ಅರಂಬೂರು : ಕಾರು ಹಾಗೂ ಬೈಕ್ ಅಪಘಾತ – ಸವಾರನಿಗೆ ಗಾಯ

ಅರಂಬೂರು ಸಮೀಪ ಅಲ್ಟೋ ಕಾರು ಹಾಗೂ ಬೈಕ್ ನಡುವೆ ಇದೀಗ ಅಪಘಾತ ಸಂಭವಿಸಿದ್ದು ಬೈಕ್ ಸವಾರನ ತಲೆಗೆ ಗಾಯವಾಗಿದೆ ಎನ್ನಲಾಗಿದೆ. ಅರಂಬೂರು ತೂಗುಸೇತುವೆ ಕಡೆಗೆ ಕಾರು ತಿರುಗುತ್ತಿದ್ದಾಗ ಪೆರಾಜೆ ಕಡೆಯಿಂದ ಬಂದ ಬೈಕ್ ಢಿಕ್ಕಿಯಾಗಿದೆ ಎನ್ನಲಾಗಿದೆ. ಹೆಚ್ಚಿನ ವಿವರ ಲಭ್ಯವಾಗಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ನೇಮಕ ಪ್ರಶ್ನೆಸಿ ಸಲ್ಲಿಸಿದ ಅರ್ಜಿ ವಜಾ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ನೇಮಕ ಹಾಗೂ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ಆಕಾಶ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇವತ್ತು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲ ವಿವೇಕ್ ರೆಡ್ಡಿರವರು ವಾದ ಮಂಡನೆ ಮಾಡುತ್ತಾ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಕಾನೂನಿನ ನಿಯಮವನ್ನು ಉಲ್ಲಂಘಿಸಿ...
Ad Widget

ಇಂದಿನ(ಜುಲೈ 16) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಧಾರಣೆಯಲ್ಲಿ ಇಂದು ಮತ್ತೆ ಏರಿಕೆ..! ; ಅಡಿಕೆ, ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಸಂಪೂರ್ಣ ಸ್ಥಿರ…!! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 16 ಜುಲೈ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಬೆಳ್ಳಾರೆ- ಜು 17 ರಂದು ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ

ಬೆಳ್ಳಾರೆ ಗ್ರಾಮದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮವು ಬೆಳ್ಳಾರೆಯ ನೆಟ್ಟಾರಿನ ಭ್ರಾಮರಿ ಭಜನಾ ಮಂಡಳಿಯವರಿಂದ ಜು 17 ರಂದು ಸಂಜೆ 6 ರಿಂದ 8 ರವರೆಗೆ ನಡೆಯಲಿದೆ.ನಂತರ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಸಂಪಾಜೆ : ಎಸ್. ಐ. ಆರ್ ಮಾಹಿತಿ ಕೇಂದ್ರಕ್ಕೆ ಜಿ. ಪಂ. ಉಪ ಕಾರ್ಯದರ್ಶಿ ಜಯಲಕ್ಷ್ಮಿ ಭೇಟಿ

ಸಂಪಾಜೆ ಗ್ರಾ.ಪಂ. ನ ಎಸ್. ಐ. ಆರ್ ಮಾಹಿತಿ ಕೇಂದ್ರಕ್ಕೆ ಜಿ. ಪಂ. ಉಪ ಕಾರ್ಯದರ್ಶಿ ಜಯಲಕ್ಷ್ಮಿ ಭೇಟಿ ನೀಡಿ ಪರಿಶೀಲಿಸಿದರು. ಬಿ ಎಲ್ ಓ ಹಾಗೂ ಬಿ ಎಲ್ ಎ ಗಳಿಗೆ ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುಳ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ರಾಜಣ್ಣ,...

ಬೆಳ್ಳಾರೆ : ವಿರಾಟ್ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.ಅಧ್ಯಕ್ಷರಾಗಿ ದಾಮೋದರ್ ತಡಗಜೆ, ಉಪಾಧ್ಯಕ್ಷರಾಗಿ ಸನತ್ ಕಲ್ಲೋಣಿ,ಕಾರ್ಯದರ್ಶಿಯಾಗಿ ಶೈಲೇಶ್ ಕೋಡಿಬೈಲು, ಖಜಾಂಜಿಯಾಗಿ ಜೀವನ್ ತಡಗಜೆ ಆಯ್ಕೆಯಾಗಿದ್ದಾರೆ.

ಕೇಪಣ್ಣ ಗೌಡ ಪರಿವಾರ ನಿಧನ

ಆಲೆಟ್ಟಿ ಗ್ರಾಮದ ಪರಿವಾರ ಕುಟುಂಬದ ಹಿರಿಯರಾದ ಕೇಪಣ್ಣ ಗೌಡ ಸ್ವಗೃಹದಲ್ಲಿ ಜು.16 ರಂದು ನಿಧನರಾದರು. ಮೃತರು ಪತ್ನಿ ಮೋಹಿನಿ ಪುತ್ರ ಪುರುಷೋತ್ತಮ, ಪುತ್ರಿ ಶೀಲಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಎಸ್.ಐ.ಆರ್ ಕಾರ್ಯಕ್ಕಾಗಿ ಹಗ್ಗದ ಮೂಲಕ ಹೊಳೆ ದಾಟಿದ ಬಿ.ಎಲ್.ಓ – ಕರ್ತವ್ಯ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು – ಶಾಶ್ವತ ಸೇತುವೆ ಇಲ್ಲದೇ ಸ್ಥಳೀಯರ ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗ

ವರದಿ : ಉಲ್ಲಾಸ್ ಕಜ್ಜೋಡಿಕರ್ನಾಟಕ ರಾಜ್ಯದಾದ್ಯಂತ ಇದೀಗ ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು “ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ(ಎಸ್.ಐ.ಆರ್)” ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ಮತದಾರರ ಹೆಸರು, ವಯಸ್ಸು, ವಿಳಾಸ ಹಾಗೂ ಕುಟುಂಬದ ವಿವರಗಳನ್ನು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುವ ಕಡ್ಡಾಯ ಪ್ರಕ್ರಿಯೆ ಇದಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು(ಬಿ.ಎಲ್.ಒ) ಮನೆ-ಮನೆಗೆ ತೆರಳಿ ಎನ್ಯೂಮರೇಷನ್...

ಸುಳ್ಯದ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ “ಸ್ವರ್ಣಂ ವಿಶೇಷ” ಆಫರ್ ಆರಂಭ ; ಚಿನ್ನಾಭರಣ ಖರೀದಿಗೆ ವಿಶೇಷ ರಿಯಾಯಿತಿ

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಗ್ರಾಹಕರಿಗಾಗಿ “ಸ್ವರ್ಣಂ ವಿಶೇಷ” ಹೆಸರಿನ ವಿಶೇಷ ಆಫರ್ ಆರಂಭಗೊಂಡಿದೆ. ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳನ್ನು ಪರಿಚಯಿಸುತ್ತಿರುವ ಸ್ವರ್ಣಂ ಜ್ಯುವೆಲ್ಸ್, ಈ ಬಾರಿ “ಸ್ವರ್ಣಂ ವಿಶೇಷ” ಆಯೋಜನೆಯ ಮೂಲಕ ಚಿನ್ನಾಭರಣ ಖರೀದಿದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಈ ವಿಶೇಷ ಆಫರ್...

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ : ಸ್ಥಾಪನಾ ದಿನಾಚರಣೆ

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇದರ 54ನೇ ವರ್ಷದ ಸ್ಥಾಪನಾ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 14ರಂದು ನಡೆಯಿತು. ಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ(ರಿ.) ಕುಕ್ಕುಜಡ್ಕ ಇದರ ಅಧ್ಯಕ್ಷರಾದ ನಿರಂಜನ್ ಕೊಡ್ತುಗುಳಿ ಇವರು ಮಾತನಾಡಿ "ಶಾಲೆಯ ಭವ್ಯ ಇತಿಹಾಸದ ಪುಟಗಳನ್ನು ತೆರೆದಾಗ ಅತ್ಯಂತ ಹೆಮ್ಮೆ ಎನಿಸುವಂತಹ...
Loading posts...

All posts loaded

No more posts

error: Content is protected !!