ದುಗ್ಗಲಡ್ಕದ ಯುವಕನೊಬ್ಬ ಸರಕಾರಿ ಆಸ್ಪತ್ರೆ ಯ ಡಯಾಲಿಸಿಸ್ ಕೇಂದ್ರದಲ್ಲಿ ಸಹಾಯಕನಾಗಿ ಕಾರ್ಯನಿರ್ವಾಹಿಸುತಿದ್ದ ಯುವಕನಿಗೂ ಕೊರೋನಾ ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನಾಳೆಯಿಂದ ಮತ್ತೆ ಡಯಾಲಿಸಿಸ್ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಡಯಾಲಿಸಿಸ್ ತಂತ್ರಜ್ಞರಿಗೆ ಮತ್ತೆ ಕ್ವಾರಂಟೈನ್ ಹೇರಲಾಗಿದೆ.
ಐವತ್ತೊಕ್ಲು ಗ್ರಾಮದ ಗೋಳಿಯಡಿ ಪ್ರದೇಶದ ಈ ಯುವಕ ಕಿಡ್ನಿ ಸಂಬಂಧಿ ರೋಗಿಯಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬರುತ್ತಿದ್ದರು. ಸೀಲ್ ಡೌನ್ ಆದ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಡಯಾಲಿಸಿಸ್ ಗೆ ಹೋಗಿದ್ದರು. ಅಲ್ಲಿ ಅವರ ಗಂಟಲದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಅದು ಪಾಸಿಟಿವ್ ಎಂದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.
ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ನೇತೃತ್ವ ವಹಿಸಿ ಸೋಂಕಿತನ ಮನೆ ಹಾಗೂ ಅವರನ್ನು ಆಸ್ಪತ್ರೆಗೆ ಕರೆದೊಯ್ದವರ ಮನೆಯವರನ್ನು ಕ್ವಾರಂಟೈನ್‌ನಲ್ಲಿಡುವ ವ್ಯವಸ್ಥೆ ಮಾಡಿದ್ಧಾರೆ. ಇಲಾಖೆಯ ವತಿಯಿಂದ ಸೀಲ್ ಡೌನ್ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದೆ.