ಪಹಣಿ(ಆರ್ ಟಿ ಸಿ)ಗೆ ಆಧಾರ್ ಜೋಡಿಸಲು ಸೂಚನೆ

ಸರಕಾರದ ಆದೇಶದಂತೆ ಸುಳ್ಯ ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನಿನ ಪಹಣಿ (ಆರ್‌ಟಿಸಿ)ಗೆ ಆಧಾರ್ ನೋಂದಣಿ ಮಾಡಿಸಿಕೊಳ್ಳುವಂತೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಸೂಚನೆ ನೀಡಿದ್ದಾರೆ. ಕರ್ನಾಟಕ ಸರಕಾರದ ನಿರ್ದೆಶನದಂತೆ ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಭಾಗಿತ್ವದಲ್ಲಿ ಆಧಾರ್ ಪಹಣಿ ಜೋಡಣೆ ಆಂದೋಲನ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರೈತರು ತಮ್ಮ ಜಮೀನಿನ...

ಪಡ್ಪಿನಂಗಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ದ. ಕ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇದರ ಸಹಯೋಗದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿ ಹೆಣ್ಣು ಶಿಶು ಪ್ರದರ್ಶನ, ಅನ್ನ ಪ್ರಾಶಣ ಮತ್ತು ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಫೆ. 19 ರಂದು ನಡ್ಕ ಶಿವಗೌರಿ ಕಲಾ ಮಂದಿರ...
Ad Widget

ಅಡ್ತಲೆ : ವೆಂಕಟರಮಣ ದೇವರ ಹರಿಸೇವೆ ಮತ್ತು ಧರ್ಮ ನಡಾವಳಿ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ವೆಂಕಟರಮಣ ದೇವರ ಹರಿಸೇವೆ ಮತ್ತು ಧರ್ಮ ನಡಾವಳಿಯು ಫೆ.20 ಮತ್ತು ಫೆ.21 ರಂದು ಕುಟುಂಬದ ಧರ್ಮಚಾವಡಿಯಲ್ಲಿ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯವರು, ಕುಟುಂಬಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಎಡಮಂಗಲ ಸಹಕಾರಿ ಸಂಘದಿಂದ ಹೈಸ್ಕೂಲ್ ಗೆ ಇನ್ವರ್ಟರ್ ಕೊಡುಗೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಎಡಮಂಗಲ ಇದರ ವತಿಯಿಂದ ಸರಕಾರಿ ಪ್ರೌಢ ಶಾಲೆ ಎಡಮಂಗಲಕ್ಕೆ 2 ಕೆ.ವಿ. ಇನ್ವರ್ಟರ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ನಿರ್ದೇಶಕರಾದ ಅವಿನಾಶ್ ದೇವರಮಜಲು ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ್ ಡಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ, ಉಪಾಧ್ಯಾಯರಾದ ಪದ್ಮನಾಭ ಮತ್ತು ರಮೇಶ್ ಉಪಸ್ಥಿತರಿದ್ದರು.

ಕಳಂಜ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ರಂದು ಜರುಗಲಿದ್ದು, ನಡಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.21 ರಂದು ನಡೆಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ರೈ ಕಳಂಜ, ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ರಘುನಾಥ ರೈ ಕಳಂಜ, ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ, ಉಪಾಧ್ಯಕ್ಷರಾದ ಶೇಷಪ್ಪ...

ಅಡ್ಕಾರು : ಜಾಗ ಮಾರಾಟಕ್ಕಿದೆ

ಜಾಲ್ಸೂರು ಗ್ರಾಮದ ಕೋನಡ್ಕಪದವು ಸಮೀಪ 0.3 ಸೆಂಟ್ಸ್ ಜಾಗ ಮಾರಾಟಕ್ಕಿದೆ ಕೂಡಲೇ ಸಂಪರ್ಕಿಸಿಮೊ : 8217483796

ಉಬರಡ್ಕ ಸೊಸೈಟಿ : ಬಿಜೆಪಿಗೆ ಮತ್ತೆ ಆಡಳಿತ – ಬಿಜೆಪಿ 10, ಕಾಂಗ್ರೆಸ್ 2

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಫೆ.20 ರಂದು ಚುನಾವಣೆ ನಡೆದಿದ್ದು ಆಡಳಿತರೂಢ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. 12 ಸ್ಥಾನಗಳ ಪೈಕಿ ಬಿಜೆಪಿ 10 ಹಾಗೂ ಕಾಂಗ್ರೆಸ್‌ 2 ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ದಾಮೋದರ ಯಂ. ಮದುವೆಗದ್ದೆ, ಬಾಸ್ಕರ ರಾವ್ ಯು.ವಿ. ಕಂಬಳಿಮೂಲೆ, ರಾಜೇಶ್ ನೆಕ್ಕಿಲ,...

ಕೊಲ್ಲಮೊಗ್ರ : ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ "ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ" ಎಂಬ ಯೋಜನೆಯಡಿ ಕೊಲ್ಲಮೊಗ್ರ ಗ್ರಾಮ ಪಂಚಾಯತಿ ಮಟ್ಟದ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ಮಯೂರ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮಾಧವ ಚಾಂತಾಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು....

ಸುಬ್ರಹ್ಮಣ್ಯ : ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ

ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ "ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ" ಎಂಬ ವಿನೂತನ ಯೋಜನೆಯಡಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಲ್ಲಿ ಫೆ.18 ರಂದು ರಂದು ಅಂಬಿಕಾ ಸ್ತೀ ಶಕ್ತಿ ಗೊಂಚಲಿನ ಅದ್ಯಕ್ಷೆ ಶ್ರೀಮತಿ ಶೈಲಜಾ ರವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ...

ಹರಿಹರಪಲ್ಲತ್ತಡ್ಕ : ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ – ಗೀತ ಸಾಹಿತ್ಯ ಸಂಭ್ರಮ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದೆ. ಫೆ.20 ರಂದು ಬೆಳಗ್ಗೆಯಿಂದ ಹಸಿರುವಾಣಿ ಸಮರ್ಪಣೆ ನಡೆದು ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ತಂತ್ರಿಗಳ ಸ್ವಾಗತ ಕಾರ್ಯಕ್ರಮ, ಹಾಗೂ ರಾತ್ರಿ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7:30 ರಿಂದ ವಿಠಲ...
Loading posts...

All posts loaded

No more posts

error: Content is protected !!