ಅರಂತೋಡು : ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ

ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ರವರು ನಾಮಪತ್ರ ಸಲ್ಲಿಸಿದ ಬಳಿಕ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅರಂತೋಡು, ತೊಡಿಕಾನ ಭಾಗದಲ್ಲಿ ಏ.19 ರಂದು ಆ ಭಾಗದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿ ಮಾಡಿ ಮತಯಾಚಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ, ಕೆಪಿಸಿಸಿ ವಕ್ತಾರರುಗಳಾದ ಟಿ ಎಂ ಶಹೀದ್, ಸುಳ್ಯ ವಿಧಾನಸಭಾ...

ಐವರ್ನಾಡು : ತ್ಯಾಜ್ಯ ಎಸೆದವರಿಗೆ ಪಂಚಾಯತ್ ನಿಂದ ರೂ.5500 ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿಕೇರಿ ಎಂಬಲ್ಲಿ ಎ.17 ರಂದು ತ್ಯಾಜ್ಯ ಎಸೆದ ಮೂಡಬಿದ್ರೆ ನಿವಾಸಿಗಳಿಗೆ ರೂ 5500.00 ದಂಡ ವಿಧಿಸಿದ ಘಟನೆ ಎ.19 ರಂದು ನಡೆದಿದೆ. ಎ.17 ರಂದು ನಾಟಿಕೇರಿ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು...
Ad Widget

ಸಂಜೀವಿನಿ ಪ್ರಶಸ್ತಿಗೆ ಆಯ್ಕೆಯಾದ ಲೀಲಾವತಿ ಪೈಕ

ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರಾವಳಿ ಲೇಖಕಿಯರು- ವಾಚಕಿಯರ ಸಂಘದ 2023ನೇ ಸಾಲಿನ ಸಂಜೀವಿನಿ ಪ್ರಶಸ್ತಿಗೆ ಗುತ್ತಿಗಾರಿನ ಲೀಲಾವತಿ ಪೈಕರವರು ಆಯ್ಕೆಯಾಗಿದ್ದಾರೆ.ಲೀಲಾವತಿ ಪೈಕ ರವರು ಸುಮಾರು 35 ವರ್ಷಗಳಿಂದ ಗುತ್ತಿಗಾರಿನಲ್ಲಿ ಕಮ್ಮಾರಿಕೆ ಕೆಲಸ ಮಾಡುತ್ತಾ ಮೂವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದವರು.ಕುಟುಂಬಕ್ಕೆ ಸಂಜೀವಿನಿಯಾಗುವ ಅಮ್ಮಂದಿರನ್ನು ಈ ಪ್ರಶಸ್ತಿಗೆ ಆಯ್ಕೆ...

ಜಟ್ಟಿಪಳ್ಳ : ಉಚಿತ ಯೋಗ ಶಿಬಿರ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ಸ್ಕೂಲ್ ಆಫ್ ಯೋಗ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ನಡೆಯುವ ಉಚಿತ ಯೋಗ ತರಬೇತಿಯ ಉದ್ಘಾಟನಾ ಸಮಾರಂಭವು ಏಪ್ರಿಲ್‍ನ 17 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ಜರುಗಿತು.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಿರ್ದೇಶಕ ರಾಮಕೃಷ್ಣ ಭಟ್ ದೀಪ ಬೆಳಗಿಸಿ...

ಸಂಪಾಜೆ : ಮರದಿಂದ ಬಿದ್ದು ಯುವಕ ಮೃತ್ಯು

ಜೇನು ತೆಗೆಯಲೆಂದು ಮರ ಹತ್ತಿದ್ದ ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಎ.18 ರಂದು ಸಂಪಾಜೆ ಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕರಿಕೆ ಮೂಲದ ವಿಜಯ್ ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದು, ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದ ವಿಜಯ್ ಗಂಭೀರ ಗಾಯಗೊಂಡರೆನ್ನಲಾಗಿದೆ. ಕೂಡಲೇ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ...

ಮೂಲಸೌಕರ್ಯ ಅಭಿವೃದ್ಧಿ, ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ – ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಭರವಸೆ

ಸುಳ್ಯದ ಬಹುಕಾಲದ ಸಮಸ್ಯೆಗಳಲ್ಲೊಂದಾದ ವಿದ್ಯುತ್ 110ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣ, ಕೈಗಾರಿಕಾ ಕ್ಷೇತ್ರದ ಆದ್ಯತೆ ಹಾಗೂ ಇಲ್ಲಿನ ಮೂಲಭೂತ ಸೌಕರ್ಯದ ಜತೆಗೆ ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದರು.ಅವರು ನಾಮಪತ್ರ ಸಲ್ಲಿಕೆಯ ಬಳಿಕ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.ಇಲ್ಲಿ ಅಡಿಕೆ...

ನ್ಯಾಯವಾದಿ ಕೃಷ್ಣಮೂರ್ತಿಯವರ ಕೊಲೆಯತ್ನಿಸಿದವರ ವಿರುದ್ಧ ಶೀಘ್ರ ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ – ತಹಶೀಲ್ದಾರರಿಗೆ ಮನವಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದೂ ಪರ ಪ್ರಮುಖ ವಕೀಲರಾದ ಪಿ. ಕೃಷ್ಣಮೂರ್ತಿ ಅವರ ಮೇಲೆ ಮಡಿಕೇರಿಯಲ್ಲಿ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ವಕೀಲ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರ್ ನಲ್ಲಿ ಹಿಂತಿರುಗುವಾಗ ಕರ್ನಾಟಕದ ಚೆಟ್ಟಳ್ಳಿಯಿಂದ ಮಡಿಕೇರಿಗೆ...

ಏ.19 ; ಜೆಡಿಎಸ್ ಅಭ್ಯರ್ಥಿ ಎಚ್.ಎಲ್.ವೆಂಕಟೇಶ್ ನಾಮಪತ್ರ ಸಲ್ಲಿಕೆ

ಜಾತ್ಯಾತೀತ ಜನತಾದಳ ಅಭ್ಯರ್ಥಿಯಾಗಿ ಎಚ್.ಎಲ್. ವೆಂಕಟೇಶ್ ಏ 19 ರಂದು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. 11 ಗಂಟೆಗೆ ಸುಳ್ಯದ ಜ್ಯೋತಿ ಸರ್ಕಲಿನಿಂದ ವಾಹನ ಜಾಥಾದಲ್ಲಿ ಅಭ್ಯರ್ಥಿ ಎಚ್ ಎಲ್ ವೆಂಕಟೇಶ್ ರವರು ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

ನೆಟ್ಟಣದಲ್ಲಿ ಕಾರು ಹಾಗೂ ತೂಫಾನ್ ಅಪಘಾತ – ಭೀಕರ ಅಪಘಾತಕ್ಕೆ ಸ್ಥಳದಲ್ಲೇ ನಾಲ್ವರು ದುರ್ಮರಣ

ತೂಫಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಏ.18 ರಂದು ಮಧ್ಯಾಹ್ನ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ.

ಆಪ್ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ಏ.18 ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ವರೆಗೆ ಸಾಗಿ ಚುನವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ನಾಮಪತ್ರ ಸಲ್ಲಿಸಿದರು. ಇವರ ಜೊತೆ ಪಕ್ಷದ ಪ್ರಮುಖರಾದ ಅಶೋಕ್ ಎಡಮಲೆ, ರಶೀದ್ ಜಟ್ಟಿಪಳ್ಳ, ಗುರುಪ್ರಸಾದ್ ಮೇರ್ಕಜೆ, ಖಲಂದರ್ ಎಲಿಮಲೆ ಮೊದಲಾದವರಿದ್ದರು.
Loading posts...

All posts loaded

No more posts

error: Content is protected !!