ಗುರುವಾರದಿಂದ ಸರ್ಕಾರದ ಕಟ್ಟು ನಿಟ್ಟಿನ ಲಾಕ್ಡೌನ್ ಜಾರಿಯಾಗುವುದು ಖಚಿತವಾಗುತ್ತಿದ್ದಂತೆ ಸಂಪಾಜೆಯಲ್ಲಿ ಜಾರಿಯಿದ್ದ ನಾಗರಿಕ ಹಿತರಕ್ಷಣಾ ಸಮಿತಿಯ ಮಧ್ಯಾಹ್ನ 3 ಗೆಂಟೆಯ ನಂತರದ ಲಾಕ್ಡೌನ್ ನನ್ನು ಸಡಿಲಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಗುರುವಾರದಿಂದ ಸಂಪೂರ್ಣ ಲಾಕ್ಡೌನ್ ಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಗ್ರಿಗಳನ್ನು ಖರೀದಿಸಲು ಏಕಾಏಕಿ ಬಂದು ಜನಜಂಗುಳಿ ಆಗುವುದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.
- Thursday
- November 28th, 2024