ಅಮರ್ ರಹೇ ಜವಾನ್ : ಇಂದು ಕಾರ್ಗಿಲ್ ವಿಜಯ್ ದಿವಸ್

ಬರಹ : ಡಾ| ಮುರಲೀ ಮೋಹನ್ ಚೂಂತಾರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಮೊಂಬತ್ತಿ ಹಚ್ಚಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ....

ಮಂಡೆಕೋಲಿನಲ್ಲಿ‌ ಅತೀ ಹೆಚ್ಚು ಮಳೆ ದಾಖಲೆ

ಅತೀ ಹೆಚ್ಚು‌ಮಳೆಯಾದ ಪ್ರದೇಶದಲ್ಲಿ‌ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಎಂದು ಜು.25 ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ‌ ಮಾಡಿದೆ. ಮಂಡೆಕೋಲಿನಲ್ಲಿ 217 ಮಿ.ಮೀ, ಅರಂತೋಡು ಗ್ರಾಮದಲ್ಲಿ 185‌ಮಿ.ಮೀ ಹಾಗೂ ಬೆಳ್ಳಾರೆ ಯಲ್ಲಿ‌183.5 ಮಿ.ಮೀ. ಮಳೆಯಾಗಿದೆ.
Ad Widget

ಸುಳ್ಯ : ರಥಬೀದಿಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ – ಅಪಾಯದಿಂದ ಪಾರು

ಸುಳ್ಯದ ರಥಬೀದಿಯ ಬಳಿಯಲ್ಲಿ ಇಂದು ಸಂಜೆ ಆಲ್ಟೊ ಕಾರೊಂದು ರಸ್ತೆ ಬದಿಯ ಗುಂಡಿ ತಪ್ಪಿಸಲು ಹೋಗಿ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ  ವರದಿಯಾಗಿದೆ. ಪಾದಚಾರಿಯನ್ನು ಕಾರಿನ ಚಾಲಕ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ರಸ್ತೆ ಬದಿ ಉಂಟಾಗಿರುವ ಗುಂಡಿಯನ್ನು ನಗರ ಪಂಚಾಯತ್ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅಪಘಾತ ಸಂಭವಿಸಲು ಕಾರಣವೆಂದು ಜನರಾಡಿಕೊಳ್ಳುತ್ತಿದ್ದಾರೆ.

ಸುಳ್ಯ : ರೆಡ್ ಅಲರ್ಟ್ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪ.ಪೂ ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ನುಗ್ಗೇಹಳ್ಳಿ ಪಂಕಜ ದತ್ತಿ ಪ್ರಶಸ್ತಿ ಸ್ವೀಕರಿಸಿದ ಚಂದ್ರಾವತಿ ಬಡ್ಡಡ್ಕ

ಹಿರಿಯ ಪತ್ರಕರ್ತೆ, ಲೇಖಕಿ, ಅನುವಾದಕಿ ಚಂದ್ರಾವತಿ ಬಡ್ಡಡ್ಕ ಅವರ “ಲಘುಬಿಘು” ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ 2022ನೇ ಸಾಲಿನ “ನುಗ್ಗೇಹಳ್ಳಿ ಪಂಕಜ ದತ್ತಿ ಪ್ರಶಸ್ತಿ” ಲಭಿಸಿದ್ದು, ಜು.23 ರಂದು ಬೆಂಗಳೂರಿನ ಜೆ.ಸಿ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಂದ್ರಾವತಿ ಬಡ್ಡಡ್ಕ ಅವರು ಪ್ರಶಸ್ತಿ ಸ್ವೀಕರಿಸಿದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರರು, ಮಾಜಿ ಸಚಿವೆ ರಾಣಿ...

ಸುಳ್ಯ ತಾಲೂಕಿನ ಪಂಜ ಪೂಜಾಲಕ್ಷ್ಮಣ್ ಗೌಡ ಇವರಿಗೆ ಒಲಿದ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ಬಿರುದು

ಜು.23ರಂದು ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರು.ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಎಸ್ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ ಟ್ರಸ್ಟಿನ 6 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ...

ಕೊಲ್ಲಮೊಗ್ರ : ಮಳೆ ಹಾನಿ ಪ್ರದೇಶಗಳಿಗೆ ಎ.ಸಿ. ಭೇಟಿ – ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಒತ್ತಾಯ

ಮಳೆಯಿಂದ ಹಾನಿಗೊಂಡ ಕೊಲ್ಲಮೊಗ್ರ ಹಾಗೂ ಹರಿಹರ ಪ್ರದೇಶಗಳಿಗೆ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಪ್ರವಾಹ ಪರಿಸ್ಥಿತಿಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ‌ ಪಡೆದುಕೊಂಡರು. ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಸಮಸ್ಯೆಗಳ ಬಗ್ಗೆ ವಿವರ ನೀಡಿದರು. ಈ ಭಾಗದ ಜನರಿಗೆ ಕಳೆದ ಮೂರು ದಿನಗಳಿಂದ ನೆಟ್ವರ್ಕ್ ಇಲ್ಲದೆ ಪರದಾಡುತ್ತಿರುವ...

ದಿ.ಪ್ರವೀಣ್ ನೆಟ್ಟಾರು ಸ್ಮೃತಿದಿನ ಹಾಗೂ ರಕ್ತದಾನ ಶಿಬಿರ ಆಯೋಜನೆ

ಒಂದು ವರ್ಷದ ಹಿಂದೆ ಪಿಎಫ್ಐ ನ ಮತಾಂಧ ಶಕ್ತಿಗಳಿಂದ ಹತ್ಯೆಗೀಡಾದ ಬಿಜೆಪಿಯ ಯುವ ಮುಖಂಡ ದಿ| ಪ್ರವೀಣ್ ನೆಟ್ಟಾರು ಅವರ ಸ್ಮೃತಿದಿನ ಹಾಗೂ ರಕ್ತದಾನ ಶಿಬಿರ ದಿನಾಂಕ 26.07.2023 ಬುಧವಾರ ಸಮಯ ಬೆ.ಗಂ 9:00 ರಿಂದ ಸ್ಥಳ: ಜೆ ಡಿ ಆಡಿಟೋರಿಯಂ ಪೆರುವಾಜೆ ಬೆಳ್ಳಾರೆ ಇಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಪರಿವಾರ ಸಂಘಟನೆಯ ಎಲ್ಲಾ...

ಸುಳ್ಯ : ಬಿಎಂಎಸ್ ಸ್ಥಾಪನಾ ದಿನಾಚರಣೆ – ಕಾರ್ಮಿಕರ ಗುರುತಿನ ಚೀಟಿ ವಿತರಣೆ, ಸನ್ಮಾನ ಕಾರ್ಯಕ್ರಮ

ಭಾರತೀಯ ಮಜ್ದೂರ್ ಸಂಘ ಸುಳ್ಯ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾಲೂಕು ಇದರ ವತಿಯಿಂದ ಬಿಎಂಎಸ್ ಸ್ಥಾಪನಾ ದಿನಾಚರಣೆ ಹಾಗೂ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಹಾಗೂ ಹಿರಿಯ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಸುಳ್ಯದ ಅಮೃತ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ ಹಾಗೂ...

ಸುಳ್ಯಕ್ಕೆ ನೂತನ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ

ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಭವಾನಿ ಶಂಕರ್ ವರ್ಗಾವಣೆಯಾದ ಹಿನ್ನಲೆ ಈ ಸ್ಥಾನಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿದ್ದ ರಾಜಣ್ಣರವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Loading posts...

All posts loaded

No more posts

error: Content is protected !!