ಸುಳ್ಯ ತಾ.ಪಂ. ಇಓ ಭವಾನಿಶಂಕರ್ ವರ್ಗಾವಣೆ – ಸುಳ್ಯಕ್ಕೆ ಬಂಟ್ವಾಳದಿಂದ ರಾಜಣ್ಣ

ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಭವಾನಿಶಂಕರ್ ಎನ್ ರವರಿಗೆ ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜಣ್ಣರವರನ್ನು ಸುಳ್ಯಕ್ಕೆ ನೇಮಕಗೊಳಿಸಿ ಆದೇಶವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗಾಂಧಿನಗರ ಪಬ್ಲಿಕ್ ಶಾಲೆಯ ಅನುದಾನ ವಾಪಾಸ್ – ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್ ಅವರಿಂದ ಸ್ಪೀಕರ್ ಗೆ ದೂರು – ಹೋರಾಟ ಸಮಿತಿ ರಚನೆಗೆ ತೀರ್ಮಾನ

ಸುಳ್ಯದ ಗಾಂಧಿನಗರದ ಸರಕಾರಿ ಪಬ್ಲಿಕ್ ಶಾಲೆಯು ಹಲವಾರು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ನೀಡುತ್ತಿದ್ದು, ಇಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳು, ಅಲ್ಪಸಂಖ್ಯಾತ ಬಡ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕಳೆದ ಅನೇಕ ವರ್ಷಗಳಿಂದ ಶಾಲೆಗೆ ಯಾವುದೇ ಅನುದಾನಗಳು ಬಿಡುಗಡೆ ಆಗದೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದೆ ನಾದುರಸ್ತಿಯಲ್ಲಿರುವುದು ಸುಳ್ಯದ ಜನತೆ ತಲೆ...
Ad Widget

ಕರಿಯಮೂಲೆಯಲ್ಲಿ ಚರಂಡಿ ಅವ್ಯವಸ್ಥೆಯಿಂದ ಮನೆ ಮೇಲೆ ಬರೆ ಕುಸಿಯುವ ಆತಂಕ – ಅಮರ ಸುದ್ದಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಬರೆ ಕುಸಿತದ ಪರಿಣಾಮ ಮಣ್ಣು ಚರಂಡಿಗೆ ಬಿದ್ದಿದ್ದು ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಸಮೀಪದ ಸವಿತಾ ಎಂಬುವವರ ಮನೆಗೆ ಅಪಾಯ ಎದುರಾಗಿತ್ತು. ಈ ಬಗ್ಗೆ ಜನತೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಇಂದು ಮುಂಜಾನೆಯೇ ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದು, ಅಲ್ಲಿನ ಮಣ್ಣು...

ಕುಂ..ಕುಂ.. ಫ್ಯಾಷನ್ ನಲ್ಲಿ ಮಾನ್ಸೂನ್ ಆಫರ್ ಇನ್ನೂ ಕೆಲವೇ ದಿನ

ಸುಳ್ಯದ ಪ್ರಸಿದ್ಧ ವಸ್ತ್ರ ‌ಮಳಿಗೆ ಸುಳ್ಯದ ಕುಂ…ಕುಂ… ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ವಿಶೇಷ ಆಫರ್ ಜುಲೈನಿಂದ ಆರಂಭವಾಗಿದ್ದು, ಈತಿಂಗಳ ಕೊನೆಯವರೆಗೆ ನಡೆಯಲಿದೆ.ಇದಕ್ಕಾಗಿ ವಸ್ತ್ರಗಳ ಅಮೋಘ ಸಂಗ್ರಹ ಹಾಕಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ‌ ಕಾರ್ಯಕ್ರಮ ಗಳ ವಸ್ತ್ರ ಗಳ‌ ಬೃಹತ್ ಸಂಗ್ರಹವೂ ಇದೆ. ಸಾರಿ ರೂ 75ರಿಂದ ಆರಂಭ, ನೈಟಿ...

ಮರ್ಕಂಜ : ಗುಡ್ಡ ಕುಸಿತ – ಮನೆಗೆ ಹಾನಿ

ಮರ್ಕಂಜ ಗ್ರಾಮದ ಕಾಯರ ಅಜಡ್ಕ ಪುಷ್ಪಾವತಿಯವರ ಮನೆಗೆ ಗುಡ್ಡ ಜರಿದು ಮನೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಜು.8 ರಿಂದ ಇಲ್ಲಿ‌ ಗುಡ್ಡ ಕುಸಿಯಲು ಆರಂಭವಾಗಿತ್ತು. ಇದೀಗ ಇಲ್ಲಿ ಮತ್ತೆ ಗುಡ್ಡ ಕುಸಿದ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಯಾರೂ ಭೇಟಿ ನೀಡಿಲ್ಲ, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದೆ.

ಕರಿಯಮೂಲೆ : ಚರಂಡಿ ನೀರು ತುಂಬಿ ಮನೆಯ ಮೇಲೆ ಬರೆ ಕುಸಿಯುವ ಆತಂಕ

ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಬರೆ ಕುಸಿತದ ಪರಿಣಾಮ ಮಣ್ಣು ಚರಂಡಿಗೆ ಬಿದ್ದಿದ್ದು ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಸಮೀಪದ ಸವಿತಾ ಎಂಬುವವರ ಮನೆಗೆ ಅಪಾಯ ಎದುರಾಗಿದೆ. ಮನೆಯ ಕೆಳ ಭಾಗದಲ್ಲಿ ಪಯಸ್ವಿನಿ ನದಿಯ ನೀರಿನ ಪ್ರವಾಹ ಬಂದಿದ್ದು, ಇತ್ತ ಇನ್ನೊಂದು ಮೇಲೆ ಬದಿಯಲ್ಲಿ ಬರೆ ಕುಸಿತವಾಗಿ ನೀರು ಮನೆ ಕಡೆಗೆ ಹರಿದು ಬರುತ್ತಿದ್ದು...

ಸಂಪರ್ಕ ಕಡಿತಗೊಂಡ ಬೆಂಡೋಡಿ ಸೇತುವೆ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಭಾರಿ ಮಳೆಗೆ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸಂಪರ್ಕಿಸುವ ಸೇತುವೆಯ ಒಂದು ಭಾಗ ಕೊಚ್ಚಿ ಹೋದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಸ್ಥಳೀಯರೊಂದಿಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಮಾಧವ ಚಂತಾಳ, ಜಯಶ್ರೀ ಚಾಂತಾಳ, ರವಿಚಂದ್ರ, ಮಧು, ಶಿವಕುಮಾರ ಚಂತಾಳ, ಜಯಂತ...

ಮದೆನಾಡು ಸಮೀಪ ಭೂಕುಸಿತ – ಮಡಿಕೇರಿ ಮಂಗಳೂರು ಹೆದ್ದಾರಿ ಬಂದ್

ಮದೆನಾಡು ಸಮೀಪದ ಕರ್ತೋಜೆಯಲ್ಲಿ ಮರ ಸಹಿತ ಭೂ ಕುಸಿತವಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದೆ. ರಸ್ತೆಗೆ ಕುಸಿದಿರುವ ಮಣ್ಣು ಹಾಗೂ ಮರ ತೆರವಿಗೆ ಜೆಸಿಬಿ-ಹಿಟಾಚಿ ಯಂತ್ರ ಬಳಿಸಿ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಭಾರೀ ಮಳೆಯ ನಡುವೆಯು ಮಡಿಕೇರಿ ಹಾಗೂ ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಐನೆಕಿದು : ಬರೆ ಕುಸಿದು ರಸ್ತೆ ಬಂದ್

ಹರಿಹರ ಪಲ್ಲತ್ತಡ್ಕ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಐನೆಕಿದು ಬಳಿ ಇಂದು ಸಂಜೆ ಬರೆ ಕುಸಿದು ಬಿದ್ದಿದೆ. ಬರೆಯಲ್ಲಿದ್ದ ಮರಗಳು ಕೂಡ ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿದೆ.

ಸುಳ್ಯ : ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 21 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯೂ ಮುಂದುವರಿಯುವ ಸೂಚನೆಯಿದ್ದು, ಅರೆಂಚ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಸರ್ಕಾರಿ ಅನುದಾನಿತ...
Loading posts...

All posts loaded

No more posts

error: Content is protected !!