ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದು, ಆರೋಗ್ಯ ವಲಯಕ್ಕೂ ತೀವ್ರ ಒತ್ತಡ ಬೀಳುತ್ತಿರುವುದರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷವೂ ಜಿಲ್ಲಾಧಿಕಾರಿಗೆ ಜುಲೈ 13 ರ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಬಹಳ ವೇಗವಾಗಿದ್ದು ಸೋಂಕಿತರ ಸಂಖ್ಯೆ ಈಗಾಗಲೇ 2 ಸಾವಿರದ ಗಡಿ ದಾಟಿದೆ. ಈಗಾಗಲೇ 41 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮೂಲವನ್ನು ಕೂಡಾ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಗಂಭೀರವಾಗಿದೆ. ಹೀಗೆ ಮುಂದುವರೆದರೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗುವ ಸಾಧ್ಯತೆಗಳು ಕೂಡಾ ಇದೆ ಎಂದು ವೈದ್ಯರೇ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಪರೀಕ್ಷಾ ಸಿಬ್ಬಂದಿಗೆಯೇ ಸೋಂಕು ದೃಢಪಟ್ಟ ಕಾರಣ ವರದಿಗಳು ಕೂಡಾ ಲಭಿಸುವುದು ವಿಳಂಭವಾಗುವುದು. ಜನರು ಇನ್ನೂ ಕೂಡಾ ಗಂಭೀರವಾಗಿರದೆ ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಆದಷ್ಟು ಬೇಗ ಲಾಕ್‌ಡೌನ್ ಮಾಡಿದರೆ ಕೊರೊನಾ ಸೋಂಕನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಗೆಯೇ ಮಂಗಳೂರು ನಗರದ ಖಾಸಗಿ ಆಸ್ಪತ್ರೆಗಳು ಕೊರೊನಾ ಪರೀಕ್ಷೆ ಮಾಡಲು ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಅಧಿಕ ಶುಲ್ಕವನ್ನು ಪಡೆಯುತ್ತಿದೆ ಎಂದು ತಿಳಿದು ಬಂದಿದೆ. ಜನರು ಈಗಾಗಲೇ ಆರ್ಥಿಕವಾಗಿ ತತ್ತರಿಸಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳು ಈ ರೀತಿ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಲು ಕ್ರಮವಹಿಸಬೇಕು ಎಂದು ಕೂಡಾ ಒತ್ತಾಯಿಸಿದ್ದಾರೆ.
- Thursday
- November 28th, 2024