ದ್ವಿತೀಯ ಪಿಯುಸಿ ಫಲಿತಾಂಶ : ರೋಟರಿ ವಿದ್ಯಾಸಂಸ್ಥೆಗೆ ಶೇ.100

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸಂಸ್ಥೆಗೆ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ‌ ವಿಭಾಗದಲ್ಲಿ 24 ಮಂದಿ‌ ಪರೀಕ್ಷೆ ಬರೆದು ಎಲ್ಲರೂ ತೇರ್ಗಡೆಯಾಗಿದ್ದಾರೆ. ದೃತಿ ಕೆದಿಲಾಯ 578 ಅಂಕ‌ ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. ಪ್ರಣಮ್ 568 ಅಂಕಗಳೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಪಡ್ಪಿನಂಗಡಿ : ನೇಣುಬಿಗಿದು ಆತ್ಮಹತ್ಯೆ

ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿಯಲ್ಲಿ ವ್ಯಕ್ತಿಯೊಬ್ಬರು ಏ.20 ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಪಡ್ಪಿನಂಗಡಿ(ಕಜ್ಜೋಡಿ ತುಪ್ಪದಮನೆ) ಸುಬ್ಬಪ್ಪ ಗೌಡ ಎಂಬುವವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸಂಜೆ ವಿಷಯ ಬೆಳಕಿಗೆ ಬಂದಿದ್ದು, ಬೆಳ್ಳಾರೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಪತ್ನಿ ಶ್ರೀಮತಿ ಕಮಲ,...
Ad Widget

ಗುತ್ತಿಗಾರು : ಸ.ಪ.ಪೂ.ಕಾಲೇಜಿಗೆ 98 ಶೇ ಫಲಿತಾಂಶ

2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ವಾಣಿಜ್ಯ ವಿಭಾಗ 100% ಹಾಗೂ ಕಲಾ ವಿಭಾಗ 97% ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 62 ವಿದ್ಯಾರ್ಥಿಗಳು ಹಾಜರಾಗಿದ್ದು ಒಟ್ಟಾರೆಯಾಗಿ 98 ಶೇಕಡಾ ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ 30 ವಿದ್ಯಾರ್ಥಿಗಳು...

ಮಿತ್ತಮಜಲು : ಪಲ್ಸರ್ ಬೈಕ್ ಗಳ ಮುಖಾಮುಖಿ ಡಿಕ್ಕಿ- ಸವಾರನ ಕಾಲು ಜಖಂ

ಜಾಲ್ಸೂರು ಸುಬ್ರಹ್ಮಣ್ಯ ರಸ್ತೆಯ ಮಿತ್ತಮಜಲು ಬಳಿ ಪಲ್ಸರ್ ಬೈಕ್ ಗಳ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮಿತ್ತಮಜಲಿನಲ್ಲಿ ಕೆಲಸಕ್ಕೆಂದು ವಿಟ್ಲದಿಂದ ಬರುತ್ತಿದ್ದವರ ಬೈಕ್ ಮತ್ತು ತಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಸವಾರರ ಬೈಕ್ ಡಿಕ್ಕಿಯಾದ ಘಟನೆ ನಡೆದಿದೆ. ಬೈಕ್ ಸವಾರನೋರ್ವನ ಕಾಲು ಜಖಂಗೊಂಡಿದೆ.

ಏ.21 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏ.21 ಶುಕ್ರವಾರದಂದು ಪ್ರಕಟವಾಗಲಿದೆ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 9 ರಿಂದ 29 ರವರೆಗೆ ನಡೆದಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು, ಏ.21 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶವನ್ನು https://karresults.nic.in/ ಜಾಲತಾಣದಲ್ಲಿ ಬೆಳಿಗ್ಗೆ 11 ಗಂಟೆಯ ಬಳಿಕ ವೀಕ್ಷಿಸಬಹುದಾಗಿದೆ...

ಕರ್ನಾಟಕ ವಿಧಾನಸಭಾ ಚುನಾವಣೆ – ಸುಳ್ಯ ಕ್ಷೇತ್ರದಿಂದ 9 ಅಭ್ಯರ್ಥಿಗಳು

ಕರ್ನಾಟಕದ ವಿಧಾನಸಭೆಗೆ ಮೇ.10 ರಂದು ಚುನಾವಣೆ ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದುವರೆಗೆ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಈ ಬಾರಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪಕ್ಷೇತರರು ಕಣದಲ್ಲಿದ್ದಾರೆ. ನಾಮಪತ್ರಗಳ ಪರಿಶೀಲನೆ ಏ.21 ರಂದು ನಡೆಯಲಿದ್ದು ಏ. 24 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ.ಇದೀಗ ಬಿಜೆಪಿ ಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ...

ದಿ.ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭೇಟಿ

ಭಾಜಪಾ ಶಾಸಕ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಏ. 20ರಂದು ದಿ.ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಅವರ ತಂದೆ- ತಾಯಿಯ ಆಶೀರ್ವಾದ ಪಡೆದರು. ಈ ಹಿಂದೆ ಪಕ್ಷ ಮತ್ತು ಸರಕಾರ ನಿಮ್ಮ ನೋವಿನ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸ್ಪಂದನೆ ಮಾಡಿತ್ತೊ ಹಾಗೆಯೇ ನಾನು ಕೂಡ ನಿಮ್ಮ ಮನೆಯ ಮಗಳಾಗಿ ನಿಮ್ಮೊಂದಿಗೆ ಇದ್ದು ಎಲ್ಲಾ ರೀತಿಯ...

ಸಂಪತ್ ಕೊಲೆ ಪ್ರಕರಣದ ಮೂರನೇ ಆರೋಪಿಗೆ ಜಾಮೀನು

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದ ಮೂರನೇ ಆರೋಪಿಗೆ ಮಂಗಳೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ‌ಜಾಮೀನು ನೀಡಿದೆ.2020 ರ ಅಕ್ಟೋಬರ್ 8 ರಂದು ಕಲ್ಲುಗುಂಡಿಯ ಸಂಪತ್ ಎಂಬವರು ಸುಳ್ಯ ಶಾಂತಿನಗರದ ಅವರ ಬಾಡಿಗೆ ಮನೆಯಿಂದ ಕಾರಿನಲ್ಲಿ‌ ಬರುತ್ತಿದ್ದಾಗ ಅವರನ್ನು ಅಡ್ಡ ಗಟ್ಟಿ, ಅಟ್ಟಾಡಿಸಿಕೊಂಡು‌ ಹೋಗಿ ಮನೆಯೊಂದರೊಳಗೆ ಕಡಿದು‌ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ...

ಹರಿಹರ ಪಲ್ಲತ್ತಡ್ಕ : ಪ್ರೌಢಶಾಲೆಯಲ್ಲಿ ಕಳ್ಳತನ

ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಯಿಂದ ಬ್ಯಾಟರಿ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಕಜ್ಜೋಡಿ ಅವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಏ.15 ರಂದು ಶಾಲಾ ಕೊಠಡಿಗೆ ಬೀಗ ಹಾಕಿ ತೆರಳಿದ್ದು, ಏ.18 ರಂದು ಶಾಲೆಗೆ ಬಂದಾಗ ಕಂಪ್ಯೂಟರ್ ಕೊಠಡಿಯ ಬಾಗಿಲಿನ ಬೀಗ ಒಡೆದಿರುವುದು ಗಮನಕ್ಕೆ ಬಂದಿದ್ದು, ಕೊಠಡಿಯ...

ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್. ವೆಂಕಟೇಶ್ ನಾಮಪತ್ರ ಸಲ್ಲಿಕೆ

ಸುಳ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಏ.19ರಂದು ನಾಮಪತ್ರ ಸಲ್ಲಿಸಿದರು. ರಥಬೀದಿಯಲ್ಲಿ ರುವ ಜೆಡಿಎಸ್ ಚುನಾವಣಾ ಕಚೇರಿ ಮೆರವಣಿಗೆಯಲ್ಲಿ ಸಾಗಿ ಚುನಾವಣಾಧಿಕಾಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಅಗ್ರಹಾರ ದುಗ್ಗಪ್ಪ, ಜೆಡಿಎಸ್...
Loading posts...

All posts loaded

No more posts

error: Content is protected !!