ಜು.೧೪ರಂದು ಕೌಡಿಚ್ಚಾರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟವಾಗುತ್ತಿದೆ ಎಂದು ಖಚಿತ ಮಾಹಿತಿಯನ್ನು ಪಡೆದ ಸುಳ್ಯ ಭಜರಂಗದಳದ ಯುವಕರು ಆನೆಗುಂಡಿಯಿಂದ ಪಿಕಪ್‌ನ್ನು ಬೆನ್ನೆಟ್ಟಿ ಬಂದು ಕನಕಮಜಲಿನಲ್ಲಿ ತಡೆಯಲು ಪ್ರಯತ್ನಿಸಿದರು. ಪಿಕಪ್ ಚಾಲಕ ಗಾಡಿಯನ್ನು ನಿಲ್ಲಿಸದೇ ಭಜರಂಗದಳದ ಯುವಕರ ಬೈಕ್‌ಗೆ ತಾಗಿಸಿಕೊಂಡು ಸುಳ್ಯದ ಕಡೆಗೆ ಗಾಡಿ ಚಲಿಸಿದನು.
ನಂತರ ತಾಲೂಕು ಭಜರಂಗದಳದ ಸಂಯೋಜಕ ನಿಕೇಶ್ ಉಬರಡ್ಕರವರ ನೇತೃತ್ವದಲ್ಲಿ ಬೆನ್ನಟ್ಟಲಾಯಿತಲ್ಲದೇ ಸುಳ್ಯ ಪೋಲಿಸರಿಗೆ ಮಾಹಿತಿ ನೀಡಿದ ತಕ್ಷಣ ಎಸ್.ಐ ಎಂ.ಆರ್ ಹರೀಶ್ ಅವರ ನೇತೃತ್ವದ ತಂಡ ಜ್ಯೋತಿ ಸರ್ಕಲ್ ಬಳಿ ಕಾದು ನಿಂತರು. ದನಸಾಗಿಸುವ ಪಿಕಪ್ ಬರುತ್ತಿದುದ್ದನ್ನು ನಿಲ್ಲಿಸಲು ಸೂಚಿಸಿದರೂ ಆದರೆ ಪಿಕಪ್ ಚಾಲಕ ಗಾಡಿಯನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿದನು.
ನಂತರ ಪಿಕಪ್ ವಾಹನ ಮುಖ್ಯರಸ್ತೆಯಿಂದಾಗಿ ಜೂನಿಯರ್ ಕಾಲೇಜು ರಸ್ತೆಯಾಗಿ ಸಾಗಿ ಸರಕಾರಿ ಆಸ್ಪತ್ರೆಗೆ ಬರುವ ಒಳರಸ್ತೆಯಲ್ಲಿ ಬರುವಾಗ ಎದುರುಗಡೆ ವಾಹನ ಇದುದ್ದರಿಂದ ಮುಂದಕ್ಕೆ ಹೋಗಲು ಸಾಧ್ಯವಾಗದ ಕಾರಣ ಗಾಡಿಯಿಂದ ಇಳಿದು ಓಡಲು ಯತ್ನಿಸಿದಾಗ ಭಜರಂಗದಳದವರು ಅವನನ್ನು ಬೆನ್ನಟ್ಟಿ ಪೋಲಿಸರಿಗೆ ಒಪ್ಪಿಸಿದರು.
ಈ ವಾಹನದ ಚಾಲಕನನ್ನು ಸಲಾಂ ಎಂದು ಗುರುತಿಸಲಾಗಿದ್ದು, ಇದರಲ್ಲಿ ೨ ಹೋರಿಗಳಿದ್ದವು ಎಂದು ತಿಳಿದುಬಂದಿದೆ.