ಕಾಂಕ್ರೀಟೀಕರಣಗೊಂಡ ಬಾಕಿಲ- ಪೈಕ ರಸ್ತೆಯ ಉದ್ಘಾಟನೆ

ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಗುತ್ತಿಗಾರು ಗ್ರಾಮದ ಬಾಕಿಲ-ಪೈಕ ರಸ್ತೆಯ ಕಾಂಕ್ರೀಟೀಕರಣದ ಉದ್ಘಾಟನೆಯನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಪ್ರಮುಖರಾದ ವೆಂಕಟ್ ದಂಬೆಕೋಡಿ, ವರ್ತಕರ ಸಂಘದ ಅಧ್ಯಕ್ಷ ವಿನ್ಯಾಸ್ ಕೊಚ್ಚಿ, ಕಿಶೋರ್ ಕುಮಾರ್ ಪೈಕ, ರಾಕೇಶ್ ಮೆಟ್ಟಿನಡ್ಕ, ಜಗದೀಶ್ ಪೈಕ, ಅಚ್ಯುತ ಗುತ್ತಿಗಾರು,...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 959196919714/07/2026 ಮಂಗಳವಾರ*01,🐏ಮೇಷರಾಶಿ🐏*📃, ಈ ರಾಶಿಯವರು ವ್ಯಾಪಾರ ಮಾಡುವರಾಗಿದ್ದರೆ. ಇಂದು ಉತ್ತಮ ದಿನವಾಗಲಿದೆ. ಸಣ್ಣ ವಿಷಯವನ್ನು ಬೆನ್ನಟ್ಟುವುದಕ್ಕಿಂತ ದೊಡ್ಡ ಅವಕಾಶದ ಬಗ್ಗೆ ಯೋಚಿಸುವುದು ಉತ್ತಮ. ಇಲ್ಲದಿದ್ದರೆ ಅವರು ತಪ್ಪಿನ ಭಾರವನ್ನು ಅನುಭವಿಸಬೇಕಾಗುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಗಳಿಸಲು ಸಾಧ್ಯವಾಗುತ್ತದೆ,ಗಮನಿಸಿ:-...
Ad Widget

ಕಲ್ಲಪಣೆ ಸಾರಕೆರೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕಲ್ಲಪಣೆ ಸಾರಕೆರೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 10 ಲಕ್ಷ ಮಂಜೂರಾಗಿತ್ತು. ಈ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮ ಜು.12 ರಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಉಪಾಧ್ಯಕ್ಷ, ಬೆಳ್ಳಾರೆ ಪಿಎಸಿಎಸ್ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಹಿತ್...

ಚೆಂಬು: ಕೃಷಿಗೆ ನಿರಂತರ ಆನೆಗಳ ಹಿಂಡು ದಾಳಿ – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ಚೆಂಬು ಗ್ರಾಮದ ಊರುಬೈಲು ಹಾಗೂ ಮತ್ತಿತರ ಕಡೆಗಳಲ್ಲಿ ಕೃಷಿಗೆ ನಿರಂತರ ಆನೆಗಳ ಹಿಂಡು ದಾಳಿ ಹಾನಿ ಮಾಡುತ್ತಿದ್ದ ಹಿನ್ಬೆಲೆಯಲ್ಲಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟಲಾಯಿತು. ಈ ಕಾರ್ಯಾಚರಣೆಯಲ್ಲಿ ಡಿಆರ್ ಎಪ್ಓ ಸುರೇಶ್, ಇಟಿಎಫ್‌ಡಿ ಆರ್‌ಎಪ್ಓ ರಿಶಾ ಪಾರ್ವತಿ, ಬೀಟ್ ಪಾರೆಸ್ಟ್ ಕಾರ್ತಿಕ್, ಯಮನುರಿ, ಆರ್‌ಆರ್‌ಟಿ ಟೀಮ್ ಸಂಪಾಜೆ ಮತ್ತು ಮಡಿಕೇರಿಯ ಇಟಿಎಫ್...

ಬೆಳ್ಳಾರೆ: ಟೌನ್ ರೋಟರಿ ಕ್ಲಬ್ ವತಿಯಿಂದ ಮರ್ದೂರಡ್ಕ ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ವತಿಯಿಂದ ಎಡಮಂಗಲ ಗ್ರಾಮದ ಮರ್ದೂರಡ್ಕ ಸ.ಕಿ.ಪ್ರಾ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜು. 1ರಂದು ನಡೆಯಿತು.ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಆರೀಫ್ ಬಿ.ಎಂ. ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಪ್ರಶಾಂತ್ ತಂಟೆಪ್ಪಾಡಿ, ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ...

ಬೆಳ್ಳಾರೆ: ಟೌನ್ ರೋಟರಿ ಕ್ಲಬ್ ವತಿಯಿಂದ ನೂಜಿಬಾಳ್ತಿಲ ಮರಿಯಾಲಮ್ ಸೋಶಿಯಲ್ ಸೆಂಟರಿನ ವೃದ್ಧರಿಗೆ ಆಹಾರ ವಿತರಣೆ

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ವತಿಯಿಂದ ಕಡಬ ತಾಲೂಕು ನೂಜಿಬಾಳ್ತಿಲ ಮರಿಯಾಲಂ ಸೋಶಿಯಲ್ ಸೆಂಟರಿನ ವೃದ್ಧರಿಗೆ ಮಧ್ಯಾಹ್ನದ ಆಹಾರವನ್ನು ಜು. 1ರಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಆರೀಫ್ ಬಿ.ಎಂ., ಕಾರ್ಯದರ್ಶಿ ಪ್ರಶಾಂತ್ ತಂಟೆಪ್ಪಾಡಿ, ರೋ ವಿನಯ್ ಕುಮಾರ್, ರೋ ಎ.ಕೆ. ಮಣಿಯಾಣಿ, ರೋ ರವೀಂದ್ರ ಮರಕ್ಕಡ, ರೋ ಅಬ್ದುಲ್...

ನಿಧನ : ಚಂದ್ರಶೇಖರ ನೂಚಿಲ

ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ವಾರಿಜಾಕ್ಷಿ ರವರ ಪತಿ ಚಂದ್ರಶೇಖರ ನೂಚಿಲ ರವರು ಇಂದು(ಜು.13) ನಿಧನರಾಗಿದ್ದು, ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ಡಿ ರೇವಣ್ಣ ಭೇಟಿ – ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿ

ಸುಬ್ರಹ್ಮಣ್ಯ ಜುಲೈ 13 : ರಾಜ್ಯ ಸರಕಾರದ ಮಾಜಿ ಸಚಿವ ಎಚ್.ಡಿ ರೇವಣ್ಣ ಇಂದು ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿಯಾಗಿ, ಮಹಾಮಂಗಳಾರತಿ ವೀಕ್ಷಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ನಂತರ ಭೋಜನ ಪ್ರಸಾದ ಸ್ವೀಕರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ರೇವಣ್ಣ...

ಯೇನೆಕಲ್ಲಿನಲ್ಲಿ ಒಕ್ಕಲಿಗ ಗೌಡರ ಮಹಾ ಅಭಿಯಾನ

ಸುಬ್ರಹ್ಮಣ್ಯ ಜುಲೈ 13 : ಒಕ್ಕಲಿಗ ಗೌಡ ಸೇವಾ ಸಂಘ(ರಿ.) ಕಡಬ ತಾಲೂಕು ಇದರ ಸುಬ್ರಹ್ಮಣ್ಯ ವಲಯದ ಏನೆಕಲ್ಲು ಗ್ರಾಮದ ಒಕ್ಕಲಿಗ ಗೌಡರ ಮಹಾ ಅಭಿಯಾನ ಕಾರ್ಯಕ್ರಮ ರವಿವಾರ ಯೇನೆಕಲ್ಲಿನಲ್ಲಿ ನಡೆಯಿತು.  ಈ ಅಭಿಯಾನದಲ್ಲಿ ಏನೆಕಲ್ಲು ಗ್ರಾಮದ ಮುತ್ಲಾಜೆ ಬೈಲು, ಕಲ್ಕುದಿ ಬೈಲು, ಕರ್ನಾಜೆ ಕಿಬ್ಬೊಡಿ ಬೈಲು, ಮಲ್ಲಾರ ಮಾದನಮನೆ ಬೈಲು, ಕೋಟಿ ಗೌಡನ ಮನೆ...

ಜು.15ರಂದು ಸುಳ್ಯದಲ್ಲಿ ಬಂಜೆತನ ಕುರಿತು ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ

ಸುಳ್ಯ, ಜು.13: ಲಯನ್ಸ್ ಕ್ಲಬ್ ಸುಳ್ಯದ ಸಹಯೋಗದಲ್ಲಿ ಬಂಜೆತನ ಕುರಿತು ಉಚಿತ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ಜು. 15ರಂದು ಸುಳ್ಯದ ಲಯನ್ಸ್ ಸೇವಾ ಸದನ, ಜೂನಿಯರ್ ಕಾಲೇಜು ರಸ್ತೆಯಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಬಂಜೆತನ ತಜ್ಞರು ಉಚಿತ ಸಮಾಲೋಚನೆ ನೀಡಲಿದ್ದು, ದಂಪತಿಗಳ ಬಂಜೆತನಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ...
Loading posts...

All posts loaded

No more posts

error: Content is protected !!