ಕೆ. ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ 1991-92ನೇ ಬ್ಯಾಚ್‌ನ ಹಳೆವಿದ್ಯಾರ್ಥಿಗಳಿಂದ ಸ್ಮಾರ್ಟ್ ಬೋರ್ಡ್ ಕೊಡುಗೆ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ರೊಮ್ ಉದ್ಘಾಟಣಾ ಕಾರ್ಯಕ್ರಮವು ಮಾ.೧೧ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ.ಸಿ.ಇ.ಯ ಹೆಮ್ಮೆಯ 1991-92ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳಾದ ಶಂಕರ್ ದಯಾಳ್ ಹಾಗೂ ಶರತ್ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಉದ್ಘಾಟಕರಾಗಿ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ನೆರವೇರಿಸಿದರು. ಅವರು ಮಾತನಾಡಿ ಹಳೆ ವಿದ್ಯಾರ್ಥಿಗಳು ಕಾಲೇಜಿನ ಆಸ್ತಿ. ಕಾಲೇಜು ನೀಡಿದ ನಾಲ್ಕು...

ನಡುಗಲ್ಲು : ಬೀಳ್ಕೊಡುಗೆ ಸಮಾರಂಭ

ಮಾ.10ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಏಳನೇ ತರಗತಿ ವಿದ್ಯಾರ್ಥಿಗಳಿಂದ ವಿದಾಯ ಗೀತೆ, ವಿದ್ಯಾರ್ಥಿಗಳಿಂದ ಅನಿಸಿಕೆ, ಶಿಕ್ಷಕರಿಂದ ಶುಭ ಹಾರೈಕೆಗಳು ಅಧ್ಯಕ್ಷರಿಂದ ಅಭಿನಂದನಾ...
Ad Widget

ನಡುಗಲ್ಲು : ವಿಜ್ಞಾನ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ವಿಜ್ಞಾನ ದಿನಾಚರಣೆಯನ್ನು ಮಾರ್ಚ್ 4 ರಂದು ಆಚರಿಸಲಾಯಿತು ಈ ಕಾರ್ಯಕ್ರಮವನ್ನು ನೋಡಲ್ ಶಿಕ್ಷಕರಾದ ಕುಶಾಲಪ್ಪ ಟಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಉಮೇಶ್ವರಿ ಅವರು ಉಪಸ್ಥಿತರಿದ್ದರು.

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ – ಸಭಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸದಸ್ಯರಾದ ಮುತ್ತಪ್ಪ ಪೂಜಾರಿ, ಶ್ರೀಮತಿ ಕಮಲ ನಾಗಪಟ್ಟಣ,ಮೀನಾಕ್ಷಿ ಆಲೆಟ್ಟಿ ಪ್ರಾ.ಕೃ.ಪತ್ತಿನ...

ಮಡಪ್ಪಾಡಿ : ಬೆಂಕಿಗೆ ಆಹುತಿಯಾಗುತ್ತಿರುವ ಅರಣ್ಯ – ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳೊಂದಿಗೆ ನಾಗರಿಕರ ಸಾಥ್

ಮಡಪ್ಪಾಡಿಯ ಶೀರಡ್ಕ ಭಾಗದಲ್ಲಿ ಅರಣ್ಯಕ್ಕೆ ಬಿದ್ದ ಬೆಂಕಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದ್ದು ರಬ್ಬರ್ ತೋಟದ ಕೃಷಿಕರು ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯವರು ಕಳೆದ ಕೆಲವು ದಿನಗಳಿಂದ ಬೆಂಕಿ ನಂದಿಸಲು ನಿರಂತರವಾಗಿ ಶ್ರಮವಹಿಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲವೆಂದು ತಿಳಿದು ಬಂದಿದೆ. ನೂರಾರು ಎಕರೆಯಷ್ಟು ಹೊತ್ತಿ ಉರಿದ ಹಾಗೆ ಕಾಣಿಸುತ್ತಿದೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ...

ಮರಕತ ಸೇತುವೆ ಲೋಕಾರ್ಪಣೆಗೆ ಸಿದ್ಧ – ಜನರ ಬಹುದಿನದ ಬೇಡಿಕೆ ಈಡೇರಿಕೆ- ಮಾ.13 ರಂದು ಸಚಿವ ಅಂಗಾರರಿಂದ ಉದ್ಘಾಟನೆ

ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನದಿಗೆ ಪಶ್ಚಿಮ ವಾಹಿನಿ ಯೋಜನೆಯಿಂದ ಸುಮಾರು 6.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಮತ್ತು ನಾಲ್ಕೂರು ಮತ್ತು ಏನೆಕಲ್ಲು ಗ್ರಾಮಗಳಿಗೆ ಹೋಗುವ ಸಂಪರ್ಕ ಸೇತುವೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಈ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಮಾ.13 ರಂದು ನಡೆಯಲಿದೆ....

ಜಟ್ಟಿಪಳ್ಳ ದುಗಲಡ್ಕ ರಸ್ತೆ ಕಾಮಗಾರಿ ಶೀಘ್ರ ಆರಂಭ ; ನ.ಪಂ. ಅಧ್ಯಕ್ಷ ವಿನಯ ಕಂದಡ್ಕ

ಜಟ್ಟಿಪಳ್ಳ ಕೊಡಿಯಾಲಬೈಲ್ ದುಗಲಡ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂಗಳ ಕಾಮಗಾರಿ ನಡೆದಿದ್ದು ವಿವಿಧ ಮೂಲಗಳಿಂದ ಇನ್ನೂ 65 ಲಕ್ಷ ರೂಗಳ ಕಾಮಗಾರಿಗಳಿಗೆ ಮಂಜೂರಾತಿ ದೊರಕಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಯು ಆರಂಭಗೊಳ್ಳಲಿದೆಈ ಹಿಂದೆ ಪ್ರತಿಭಟನೆ ನಡೆದಿದ್ದ ಸಂದರ್ಭದಲ್ಲಿ 50 ಲಕ್ಷ ರೂಗಳ ಕಾಮಗಾರಿಯನ್ನು ತಕ್ಷಣ ಕೈಗೊತ್ತಿಕೊಳ್ಳಲಿದ್ದು ಇನ್ನೂ 50 ಲಕ್ಷ ರೂಗಳ ಕಾಮಗಾರಿಯನ್ನು ಮಾಡಲಿದ್ದೇವೆ...

ಕಲ್ಲಪ್ಪಳ್ಳಿಯಲ್ಲಿ ನಡೆದ ಪ್ರಪ್ರಥಮ ಮ್ಯಾಟ್ ಕಬಡ್ಡಿ – ಮಾತೃಶ್ರೀ ಕಲ್ಲಪ್ಪಳ್ಳಿ ಪ್ರಥಮ, ಎನ್.ಎಂ.ಸಿ. ದ್ವಿತೀಯ

ಕಲ್ಲಪಳ್ಳಿಯ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ದಿ.ಮೋನಪ್ಪ ಗೌಡ ನೆಡ್ಚಿಲು ಮೂಲೆಹಿತ್ಲು ಇವರ ಸ್ಮರಣಾರ್ಥ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಮಾ.11ರಂದು ನಡೆಯಿತು. ಪ್ರಥಮ ಬಹುಮಾನ ರೂ.20,001 ನ್ನು ಮಾತೃಶ್ರೀ ಕಲ್ಲಪಳ್ಳಿ ತಂಡ ಹಾಗೂ ದ್ವಿತೀಯ ಬಹುಮಾನ 15,001 ನ್ನು ಎನ್‌ಎಂಸಿ‌ ಸುಳ್ಯ ಪಡೆದುಕೊಂಡಿತು. ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ 5001...

ಮಾ‌. 19 ರಂದು ಪಂಜದಲ್ಲಿ ಮಹಿಳಾ ಮೋರ್ಚಾದ ಜಿಲ್ಲಾ ಸಮಾವೇಶ – ಪೂರ್ವಭಾವಿ ಸಭೆ

ದ.ಕ. ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಜಿಲ್ಲಾ ಸಮಾವೇಶ ಮಾ.19 ರಂದು ಪಂಜದಲ್ಲಿ ನಡೆಯಲಿದ್ದು, ಪೂರ್ವಭಾವಿ ಸಭೆಯು ಇಂದಯ ಅಯ್ಯನಕಟ್ಟೆ ದೀನ್ ದಯಾಳ್ ಸಭಾಂಗಣದಲ್ಲಿ ಜರಗಿತು. ಈ ಸಭೆಯಲ್ಲಿ ಸಚಿವರಾದ ಅಂಗಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿ.ಪಂ.ಮಾಜಿ ಸದಸ್ಯೆ ಪುಷ್ಪಾವತಿ ಬಾಳಿಲ, ವಸಂತ ನಡುಬೈಲು ಹಾಗೂ...

ರಾಮಕೃಷ್ಣ ನಾಯರ್ ಸಾಲ್ತಾಡಿ ನಿಧನ

ನಾಲ್ಕೂರು ಗ್ರಾಮದ ಸಾಲ್ತಾಡಿ ರಾಮಕೃಷ್ಣ ನಾಯರ್ ಅವರು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರುಕ್ಮಿಣಿ, ಪುತ್ರರಾದ ಉಣ್ಣಿಕೃಷ್ಣನ್, ಶಿವಪ್ರಸಾದ್ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!