- Wednesday
- April 2nd, 2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ಇದರ ಆಶ್ರಯದಲ್ಲಿ ಜು.9ರಂದು ರಾಷ್ಟೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತಿದೆ. ಜುಲೈ 9ರಂದು ಎಬಿವಿಪಿ ಯ ಸ್ಥಾಪನ ದಿನವಾಗಿದ್ದು ಹಲವಾರು ವರ್ಷಗಳಿಂದ ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಜು.9 ರಂದು ಪೂ.10 ಗಂಟೆಗೆ ವನದುರ್ಗಾ ದೇವಿ ದೇವಸ್ಥಾನದ...

ಸುಳ್ಯದ ಹಳೆಗೇಟು ಸಮೀಪದ ಹೊಸಗದ್ದೆ ತೋಟಗಾರಿಕಾ ಸಸ್ಯಕ್ಷೇತ್ರದಲ್ಲಿ ಮಾವು ಹಾಗೂ ವಿವಿಧ ತೋಟಗಾರಿಕಾ ಗಿಡಗಳು ಲಭ್ಯವಿದೆ. ಮಲ್ಲಿಕಾ ಮಾವು (ರೂ.32), ಮೋಹಿತ್ ನಗರ ಅಡಿಕೆ ಗಿಡ (ರೂ 20), ಬಾಸ್ಕರ ಮತ್ತು ಉಳ್ಳಾಲ 3 ಗೇರು ಗಿಡ(ರೂ. 25), ತೆಂಗು WCK(ರೂ.60), F1 ಹೈಬ್ರಿಡ್ ಕೊಕ್ಕೋ (ರೂ10),ಕಾಳುಮೆಣಸು ಪಣಿಯೂರ (ರೂ.9) ಲಭ್ಯವಿದೆ ಎಂದು ತೋಟಗಾರಿಕಾ ಇಲಾಖಾ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 183 ಮಂದಿಗೆ ಕೊರೋನಾ ಸೋಂಕು ತಗಲಿದೆ . ಈ ಪೈಕಿ 54 ಮಂದಿಯ ಸೋಂಕಿನ ಮೂಲವನ್ನು ಪತ್ತೆಯಾಗಿಲ್ಲ. ಇದು ಆರೋಗ್ಯ ಇಲಾಖೆಯ ಹಾಗೂ ಜನಸಾಮಾನ್ಯರ ನಿದ್ರೆಗೆಡಿಸಿದೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1542 ಕ್ಕೇರಿದೆ. ಇಂದು 3 ಮಂದಿ ತೀವ್ರ ನಿಗಾ ಘಟಕದಲ್ಲಿದ್ದರೇ, ಪುತ್ತೂರಿನ ಬಾಣಂತಿ ಸಹಿತ ಮೂವರು ಬಲಿಯಾಗಿದ್ದಾರೆ....

ಕೌಡಿಚ್ಚಾರ್ ಸೇತುವೆಯಿಂದ ಕಾರೊಂದು ಕೆಳಗೆ ಬಿದ್ದಿರುವ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸಿದ್ದಿಕ್ ಪಲ್ಲತ್ತೂರು ಚಲಾಯಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಚಾಲಕ ಹಾಗೂ ಜತೆಗಿದ್ದ ನಿಸಾರ್ ಬಾರೆಬೆಟ್ಟು ಅಲ್ಪಸ್ವಲ್ಪ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುಸಿಯುವ ಭೀತಿಯಲ್ಲಿರುವ ಕುರುಂಜಿಗುಡ್ಡೆಯ ಕೆಲವು ಮನೆಗಳ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಅಮರ ಸುದ್ದಿ ವೆಬ್ ಸೈಟ್ ಬುಧವಾರ ಬೆಳಗ್ಗೆ ವರದಿಯೊಂದನ್ನು ಪ್ರಕಟಿಸಿತ್ತು ಇದಕ್ಕೆ ಸ್ಪಂದಿಸಿದ ನ.ಪಂ. ಮುಖ್ಯ ಅಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಸ್ಥಳೀಯ ನ.ಪಂ ಸದಸ್ಯರು ಕುರುಂಜಿ ಗುಡ್ಡೆ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಶಿಲ್ದಾರ್ ರಿಗೆ ಮಾಹಿತಿ ನೀಡಿದ್ದರು. ಹಾಗೂ...

ಜುಲೈ 7 ರಂದು ಬಳ್ಪದಿಂದ ಎಣ್ಣೆಮಜಲಿಗೆ ಹೋಗುವ ರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್ ಸಿಕ್ಕಿತ್ತು. ಬ್ಯಾಗ್ ಸಿಕ್ಕಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಬ್ಯಾಗ್ ಕಳೆದುಕೊಂಡ ಬಳ್ಪ ಗ್ರಾಮದ ಎಣ್ಣೆಮಜಲು ಜೋಸೆಫ್ ಗೆ ತಿಳಿದು ಪಂಜ ಗ್ರಾಮ ಪಂಚಾಯತ್ ಗೆ ಬಂದು ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಅವರಿಂದ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದರು.

ಅಮರ ಸುದ್ದಿ ವೆಬ್ಸೈಟ್ ವರದಿಯಲ್ಲಿ ಇಂದು ಬೆಳಿಗ್ಗೆ ಕುಸಿಯುವ ಭೀತಿಯಲ್ಲಿ ಕುರುಂಜಿ ಗುಡ್ಡೆ ಪರಿಸರದ ಕೆಲವು ಮನೆಗಳು , ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸಲು ವರದಿಯಲ್ಲಿ ಪ್ರಕಟಿಸಲಾಗಿತ್ತು . ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ನ.ಪಂ. ಮುಖ್ಯ ಅಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಸ್ಥಳೀಯ ನ.ಪಂ ಸದಸ್ಯರು ಕುರುಂಜಿ ಗುಡ್ಡೆ ಪರಿಸರಕ್ಕೆ ಭೇಟಿ ನೀಡಿ...

ಕನಕಮಜಲು ಗ್ರಾಮದ ಸುಣ್ಣಮೂಲೆ ಪರಿಸರದಲ್ಲಿ ಭಾರಿ ಮಳೆಗೆ ಸುಮಾರು ಐವತ್ತು ವರ್ಷ ಹಳೆಯ ಬಾವಿ ಕುಸಿತಗೊಂಡಿದೆ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಣ್ಣ ಮೂಲೆಯ ಗೌಸಿಯಾ ಮಂಝಿಲ್ ಇದರ ಆವರಣದಲ್ಲಿರುವ ಬಾವಿ ಜು.8 ರಂದು ಕುಸಿದಿದೆ. ಈ ಬಾವಿಯಿಂದ ಸುಮಾರು ಐವತ್ತು ವರ್ಷಗಳಿಂದ ನೀರನ್ನು ಬಳಸಿಕೊಳ್ಳುತ್ತಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬೆಳ್ಳಾರೆ ವಲಯದ ಬಾಳಿಲ ಒಕ್ಕೂಟದ ಕಾಯಾರ ಎಂಬಲ್ಲಿ ನೂತನವಾಗಿ ಶ್ರೀ ಉಳ್ಳಾಕುಲು ಪ್ರಗತಿ ಬಂಧು ತಂಡವನ್ನು ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ರವರು ಉದ್ಘಾಟಿಸಿದರು .ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳಿಧರ ಎ, ಸೇವಾಪ್ರತಿನಿಧಿ ರತ್ನಾವತಿ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾಗಿ ವೇಣುಗೋಪಾಲ ಸಂಯೋಜಕರಾಗಿ ಸುಂದರ...

ಮಳೆಗಾಲ ಬಂತೆಂದರೆ ರಸ್ತೆಗಳ ಸ್ಥಿತಿ ಅಯೋಮಯ ವಾಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಮಳೆಗಾಲಕ್ಕೂ ಮುನ್ನವೇ ರಸ್ತೆಯೊಂದು ಅಸಮರ್ಪಕ ಮೋರಿ ವ್ಯವಸ್ಥೆಯಿಂದ ಅಪಾಯದ ಹಂತ ತಲುಪಿದೆ. ಕಳಂಜ ಗ್ರಾಮದ ಅಯ್ಯನಕಟ್ಟೆ ತಿರುವು 'ಚೊಕ್ಕಾಡಿ ಕ್ರಾಸ್' ಈ ದುರಾವಸ್ಥೆಗೆ ತಲುಪಿದ ರಸ್ತೆ. ಈ ರಸ್ತೆಯು ಕಳಂಜ, ಅಮರಪಡ್ನೂರು ಮತ್ತು ಅಮರಮುಡ್ನೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೆ, ಸುಳ್ಯಕ್ಕೆ ತಲುಪಲು...

All posts loaded
No more posts