ಅಜ್ಜಾವರ : ಭಾರೀ ಮಳೆಗೆ ಮನೆ ಕುಸಿತ – ಟಾರ್ಪಲ್ ಆಳವಡಿಕೆ

ಅಜ್ಜಾವರ ಗ್ರಾಮದ ದೊಡ್ಡೇರಿ ಬಸವನಪಾದೆ ನಿವಾಸಿ ಬಾಬು ಎಂಬುವವರ ಮನೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿತಗೊಂಡಿದೆ. ಮನೆಯ ಒಂದು ಭಾಗ ಧರಾಶಾಹಿಯಾಗಿದೆ. ಕಳೆದ ಭಾರಿ ಕೂಡ ಇವರ ಮನೆಗೆ ಹಾನಿಯಾಗಿತ್ತು. ಗ್ರಾಮ ಪಂಚಾಯತ್ ನಿಂದ ಹತ್ತು ಸಾವಿರ ಸಹಾಯಧನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದೀಗ ಸದ್ಯ ಮನೆಗೆ ಟಾರ್ಪಲ್ ಹೊದಿಕೆ ಅಳವಡಿಸಲಾಗಿದೆ...

ಸುಳ್ಯದ ಹೃದಯಭಾಗದಲ್ಲಿ ಬಾಯ್ದೆರೆದ ಗುಂಡಿ – ವಾಹನ ಸವಾರರು ಹಾಗೂ ಪಾದಚಾರಿಗಳೇ ಎಚ್ಚರ..ಎಚ್ಚರ..

ಸುಳ್ಯ ನಗರದ ಹೃದಯ ಭಾಗವಾದ ಚೆನ್ನಕೇಶವ ದೇವರಕಟ್ಟೆಯ ಬಳಿಯ ತಾಹಿರಾ ಟೆಕ್ಸ್ ಟೈಲ್ಸ್ ಎದುರು  ರಸ್ತೆಯ ಬದಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ಪಾದಚಾರಿಗಳು ನಡೆದಾಡುವಲ್ಲೆ ಗುಂಡಿ ಬಾಯ್ದೆರೆದು ಕಾದು ಕುಳಿತಿದೆ.  ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ವಾರದ ಹಿಂದೆ ನಿರ್ಮಾಣವಾಗಿರುವ ಗುಂಡಿಯನ್ನು ಮುಚ್ಚುವ ಕೆಲಸಕ್ಕೆ ಇನ್ನಾದರೂ ಕೈ ಹಾಕುವರೇ ಎಂದು ಕಾದುನೋಡಬೇಕಿದೆ.
Ad Widget

ದ.ಕ.ಜಿಲ್ಲೆಯಾದ್ಯಂತ ಕುಂಭದ್ರೋಣ ಮಳೆ ಹಿನ್ನೆಲೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

ಸೋಮವಾರ ಬೆಳಗ್ಗಿನಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.24ರಂದು ಮತ್ತು 25 ಬೆಳಿಗ್ಗೆ ವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ...

ಭಾರಿ ಮಳೆಗೆ ಕುರುಂಜಿಭಾಗ್ ರಸ್ತೆ ಜಲಾವೃತ – ಪರದಾಡಿದ ವಿದ್ಯಾರ್ಥಿಗಳು

ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ತೆರಳುವ ಕುರುಂಜಿಭಾಗ್ ರಸ್ತೆಯಲ್ಲಿ ನೀರು ತುಂಬಿ ಸಂಕಷ್ಟ ಪಡಬೇಕಾಯಿತು.‌ ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿ ಭಾಗ್ ರಸ್ತೆಯಲ್ಲಿರುವ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಹೊಳೆಯಾಗಿ ಮಾರ್ಪಾಡಾಗಿ ವಾಹನಸವಾರರು ಪರದಾಡುವ ಪ್ರಸಂಗ ಉಂಟಾಯಿತು. ಇನ್ನಾದರೂ ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕಿದೆ.

ಕುಕ್ಕುಜಡ್ಕ : ಭಾರತ ಮಾತಾ ಪೂಜನಾ ಕಾರ್ಯಕ್ರಮ

ನಿವೇದಿತಾ ಸಂಚಾಲನ ಸಮಿತಿ ಅಮರಪಡ್ನೂರು ಇವರ ವತಿಯಿಂದ ಭಾರತ ಮಾತಾ ಪೂಜಾನಾ ಕಾರ್ಯಕ್ರಮ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಂಚಾಲನ ಸಮಿತಿಯ ಸಂಚಾಲಕಿ ಗೀತಾ ಕೊರತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಕುಸುಮಾಧರ ಎ ಟಿ ಬೌದ್ಧಿಕ್ ನೀಡಿದರು.‌ ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ.)ಇದರ ಆಡಳಿತ...

ಹರಿಹರ ಪಲ್ಲತ್ತಡ್ಕ ಕ್ಲಸ್ಟರ್ ನ ಎಲ್ಲಾ ಹಾಗೂ ಸುಬ್ರಹ್ಮಣ್ಯದ ಕೆಲವು ಶಾಲೆಗಳಿಗೆ ಇಂದು ರಜೆ ಘೋಷಣೆ

ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಕ್ಲಸ್ಟರ್ ನ ಎಲ್ಲ ಶಾಲೆಗಳಿಗೆ ಹಾಗೂ ಸುಬ್ರಹ್ಮಣ್ಯ ಕ್ಲಸ್ಟರ್ ನ ಆಯ್ದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ. ಸುಬ್ರಹ್ಮಣ್ಯ ಕ್ಲಸ್ಟರ್ ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ,ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ...

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಬಿ.ಎಂ‌.ಎಸ್. ಸ್ಥಾಪನಾ ದಿನಾಚರಣೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ) ಬಿ ಯಂ ಯಸ್ ಸಂಯೋಜಿತ ವತಿಯಿಂದ ಬಿ ಯಂ ಯಸ್ (ಭಾರತೀಯ ಮಜ್ದೂರ್ ಸಂಘ) ಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನು ಹಳೆಗೇಟಿನ ಸಂಘದ ಕಟ್ಟಡ ಕಾರ್ಮಿಕರ ತಿಲಕಭವನದಲ್ಲಿ ಜು.23 ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಸ್ಥಾಪಕಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಮಾತನಾಡಿದರು.ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ...

ಬೆಂಡೋಡಿ ಸೇತುವೆಯ ಸಂಪರ್ಕ ಕಡಿತ – ಈ ಬಾರಿಯೂ ಸಂಕಷ್ಟಕ್ಕೆ ಸಿಲುಕಿ ಬೆಂಡೋಡಿ ಜನತೆ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸೇತುವೆ ಇಂದು ಸುರಿದ ಭಾರಿ ಮಳೆಗೆ ಕಳೆದ ವರ್ಷದಂತೆ ಈ ಬಾರಿಯೂ ಸಂಪರ್ಕ ಕಳೆದುಕೊಂಡಿದೆ. ನಿನ್ನೆಯಿಂದ ಕಲ್ಮಕಾರು, ಕೂಜುಮಲೆ, ಕಡಮಕಲ್ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಮೋರಿ ಅಳವಡಿಸಿ ಮರಳು ಚೀಲ ಇರಿಸಿ ನಿರ್ಮಿಸಿದ್ದ ಸಂಪರ್ಕ ಮತ್ತೆ ಕೊಚ್ಚಿಹೋಗಿದೆ. ಕಳೆದ ಬಾರಿ ಉಂಟಾದ...

ಪುಳಿಕುಕ್ಕು ಬಳಿ ರಸ್ತೆಗೆ ನುಗ್ಗಿದ ಕುಮಾರಧಾರ ನದಿ ನೀರು

ಭಾರಿ ಮಳೆಯಿಂದಾಗಿ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದ್ದು, ಪಂಜ ಸಮೀಪದ ಪುಳಿಕುಕ್ಕು ಎಂಬಲ್ಲಿ ಹೊಳೆ ನೀರಿನ ನೆರೆ ಮುಖ್ಯ ರಸ್ತೆಯಲ್ಲಿ ತುಂಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಕಡಬ-ಪಂಜ ಕಡೆಗೆ ಸಂಚರಿಸಲು ನಿಂತಿಕಲ್ಲು -ಎಡಮಂಗಲ ರಸ್ತೆಯಾಗಿ ಪರ್ಯಾಯ ರಸ್ತೆಯನ್ನು ಬಳಸಬೇಕಾಗಿದೆ.

ಜಾರುಬಂಡಿಯಂತಾದ ಶೆಟ್ಟಿಗದ್ದೆ ಜೋಗಿಬೆಟ್ಟು ಮಂಞನಕಾನ ರಸ್ತೆ

✍️ ಭಾಸ್ಕರ ಜೋಗಿಬೆಟ್ಟು ಭಾರಿ ಮಳೆ ಸುರಿಯುತ್ತಿರುವುದರಿಂದ ಜೋಗಿಬೆಟ್ಟು ಮಂಞನಕಾನ ಸಂಪರ್ಕ ಮಾಡುವ ರಸ್ತೆಯು ಹದೆಗೆಟ್ಟು ಈ ಭಾಗದ ಜನರಿಗೆ ಬಹಳ ತೊಂದರೆಯುನ್ನು ಉಂಟುಮಾಡುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಅಧೋಗತಿಯನ್ನು ನೋಡುವವರು ಕೇಳುವವರು ಯಾರು ಇಲ್ಲದಂತಾಗಿದೆ. ಸರಿಯಾದ ಚರಂಡಿ ವ್ಯವಸ್ತೆ ಇಲ್ಲದೆ ಮಳೆಯ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯುವುದರಿಂದ...
Loading posts...

All posts loaded

No more posts

error: Content is protected !!