- Sunday
- August 30th, 2026
ಹಳೆಗೇಟು ಬಳಿ ನಿನ್ನೆ ಸಂಜೆ ಬೈಕ್ ಗಳ ಮಧ್ಯೆ ಪರಸ್ಪರ ಡಿಕ್ಕಿಯಾಗಿ ಸವಾರರಿಗೆ ಗಾಯವಾದ ಘಟನೆ ನಡೆದಿದೆ. ಬೆಟ್ಟಂಪಾಡಿಯ ಸ್ಮರಣ್ ಗಾಯಗೊಂಡವರು. ಪೈಚಾರ್ ನಿಂದ ಸುಳ್ಯಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ ಸುಳ್ಯದಿಂದ ಪೈಚಾರ್ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕ್ ಕಾರ್ ಅನ್ನು ಒವರ್ ಟೇಕ್ ಮಾಡುವ ಭರದಲ್ಲಿ ಸ್ಮರಣ್ ರವರ ಬೈಕಿಗೆ ಢಿಕ್ಕಿಯಾಗಿದ್ದು ಅವರು ಅಲ್ಲೆ...
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಅರಂಬೂರು ಇಲ್ಲಿ ಮೆಂಡ ಫೌಂಡೇಶನ್, ಎಸ್.ಪಿ. ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸ್ಮಾರ್ಟ್ ಸಿಸ್ಟಮ್ ಉದ್ಘಾಟನಾ ಕಾರ್ಯಕ್ರಮ ಜು.22 ರಂದು ನಡೆಯಿತು. ಸಭಾ...
ನಿನ್ನೆ ರಾತ್ರಿಯಿಂದ ಅಜ್ಜಾವರದ ಕರಿಯಮೂಲೆಯ ರಾಮ್ ಪ್ರಸಾದ್ ಕಾರ್ನಿಕ , ವಿಶ್ವನಾಥ ರಾವ್ ಸರಿದಂತೆ ಇತರರ ತೋಟಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ.ಮೊನ್ನೆಯಿಂದ ಘಟ್ಟ ಹಾಗೂ ಕರಾವಳಿಯಾಧ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಪಯಸ್ವಿನಿ ಉಕ್ಕಿ ಹರಿಯುತ್ತಿದ್ದು ಕಾಂತಮಂಗಲ ರಾಘವೇಂದ್ರ ಮಠ ಹಾಗೂ ಇತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದ್ದು ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚನೆ ಉಂಟಾಯಿತು.ಕುಮಾರಧಾರ ನದಿಯಲ್ಲಿ ಬಾರೀ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.ಮಂಜೇಶ್ವರ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನದಿಯ...
ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಟಿ ತಿಂಗಳ ವಿಶಿಷ್ಟ ಖಾದ್ಯಗಳ ಪ್ರದರ್ಶನ ಮತ್ತು ಆಟಿ ಆಚರಣೆ ಜುಲೈ 22 ರಂದು ನಡೆಯಿತು. ತುಳುನಾಡು ಅನೇಕ ವಿಶಿಷ್ಟ ಹಬ್ಬಗಳ ತವರೂರು, ಇಲ್ಲಿನ ಭಾಷೆ ಸಂಸ್ಕೃತಿ ಆಚರಣೆ ಹಬ್ಬ ಹರಿದಿನ ಪ್ರತಿಯೊಂದರಲ್ಲೂ ತುಳುನಾಡಿನ ಮಣ್ಣಿನ ಸೊಗಡು ಘಮಘಮಿಸುತ್ತಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಶಾಲೆಯಲ್ಲಿ ಹಲವಾರು...
ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ ಜು.22ರಂದು ನಡೆಯಿತು. ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ ಸಹಕಾರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಷನ್ ಸೊಸೈಟಿ ಬಾಳಿಲ ಇದರ ಕೋಶಾಧಿಕಾರಿಯಾದ ರಾಧಾಕೃಷ್ಣ ರಾವ್ ಉಡುವೆಕೋಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾಬು ಅಜಿಲ ಆಟಿ ತಿಂಗಳ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಶಾಲಾ...
ಸುಳ್ಯ ಸಂಪಾಜೆಯಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದು ಕಂಬದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪವರ್ ಮ್ಯಾನ್ ಗಾಯಗೊಂಡ ಘಟನೆ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ಇಂದು ನಡೆದಿದೆ. ಇಂದು ವಿಪರೀತ ಗಾಳಿ ಮಳೆಗೆ ವಿದ್ಯುತ್ ಲೈನ್ ತುಂಡಾಗಿದ್ದು,ತಕ್ಷಣವೇ ದುರಸ್ತಿ ಮಾಡಲು ಕಂಬ ಹತ್ತಿದ ಪವರ್ ಮ್ಯಾನ್ ಸಂಗಮೇಶ ಎಂಬವರು ಕೆಲಸ...
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಇಂದು ಸಂಜೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಘಟ್ಟ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದೆ. ಇತ್ತ ಸುಬ್ರಹ್ಮಣ್ಯದ ಪರಿಸರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಭಕ್ತಾಧಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಭಕ್ತರು ನೀರಿಗಿಳಿಯದಂತೆ ಕಾವಲು ಕಾಯುತ್ತಿದ್ದಾರೆ.
ಗಡಿಪಾರಿನ ಮೂಲಕ ಭಜರಂಗದಳವನ್ನು ಮಟ್ಟ ಹಾಕುತೇವೆ ಎಂದು ಹೊರಟಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ.ಭಜರಂಗದಳ ಕಾರ್ಯಕರ್ತರು ಧರ್ಮದ ರಕ್ಷಣೆಯ ಜತೆಗೆ ಸಮಾಜಮುಖಿ ಕೆಲಸ ಮಾಡುತ್ತಾ ನೆರೆ ಹಾಗೂ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತ ಬಂದಿದ್ದಾರೆ. ಇಂತಹ ಕಾರ್ಯಕರ್ತರನ್ನು ಗಡಿ ಪಾರು ಮಾಡುವುದನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ...
ಸುಳ್ಯ ತಾಲೂಕಿನ ಬಹುತೇಕ ಪಂಚಾಯತ್ ಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸರ್ವರ್ ಸಮಸ್ಯೆ, ತಾಂತ್ರಿಕ ಅಡಚಣೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಅಜ್ಜಾವರ ಗ್ರಾಮ ಪಂಚಾಯತ್ ಗೆ ತಾಲೂಕು ಕಾರ್ಯನಿರ್ವಾಹನಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಲಕ್ಷ್ಮಿ ಯೋಜನೆಯು ಪಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಪಂಚಾಯತ್ ಆಡಳಿತ ಸಿಬ್ಬಂದಿಗಳಿಗೆ ಸೂಚಿಸಿದರು....
Loading posts...
All posts loaded
No more posts
