ಜು.15ರಂದು ಸುಳ್ಯದಲ್ಲಿ ಬಂಜೆತನ ಕುರಿತು ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ

ಸುಳ್ಯ, ಜು.13: ಲಯನ್ಸ್ ಕ್ಲಬ್ ಸುಳ್ಯದ ಸಹಯೋಗದಲ್ಲಿ ಬಂಜೆತನ ಕುರಿತು ಉಚಿತ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ಜು. 15ರಂದು ಸುಳ್ಯದ ಲಯನ್ಸ್ ಸೇವಾ ಸದನ, ಜೂನಿಯರ್ ಕಾಲೇಜು ರಸ್ತೆಯಲ್ಲಿ ಆಯೋಜಿಸಲಾಗಿದೆ.

. . . . . . . . .

ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಬಂಜೆತನ ತಜ್ಞರು ಉಚಿತ ಸಮಾಲೋಚನೆ ನೀಡಲಿದ್ದು, ದಂಪತಿಗಳ ಬಂಜೆತನಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಪ್ರಾಥಮಿಕ ವೈದ್ಯಕೀಯ ಮಾರ್ಗದರ್ಶನ ಒದಗಿಸಲಿದ್ದಾರೆ.

. . . . . . .

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೂ ಯಶಸ್ಸು ಸಿಗದವರು, ಪದೇ ಪದೇ ಗರ್ಭಪಾತವಾಗುತ್ತಿರುವವರು, ಐಯುಐ ಅಥವಾ ಐವಿಎಫ್ ಚಿಕಿತ್ಸೆಗಳು ವಿಫಲವಾದವರು, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭಧಾರಣೆ ಸಾಧ್ಯವಾಗದವರು, ವೀರ್ಯಾಣುಗಳ ಸಂಖ್ಯೆ ಕಡಿಮೆ ಅಥವಾ ವೀರ್ಯಾಣು ಇಲ್ಲದಿರುವ ಸಮಸ್ಯೆ ಎದುರಿಸುತ್ತಿರುವವರು, ಪಿಸಿಓಎಸ್, ಫೆಲೋಪಿಯನ್ ನಾಳದ ಅಡಚಣೆ, ಎಂಡೋಮೆಟ್ರಿಯಾಸಿಸ್, ಗರ್ಭಾಶಯದ ಫೈಬ್ರಾಯ್ಡ್ ಸೇರಿದಂತೆ ವಿವಿಧ ಸಮಸ್ಯೆಗಳಿರುವವರು ಹಾಗೂ ದ್ವಿತೀಯ ವೈದ್ಯಕೀಯ ಅಭಿಪ್ರಾಯ ಬಯಸುವವರು ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ.

ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮುಂಗಡ ಅಪಾಯಿಂಟ್‌ಮೆಂಟ್‌ಗಾಗಿ 9611693232, 9483113930 ಸಂಖ್ಯೆಗೆ ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading