Ad Widget

ಸುಬ್ರಹ್ಮಣ್ಯ : ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ

ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ “ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ” ಎಂಬ ವಿನೂತನ ಯೋಜನೆಯಡಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಲ್ಲಿ ಫೆ.18 ರಂದು ರಂದು ಅಂಬಿಕಾ ಸ್ತೀ ಶಕ್ತಿ ಗೊಂಚಲಿನ ಅದ್ಯಕ್ಷೆ ಶ್ರೀಮತಿ ಶೈಲಜಾ ರವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಾಯಿ ಮಗುವಿನ ಆರೋಗ್ಯ ಸಲಹೆಗಳನ್ನು ನೀಡಿದರು. ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ವಿಜಯ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಯೋಜನೆಯ ಉದ್ದೇಶ ಮತ್ತು ಸೌಲಭ್ಯಗಳನ್ನು ಸವಿವರವಾಗಿ ತಿಳಿಸಿದರು.. ಅಂಗನವಾಡಿ ಕಾರ್ಯಕರ್ತೆಯರಾದ ಸುಗುಣ ನಿರೂಪಿಸಿ ವಿಶಾಲಾಕ್ಷಿ ಪ್ರಾರ್ಥಿಸಿದರು. ಕಾರ್ಯಕರ್ತೆ ಧರ್ಮಾವತಿ ಸ್ವಾಗತಿಸಿ ದೀಪಿಕಾ ವಂದಿಸಿದರು. ಮಕ್ಕಳ ತಾಯಂದಿರು ,ಬಾಲ ವಿಕಾಸ ಸಮಿತಿಯವರು, ಸ್ತೀ ಶಕ್ತಿ ಸದಸ್ಯರು , ಹಿರಿಯ ನಾಗರಿಕರು ಹಾಜರಿದ್ದು ಆಗಮಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಅಂಗನವಾಡಿ ಸಹಾಯಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!