ಇಂದಿನ(ಆಗಸ್ಟ್ 14) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ ಹಾಗೂ ರಬ್ಬರ್ ಧಾರಣೆಯಲ್ಲಿ ಇಳಿಕೆ..!! ; ಕೊಬ್ಬರಿ-ಕಾಳುಮೆಣಸು ಸ್ಥಿರ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 14 ಆಗಸ್ಟ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 14) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಕೊಲ್ಲಮೊಗ್ರು : ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲ್‌ಗಳು ; ನೈರ್ಮಲ್ಯ ಕಾಪಾಡಲು ಸಾರ್ವಜನಿಕರ ಆಗ್ರಹ..!

ಕೊಲ್ಲಮೊಗ್ರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ಮದ್ಯದ ಬಾಟಲಿಗಳು ಬಿದ್ದಿದ್ದು, ಆರೋಗ್ಯ ಕಾಪಾಡುವ ಕೇಂದ್ರದ ದಾರಿಯಲ್ಲೇ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿರುವುದು ಕಂಡುಬಂದಿದೆ. ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾದಾಗ ಮೊದಲು ಧಾವಿಸುವುದು ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ. ಆದರೆ, ಅಂತಹ ಆರೋಗ್ಯ ಕೇಂದ್ರಕ್ಕೆ ತೆರಳುವ ರಸ್ತೆ ಬದಿಯಲ್ಲೇ...
Ad Widget

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಸ್ವಾತಂತ್ರೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕೊಡುಗೆ

ಸುಳ್ಯ : ನಗರದ ಪ್ರತಿಷ್ಠಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಸ್ವಾತಂತ್ರೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಆಫರ್‌ಗಳು ಲಭ್ಯವಿದ್ದು ಆಗಸ್ಟ್ 15ರಿಂದ 23ರವರೆಗೆ ನಡೆಯುವ ಈ ವಿಶೇಷ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸಂಸ್ಥೆಯು 1957ರಿಂದ ಗುಣಮಟ್ಟ, ವಿಶ್ವಾಸ ಹಾಗೂ ವಿನೂತನ ವಿನ್ಯಾಸಗಳ...

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸುಳ್ಯದ ಇಶಾನ್ ಹೆಸರು; ಕಣ್ಣಿಗೆ ಬಟ್ಟೆ ಕಟ್ಟಿ, ಒಂದು ಕೈಯಿಂದ ಕೀಬೋರ್ಡ್ ನುಡಿಸಿ ‘IBR Achiever’ ಗೌರವಕ್ಕೆ ಪಾತ್ರ

ಸುಳ್ಯ, ಆಗಸ್ಟ್ 14: ಸುಳ್ಯ ತಾಲೂಕಿನ ಪ್ರತಿಭಾವಂತ ಬಾಲಕ ಇಶಾನ್ ಬಿ.ಎ. ಅವರು ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕೇವಲ ಬಲಗೈಯನ್ನು ಬಳಸಿ ಎಲೆಕ್ಟ್ರಾನಿಕ್ ಕೀಬೋರ್ಡ್ ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 13 ವರ್ಷ 5 ತಿಂಗಳ ವಯಸ್ಸಿನ ಇಶಾನ್ ಅವರು 4 ನಿಮಿಷ 17 ಸೆಕೆಂಡುಗಳಲ್ಲಿ ಈ ಸಾಹಸವನ್ನು...

ಸುಳ್ಯ : ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಭಾರತದ 80ನೇ ವರ್ಷದ ಸ್ವತಂತ್ರತ್ಯೋತ್ಸವ ದ ಸಂದರ್ಭದಲ್ಲಿ ಸುಳ್ಯ ಯುವ ಮೋರ್ಚಾ ವತಿಯಿಂದ ನಗರ ಪಂಚಾಯತ್ ಅವರಣದಲ್ಲಿನ ಯುದ್ಧ ಸ್ಮಾರಕದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮುಲೆ, ಆಶೀಶ್ ಬಸವನಪಾದೆ, ಪ್ರಣೀತ್ ಕಣಕ್ಕೂರು, ಸುನಿಲ್ ಕೇರ್ಪಳ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಭಾಗವಹಿಸಿದ್ದರು.

ವಿನೋಬನಗರ : ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಹದಿಹರೆಯದ ಆರೋಗ್ಯ ಮಾಹಿತಿ

ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 13ರಂದು ವಿಜ್ಞಾನ ಸಂಘ ಮತ್ತು ಭಾರತ ಸ್ಕೌಟ್ ಗೈಡ್ಸ್ ಕರ್ನಾಟಕ ಇದರ ಗೈಡ್ಸ್ ವತಿಯಿಂದ ಹದಿಹರೆಯ ಆರೋಗ್ಯದ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಮಾಹಿತಿ ನೀಡಲು ಸಮುದಾಯ ಜಾಲ್ಸೂರು ವಲಯ ಆರೋಗ್ಯಧಿಕಾರಿಯಾದ ರಚನ ರವರು ಯಾವ ವಯಸ್ಸಿನ ಮಕ್ಕಳನ್ನು ಹದಿ ಹರೆಯದವರು ಮತ್ತು ಅವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು....

ಸುಳ್ಯದ ಜನ ಆಶಾ ಶಾಖೆಯಲ್ಲಿ ಮಾಹಿತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ

ಜನ ಆಶಾ ಸೌತ್ ನಿಧಿ ಲಿಮಿಟೆಡ್ ನ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಾಗಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಆ.13ರಂದು ಸುಳ್ಯ ಜನಾಆಶಾ ಶಾಖೆಯಲ್ಲಿ ನಡೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಜನಆಶಾ ಸಂಸ್ಥೆಯ ಡಿ.ಎಂ ನಂದೀಶ್ ಮೈಸೂರು, ಸೀನಿಯರ್ ಪಿ.ಆರ್.ಒ ರಾಜೇಶ್ ಚೊಕ್ಕಾಡಿ, ಪಿ.ಆರ್.ಒ ಪ್ರತಿಷ್ ಮಡಿಕೇರಿ ಹಾಗೂ ಸುಳ್ಯ ಶಾಖಾ ಪ್ರಬಂಧಕರಾದ ಸುಧಾಕರ್ ಅವರು ಉಪಸ್ಥಿತರಿದ್ದರು. ಶಾಖಾ...

ಕೊಲ್ಲಮೊಗ್ರು : ಜಲಜೀವನ್ ಮಿಷನ್ ಯೋಜನೆಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ; ಆ.25ರ ಒಳಗೆ ಸಂಪರ್ಕ ಸರಿಪಡಿಸಲು ಸೂಚನೆ

ಕೊಲ್ಲಮೊಗ್ರು ಗ್ರಾಮದ ಶಿವಾಲ-ಪಡ್ಪು ಎಂಬಲ್ಲಿ ನಿರ್ಮಾಣವಾದ ಜಲಜೀವನ್ ಮಿಷನ್ ಯೋಜನೆಯು ಆ ಭಾಗದ ಜನರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂಬ ಬಗ್ಗೆ ಇತ್ತಿಚೆಗೆ ನಡೆದ ಗ್ರಾಮಸಭೆಯಲ್ಲಿ ಚರ್ಚೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ 28 ಮನೆಗಳಿಗೆ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯತ್ ಗೆ 7 ದಿನಗಳ...

ದುಗ್ಗಪ್ಪ ಗೌಡ ಬಜಂತಡ್ಕ ಮಡ್ತಿಲ ನಿಧನ

ಐವರ್ನಾಡು ಗ್ರಾಮದ ಬಜಂತಡ್ಕ ಮಡ್ತಿಲ ದುಗ್ಗಪ್ಪ ಗೌಡರವರು ಆ.14 ರಂದು ನಿಧನರಾದರು. ಅವರಿಗೆ 76 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶ್ರೀಮತಿ ಲಕ್ಷ್ಮೀ, ಪುತ್ರ ನಿವೃತ್ತ ಯೋಧರಾದ ಗಣೇಶ ಬಜಂತಡ್ಕ,ಪ್ರವೀಣ ಬಜಂತಡ್ಕ,ಪುತ್ರಿ ಶ್ರೀಮತಿ ಅನಿತ ಸೊಸೆ, ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

ಆಲೆಟ್ಟಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅನುಷಾ ಬಿ ರವರಿಗೆ ಕೇರಳ ಸ್ಟೇಟ್ ಅಥ್ಲೆಟಿಕ್ಸ್ ನಲ್ಲಿ ಕಂಚಿನ ಪದಕ

ಆಲೆಟ್ಟಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿಯ ದ್ವಿತೀಯ ವರ್ಷದ ಬಿಕಾಂ ಪದವಿ ವ್ಯಾಸಂಗದಲ್ಲಿರುವ ಅನುಷಾ. ಬಿ ರವರು ಆ.6 ರಂದು ಕೇರಳದ ಕೊಲ್ಲo ನಲ್ಲಿ ನಡೆದ 19 ನೇ ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಹಾಮ್ಮರ್ ಥ್ರೋ ವಿಭಾಗದಲ್ಲಿ...
Loading posts...

All posts loaded

No more posts

error: Content is protected !!