- Sunday
- September 13th, 2026
ಸುಳ್ಯ ತಾಲೂಕಿನದ್ಯಂತ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಗ್ರಾಹಕರು ಪರದಾಡುವಂತಾಗಿದೆ. ಗ್ಯಾಸ್ ಪ್ಲಾಂಟ್ ನಿಂದ ಗ್ಯಾಸ್ ಸರಬರಾಜಿನ ವಿಷಯದಲ್ಲಿ ಗೊಂದಲ ಉಂಟಾಗಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು ಕಳೆದ ನಾಲ್ಕು ದಿನಗಳಿಂದ ಗ್ಯಾಸ್ ಲಾರಿಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯವಾಗಿದೆ. ಏಜೆನ್ಸಿಯವರ ಗೋಡೌನ್ ಗಳಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು ಗ್ರಾಹಕರು ಪರದಾಡುವಂತಾಗಿದೆ.
ದಿನಾಂಕ:14-08-2026 ಶುಕ್ರವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197*01,🐏ಮೇಷರಾಶಿ🐏*📃,ಇಂದು ನಿಮ್ಮ ರಾಶಿಯವರು ಕೆಲಸದಲ್ಲಿ ಪ್ರಭುದ್ಧತೆ ಮೆರೆಯುತ್ತಾರೆ. ಶಿಸ್ತು ಮತ್ತು ಸಂಯಮದಿಂದ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಸಾಗಲಿ. ನಿಮ್ಮಲ್ಲಿನ ವಿಶೇಷ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದು ನಿಶ್ಚಿತ.ಪ್ರೀತಿಯಲ್ಲಿ ಸಂತೋಷವಾಗಿರುವುದು ಹೇಗೆ ಎಂದು ತಿಳಿಯಿರಿ,ಗಮನಿಸಿ:-ಸ್ವಯಂಭರವಸೆಯನ್ನು ಅಭ್ಯಾಸಮಾಡಿಕೊಳ್ಳಿ,ಪರಿಹಾರ:-ಗಣಪತಿಗೆದೇವರಿಗೆ ಗರಿಕೆ ನೀಡಿ,*02,🐂ವೃಷಭರಾಶಿ🐂*📃,ನಿಮ್ಮಲ್ಲಿ ಇಂದು ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ...
ಸುಬ್ರಹ್ಮಣ್ಯ ಆಗಸ್ಟ್ 13 : ಪಂಜ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗಕ್ಕೆ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಗುಲಾಬಿ.ಎ ಅವರು ಎಕ್ಸಿಕ್ಯೂಟಿವ್ ಟೇಬಲ್ ಅನ್ನು ಕೊಡುಗೆಯಾಗಿ ಬುಧವಾರ ನೀಡಿದರು. ಕೆ.ಪಿ.ಎಸ್. ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ.ಟಿ ಅವರು ಕೊಡುಗೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಪೂವಪ್ಪ ಗೌಡ ಕೋಲ್ಪೆ...
ದಕ್ಷಿಣ ಭಾರತದ ಅತ್ಯುನ್ನತು ಸಮನ್ವಯ ಶಿಕ್ಷಣ ಸಂಸ್ಥೆ ಜಾಮಿಯ ಸಅದಿಯ್ಯ ಇದರ ಶರೀಅತ್ ಕಾಲೇಜು ಹಳೆ ವಿದ್ಯಾರ್ಥಿ ಸಂಘಟನೆ ಎಂ.ಯು.ಎಸ್. ಸುಳ್ಯ ಝೋನ್ ಸಮಿತಿ ವತಿಯಿಂದ ಸಂಪೂರ್ಣ ಸಅದಿ ಸಂಗಮ ಹಾಗು ಮಹಾತ್ಮಾರ ಅನುಸ್ಮರಣಾ ಕಾರ್ಯಕ್ರಮವು ಆಗಸ್ಟ್ 13 ಗುರುವಾರದಂದು, ಸಂಘದ ಅಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ಸಅದಿ ಯುವರ ಅಧ್ಯಕ್ಷತೆಯಲ್ಲಿ ಸುಳ್ಯ ಅನ್ಸಾರ್ ಭವನದಲ್ಲಿ ನಡೆಯಿತು....
ಐತಿಹಾಸಿಕ ಸ್ಥಳವಾದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯು ಆ.10 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಪಿ.ಡಿ.ಓ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಸದಾನಂದ ಮಾವಜಿ, ಅಮರ ಸುಳ್ಯ ಸಮರ 1837 ಸಮಿತಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್...
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಆ.12ರಂದು ಕರ್ನಾಟಕ ಅರಣ್ಯ ಇಲಾಖೆ ಸುಬ್ರಹ್ಮಣ್ಯ ಉಪವಿಭಾಗ, ಮಂಗಳೂರು ವಿಭಾಗ ವತಿಯಿಂದ ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷರಾದ ಕು. ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ, ಆನೆಗಳಿಂದ ತಾಲೂಕಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಾಗೂ ಇದಕ್ಕೆ ತಕ್ಕ ಪರಿಹಾರವಾಗಬೇಕು ಎಂದು ತಿಳಿಸುತ್ತಾ ಅಧ್ಯಕ್ಷೀಯ...
ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಟಿದ ಸವಿ - 2026ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಮಿಥಾಲಿ ಪಿ.ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಆರ್ಕಿರ್ಟೆಕ್ಟ್ ಅಕ್ಷಯ್ ಕೆ.ಸಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ....
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 13 ಆಗಸ್ಟ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 13) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ತನಕ ಎಲ್ಲಾ ನಾಗರಿಕರು ನಮ್ಮ ನಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:13-08-2026 ಗುರುವಾರ*01,🐏ಮೇಷರಾಶಿ🐏*📖,ಬೆಲೆಬಾಳುವ ವಸ್ತ್ರಆಭರಣಗಳನ್ನು ಇಂದು ನೀವು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕಫಲಿತಾಂಶಗಳಿರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ,ಗಮನಿಸಿ:-ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ,ಪರಿಹಾರ:-ನವಗ್ರಹ ಮಂತ್ರ ಜಪಿಸಿ,*02,🐂ವೃಷಭರಾಶಿ🐂*📖,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು...
Loading posts...
All posts loaded
No more posts
