ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ : ಸ್ಥಾಪನಾ ದಿನಾಚರಣೆ

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇದರ 54ನೇ ವರ್ಷದ ಸ್ಥಾಪನಾ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 14ರಂದು ನಡೆಯಿತು. ಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ(ರಿ.) ಕುಕ್ಕುಜಡ್ಕ ಇದರ ಅಧ್ಯಕ್ಷರಾದ ನಿರಂಜನ್ ಕೊಡ್ತುಗುಳಿ ಇವರು ಮಾತನಾಡಿ “ಶಾಲೆಯ ಭವ್ಯ ಇತಿಹಾಸದ ಪುಟಗಳನ್ನು ತೆರೆದಾಗ ಅತ್ಯಂತ ಹೆಮ್ಮೆ ಎನಿಸುವಂತಹ ಕಾರ್ಯಗಳು ಈ ಶಾಲೆಯಲ್ಲಿ ನಡೆದಿದೆ, ಅತ್ಯುತ್ತಮವಾಗಿ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಎಲ್ಲರ ಸಹಕಾರ ಅಗತ್ಯ” ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಪಂಜ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್ ಕಾನತ್ತೂರ್ ಮಾತನಾಡಿ “ನಾವು ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಅನೇಕ ಸಂಕಷ್ಟಗಳು ಇದ್ದರೂ ಅದನ್ನು ಮೆಟ್ಟಿ ನಿಂತು ಈ ಹಂತಕ್ಕೆ ಬಂದು ತಲುಪಲು ಈ ಶಾಲೆ ಕೊಟ್ಟಂತಹ ಜೀವನದ ಮೌಲ್ಯ ಕಾರಣ. ಪೋಷಕರು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು, ಜೀವನದಲ್ಲಿ ಸಂಸ್ಕಾರಯುತ ಮೌಲ್ಯಗಳು ನಿಮ್ಮ ಮಕ್ಕಳಿಗೆ ಬೆಳೆಸುವಂತೆ ಪ್ರೇರೇಪಿಸಿ” ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ಥಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪುತ್ತೂರು ಇಲ್ಲಿಯ ಡೀನ್ ಆಗಿರುವ ಶ್ರೀಮತಿ ವಿಜಯ ಸರಸ್ವತಿ ಬಿ ಇವರು ಮಾತನಾಡಿ “ನನ್ನ ಶಾಲೆ ನನಗೆ ಕೊಟ್ಟಂತಹ ಜೀವನದ ಪ್ರೀತಿ, ಮೌಲ್ಯಗಳು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನಗೆ ಕಲಿಸಿಕೊಟ್ಟಂತಹ ಗುರುಗಳನ್ನು ಅವರು ಕೊಟ್ಟಂತಹ ಜೀವನದ ಮೌಲ್ಯಗಳು ಜೀವಂತವಾಗಿ ನನ್ನ ಹೃದಯದಲ್ಲಿ ಎಂದಿಗೂ ಇದೆ. ಶಾಲೆಯ ವಿದ್ಯಾರ್ಥಿಗಳು ದೈವ ಪ್ರೀತಿ, ಪಾಪ ಭೀತಿ, ಸಂಘ ನೀತಿ ಇವುಗಳನ್ನು ಜೀವನದಲ್ಲಿ ಅಳವಡಿಸಿ ಉತ್ತಮ ಪ್ರಜೆಗಳಾಗಿ ಬಾಳಿ, ಶಾಲೆಯ ಹೆಸರನ್ನು ಉಳಿಸಿ” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ, ಲಕ್ಷ್ಮೀಶ ಚೊಕ್ಕಾಡಿಯವರ 3ನೆಯ ಕವನ ಸಂಕಲನ ‘ನುಡಿಗಿಡಿದ ಮೌನ’ ವನ್ನು ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳೂ, ಸಾಹಿತಿಗಳೂ ಆದ ವೈ.ಎಸ್ ಹರಗಿಯವರು ಮಾತನಾಡಿ, “ಈ ಶಾಲೆಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಬಂದು ಹಿರಿಯ ಸಾಹಿತಿಗಳ ಪುಸ್ತಕ ಬಿಡುಗಡೆ ಮಾಡಿದ್ದು ಅತ್ಯಂತ ಖುಷಿಯ ವಿಚಾರವಾಗಿದ್ದು ಈ ಚೊಕ್ಕಾಡಿ ಮಣ್ಣಿಗೆ ಕಾವ್ಯತ್ವದ ಗುಣವಿದೆ” ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಸುಪ್ರೀತ್ ಮೋಂಟಡ್ಕ ಅವರು ಮಾತನಾಡಿ, “ಶಾಲೆಯ ಸ್ಥಾಪನೆಯ ಉದ್ದೇಶ ಅದರ ಹಿನ್ನೆಲೆ ಹಾಗೂ ಊರಿನ ಸಹೃದಯಿ ಜನರು ಪಟ್ಟಂತಹ ಪರಿಶ್ರಮ ಬಗ್ಗೆ ಹಾಗೂ ನಮ್ಮ ವಿದ್ಯಾಸಂಸ್ಥೆಯ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸೋಣ” ಎಂದರು.

. . . . . . . . .

ವೇದಿಕೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸ್ಕಾಲರ್ಶಿಪ್‌ಗೆ ಆಯ್ಕೆಯಾದ ಕುಮಾರಿ ಪ್ರೇಕ್ಷಾ ಪಿ.ಜೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲೆಯ ನಿವೃತ್ತ ಹಿರಿಯ ಕನ್ನಡ ಪಂಡಿತರಾದ ಲಕ್ಷ್ಮೀಶ ಚೊಕ್ಕಾಡಿ ಅವರ ಎಪ್ಪತ್ತೈದನೇ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು.

. . . . . . .

ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಖಜಾಂಜಿ ಜಗನ್ನಾಥ ಹಿರಿಯಡ್ಕ, ನಿರ್ದೇಶಕರಾದ ಆನಂದ ಚಿಲ್ಪಾರು, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭವ್ಯ.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿರುವ ತೇಜಸ್ವಿ ಕಡಪಳರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ,

ಜತೆ ಕಾರ್ಯದರ್ಶಿಯಾಗಿರುವ ತಿಮ್ಮಪ್ಪ ಗೌಡ ಕೊಂಡೆಬಾಯಿಯವರು ಧನ್ಯವಾದಗೈದರು. ಶಾಲಾ ಶಿಕ್ಷಕಿಯಾಗಿರುವ ಸಂಧ್ಯಾ ಕುಮಾರಿಯವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಎಲ್ಲ ಸದಸ್ಯರು, ಚೊಕ್ಕಾಡಿ ಪ್ರೌಢಶಾಲೆಯ ಹಿರಿಯ ಶಿಕ್ಷಕರು, ಊರಿನ ವಿದ್ಯಾಭಿಮಾನಿಗಳು, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading