ಗುತ್ತಿಗಾರಿನಲ್ಲಿ ಶ್ರೀ ಮಂಜುನಾಥ ಫ್ಲೈವುಡ್ & ಗ್ಲಾಸ್ ವರ್ಕ್ ಶುಭಾರಂಭ

ಗುತ್ತಿಗಾರಿನ ಪಿಪಿಜಿ ಕಾಂಪ್ಲೆಕ್ಸ್‌ನಲ್ಲಿ ಸುಬ್ರಹ್ಮಣ್ಯ ಕಡ್ತಲ್‌ಕಜೆ ಮಾಲಕತ್ವದ ಶ್ರೀ ಮಂಜುನಾಥ ಪ್ಲೈವುಡ್ & ಗ್ಲಾಸ್ ವರ್ಕ್ ಮಾ.10 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಪೂಜಾ ಕಾರ್ಯಕ್ರಮದೊಂದಿಗೆ ನೂತನ ಸಂಸ್ಥೆ ಶುಭಾರಂಭಗೊಂಡಿತು. ಗುತ್ತಿಗಾರು ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ವರ್ತಕ ಸಂಘದ ಅಧ್ಯಕ್ಷ ಶಿವರಾಮ...

ಕಥೆ : ಸಮಯ ಬದುಕನ್ನೇ ಬದಲಾಯಿಸುತ್ತದೆ…

ಅದೊಂದು ಸಮಯವಿತ್ತು ಅವನ ಬಳಿ ಎಲ್ಲವೂ ಇತ್ತು, ಎಲ್ಲರೂ ಇದ್ದರು. ಆದರೆ ಸಮಯ ತನ್ನ ದಿಕ್ಕನ್ನು ಬದಲಿಸಿತು, ಸಮಯದ ದಿಕ್ಕು ಬದಲಾದಂತೆ ಅವನ ಬದುಕು ಸಹ ಬದಲಾಯಿತು. ಎಲ್ಲವೂ, ಎಲ್ಲರೂ ಇದ್ದ ಅವನ ಬದುಕಿನಲ್ಲಿ ಏನೂ ಇಲ್ಲದಂತಾಯಿತು, ಎಲ್ಲರೂ ಅವನಿಂದ ದೂರವಾಗಿದ್ದರು. ಅವನು ದಾರಿ ತೋಚದೇ ಏಕಾಂಗಿಯಾಗಿ ಮುನ್ನಡೆಯುತ್ತಿದ್ದ. ಅವನು ನಡೆದ ಆ ದಾರಿಯು ಶಬ್ದಗಳಿಲ್ಲದೇ...
Ad Widget

ಅಡ್ಡಬೈಲು: ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಸಚಿವರಿಂದ ಚಾಲನೆ

ಸುಳ್ಯ ತಾಲೂಕಿನ ಬೋಗಾಯನಕೆರೆ-ಎಣ್ಣೆಮಜಲು-ಕೊನ್ನಡ್ಕ-ಬೀದಿಗುಡ್ಡೆ-ಅಡ್ಡಬೈಲು ಸಂಪರ್ಕ ರಸ್ತೆಯ ಫಲಾನುಭವಿಗಳ ಅಪೇಕ್ಷೆಯ ಮೇರೆಗೆ ಸಚಿವರಾದ ಎಸ್. ಅಂಗಾರರವರ ವಿಶೇಷ ಮುತುವರ್ಜಿಯಲ್ಲಿ ಈ ಮಾರ್ಗದಲ್ಲಿ ಪ್ರಾರಂಭಗೊಂಡ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಸಚಿವರು ಇಂದು ಅಡ್ಡಬೈಲಿನಲ್ಲಿ ಚಾಲನೆ ನೀಡಿದರು.

ಮರಕತ : ನೂತನ ಸೇತುವೆ ಉದ್ಘಾಟನೆ ನೆರವೇರಿಸಿದ ಸಚಿವರಾದ ಎಸ್. ಅಂಗಾರ

ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಕೇಂದ್ರ ಸರಕಾರದ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ರೂ.6.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು, ಸೇತುವೆಯನ್ನು ಸಚಿವರಾದ ಎಸ್. ಅಂಗಾರರವರು ಇಂದು ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ. ಕೃ.ಪತ್ತಿನ...

ಬೆಳ್ಳಾರೆ : ಅಜಪಿಲ ಒತ್ತೆಕೋಲದ ಆಮಂತ್ರಣ ಬಿಡುಗಡೆ

ಬೆಳ್ಳಾರೆಯ ಅಜಪಿಲದಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಏಪ್ರಿಲ್ 7,8ರಂದು ನಡೆಯುವ ಒತ್ತೆಕೋಲದ ಆಮಂತ್ರಣವನ್ನು ಮಾರ್ಚ್ 12 ರಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ , ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ವಸಂತ ಗೌಡ ಪಡ್ಪು, ಜತೆ ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೇಲು,...

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಹಾಸಭೆ

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ 2022ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆಯಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ವಾರ್ಷಿಕ ವರದಿಯನ್ನು ವಾಚಿಸಿದರು. ಬಳಿಕ ಶಾಲಾ ವಾರ್ಷಿಕ ಬಜೆಟ್ ಮತ್ತು ಆಡಿಟ್ ವರದಿಯನ್ನು ಮಂಡಿಸಲಾಯಿತು. ನಂತರ 1023ನೇ ಸಾಲಿನ ಆಡಳಿತ ಮಂಡಳಿಯ...

ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸುಳ್ಯ ತಾಲೂಕಿನ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್, ಗ್ರಾಮ ಪಂಚಾಯತ್ ಗುತ್ತಿಗಾರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಗುಂಡಡ್ಕ ಕಾಲನಿಯಲ್ಲಿ ನಡೆಯಿತು.ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಮುಕುಂದ ಕಾರ್ಯಕ್ರಮ ಉದ್ಘಾಟಿಸಿದರು. ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ...

ಮಾ.19-20: ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವದ ನೇಮೋತ್ಸವ; ಗೊನೆ ಮುಹೂರ್ತ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20ರಂದು ವಿಜೃಂಭಣೆಯಿಂದ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.ಬೆಳಿಗ್ಗೆ ದುಗ್ಗಲಾಯ ದೈವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ನೇಮೋತ್ಸವ ಯಶಸ್ವಿಯಾಗಿ ನಡೆಯಲೆಂದು ಪ್ರಾರ್ಥಿಸಿ ಅವರ ತೋಟದಿಂದ ಮುಹೂರ್ತದ ಗೊನೆ ಕಡಿದು ದೈವಸ್ಥಾನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಸುಂದರ...

ಮಾ.14 ರಂದು ಉಜಿರಡ್ಕ ಸ್ವಾಮಿ ಕೊರಗಜ್ಜ ದೈವಸಾನಿಧ್ಯದಲ್ಲಿ ಅಗೇಲು ಸೇವೆ

ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವಸಾನಿಧ್ಯದಲ್ಲಿ ಮಾ.14 ರಸಂಕ್ರಮಣದಂದು ಕೊರಗಜ್ಜನಿಗೆ ಅಗೇಲು ಸೇವೆ ನಡೆಯಲಿದೆ. ಅಲ್ಲದೆ ಪ್ರತಿ ಮಂಗಳವಾರ ಪ್ರಶ್ನಾ ಚಿಂತ‌ನೆ ಮತ್ತು ಪ್ರಾರ್ಥನೆ ನಡೆಯಲಿದೆ. ಅಮವಾಸ್ಯೆ ದಿನ ವಿಶೆಷ ಕೊರಗಜ್ಜನಿಗೆ ವಿಶೇಷ ಪ್ರಾರ್ಥನೆ ಇರುವುದು. ಕೊರಗಜ್ಜನಿಗೆ ಅಗೇಲು ಸೇವೆ ಮಾಡಿಸುವವರು 2 ದಿನ ಮುಂಚಿತವಾಗಿ ತಿಳಿಸಬೇಕಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ತೊಡಿಕಾನ : ದೊಡ್ಡಕುಮೇರಿಯಲ್ಲಿ ಮೊಗೇರ್ಕಳ ಹಾಗೂ ಕೊರಗಜ್ಜ ದೈವದ ನೇಮೋತ್ಸವ

ತೊಡಿಕಾನ ಗ್ರಾಮದ ದೊಡ್ಡಕುಮೇರಿಯಲ್ಲಿ ದೈವಸ್ಥಾನದ ಬ್ರಹ್ಮಕಲಶದ ಬಳಿಕ ಪ್ರಥಮ ಬಾರಿಗೆ ಗುಳಿಗ ದೈವ , ಮೊಗೇರ್ಕಳ ದೈವಗಳು , ತನ್ನಿಮಾನಿಗ ಹಾಗೂ ಕೊರಗ ತನಿಯ ದೈವಗಳ ನೇಮೋತ್ಸವ ಮಾರ್ಚ್ 11 ಮತ್ತು 12 ರಂದು ನಡೆಯಿತು. ಮಾ. 10 ರಂದು ಹಸಿರುಕಾಣಿಕೆ ನಡೆಯಿತು, ಮಾ. 11 ರಂದು ಬೆಳಿಗ್ಗೆ ಗಣಹೋಮ , ಸ್ಥಳಶುದ್ದಿ , ಶುದ್ದಿಕಲಶ...
Loading posts...

All posts loaded

No more posts

error: Content is protected !!