆ ಬದಿ, ಬಸ್ ನಿಲ್ದಾಣದಲ್ಲಿ ಮಲಗುತ್ತಾ , ಅಲ್ಲೇ ಅನ್ನಾಹಾರ ತಯಾರಿಸುತ್ತಿದ್ದ ಪಂಜ ಗ್ರಾಮದ ಮಹಿಳೆಯೊಬ್ಬರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ನೇತೃತ್ವದಲ್ಲಿ ಒಂದು ಸೂರು ಕಲ್ಪಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪಂಜ ಗ್ರಾಮದ ನಾಯರ್ ಕೆರೆ ಚಂದ್ರಾವತಿ ಎಂಬ ಮಹಿಳೆಯೇ ಈ ಸ್ಥಿತಿಗೆ ತಲುಪಿದ್ದು.ಅವಿವಾಹಿತ ರಾಗಿರುವ...
Loading posts...
All posts loaded
No more posts