Ad Widget

ಗಾಂಧಿನಗರ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಮತ್ತೊಂದು ತ್ಯಾಜ್ಯ ಸಂಗ್ರಹ ಘಟಕವಾಗಿ ಮಾರ್ಪಟ್ಟಿದೆಯೇ?


. . . . .

ಸರ್ಕಾರದ ಹತ್ತು ಹಲವಾರು ಯೋಜನೆಗಳು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಜನಸಾಮಾನ್ಯರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.ಪ್ರಾರಂಭದ ಸಂದರ್ಭದಲ್ಲಿ ಯೋಜನೆಗಳನ್ನು ಉದ್ಘಾಟಿಸಿ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಯೋಜನೆಯನ್ನು ತರಲು ಶ್ರಮಿಸಿದ ಕಷ್ಟ ನೋವುಗಳನ್ನು, ತ್ಯಾಗಗಳನ್ನು, ಭಾಷಣಗಳ ಮೂಲಕ ತಿಳಿಸಿ ಇದನ್ನು ಸಾರ್ವಜನಿಕರು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿ ಹೋಗಿರುತ್ತಾರೆ.ಈ ಯೋಜನೆಗಳು ಸರಿಯಾಗಿ ಆರು ತಿಂಗಳುಗಳ ಕಾಲ ಸಾರ್ವಜನಿಕರಿಗೆ ಲಭಿಸಿದೆಯೇ ಎಂದು ಸರ್ಕಾರಕ್ಕೆ ಮಾಹಿತಿ ಇರುವುದಿಲ್ಲ.
ಯಾವುದಾದರೂ ಒಂದು ಯೋಜನೆ ಈ ರೀತಿಯಲ್ಲಿ ದುರಸ್ತಿ ಆದಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕಾಳಜಿವಹಿಸಿ ಸರಕಾರವು ಸಾರ್ವಜನಿಕರಿಗೆ ನೀಡಿದ ಸೌಲಭ್ಯವನ್ನು ಸರಿಪಡಿಸಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ವಿವಿಧ ಯೋಜನೆಗಳು ಈ ರೀತಿಯ ಕಸ ವಿಲೇವಾರಿ ಘಟಕವಾಗಿ ಮಾರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ರೀತಿಯ ಒಂದು ವ್ಯವಸ್ಥೆ ಸುಳ್ಯದ ಗಾಂಧಿನಗರ ಸರ್ಕಾರಿ ಶಾಲೆಗೆ ಹೋಗುವ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಪರಿಸ್ಥಿತಿಯಾಗಿದೆ. ಪ್ರತಿದಿನ ನೂರಾರು ಜನನಾಯಕರು , ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ , ಸರ್ಕಾರದ ಲಕ್ಷಾಂತರ ರೂಪಾಯಿಗಳ ಮೌಲ್ಯದ ಉಪಕರಣಗಳು ತುಕ್ಕು ಹಿಡಿಯುತ್ತಿರುವುದು ಕಂಡು ಕಾಣದಂತೆ ಇರುವುದು ವಿಷಾದಕರ ಸಂಗತಿಯಾಗಿದೆ. ಪ್ರಾರಂಭದಲ್ಲಿಯೇ ಇದರ ದುರಸ್ತಿಯ ಬಗ್ಗೆ ಕಾಳಜಿ ವಹಿಸಿ ದುರಸ್ತಿಪಡಿಸಿದಲ್ಲಿ ಅಲ್ಪ ಖರ್ಚಿನಿಂದ ಸರಿಪಡಿಸಿಕೊಳ್ಳಬಹುದು. ಅದನ್ನು ಬಿಟ್ಟು ಅದಕ್ಕಾಗಿ ವರ್ಷಗಟ್ಟಲೆ ಕಾದು ಕುಳಿತಲ್ಲಿ ಕಬ್ಬಿಣದ ವಸ್ತುಗಳು, ಒಳಭಾಗದ ಮೋಟಾರುಗಳು ಸರ್ವನಾಶವಾಗಿ ಯಾವುದಕ್ಕೂ ಬೇಡದ ಸ್ಥಿತಿ ಉಂಟಾಗುತ್ತದೆ. ಇದೀಗ ಸ್ಥಳೀಯರು ಅದು ನಗರಪಂಚಾಯತ್ ಕಟ್ಟಡವಾದ ಕಾರಣ ಕಸದ ರಾಶಿಗಳನ್ನು ತಂದು ಕುಡಿಯುವ ನೀರಿನ ಘಟಕದ ಮುಂದೆ ಸುರಿಯಲು ಪ್ರಾರಂಭಿಸಿದ್ದಾರೆ. ಇದೇ ರೀತಿ ಇನ್ನೂ ಕೆಲವು ದಿನಗಳು ಮುಂದುವರಿದಲ್ಲಿ ಸುಳ್ಯದ ಕಸ ಸಂಗ್ರಹಿಸಲು ಮತ್ತೊಂದು ತ್ಯಾಜ್ಯ ಘಟಕ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದರ ಬಗ್ಗೆ ಸ್ಥಳೀಯ ನ.ಪಂ ಸದಸ್ಯ ಶರೀಫ್ ಕಂಠಿ ಅವರಲ್ಲಿ ಕೇಳಿದಾಗ ನಾನು ಹಲವಾರು ಬಾರಿ ನಗರ ಪಂಚಾಯತ್ ಇಂಜಿನಿಯರ್ ರವರ ಗಮನಕ್ಕೆ ನೀಡಿರುತ್ತೇನೆ. ಆದರೆ ಇದುವರೆಗೆ ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಇದನ್ನು ದುರಸ್ತಿ ಪಡಿಸುವವರು ಉತ್ತರ ಭಾರತ ಭಾಗದಿಂದ ಬರುವ ವರಾಗಿದ್ದು ಲಾಕಾಡೌನ್ ಹಿನ್ನೆಲೆಯಲ್ಲಿ ಅವರಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಸರಕಾರದ ಯೋಜನೆಯು ಈ ರೀತಿಯಾಗಿ ಹಳ್ಳ ಹಿಡಿಯುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ವರದಿ. ಹಸೈನಾರ್ ಜಯನಗರ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!