ಅಡ್ತಲೆ ಕುಟುಂಬದ ಹಿರಿಯರಾದ ಕೃಷ್ಣಪ್ಪ ಗೌಡ ಅಡ್ತಲೆ ನಿಧನ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ಹಿರಿಯರಾದ ಕೃಷ್ಣಪ್ಪ ಗೌಡ ಅಡ್ತಲೆ(ದರ್ಖಾಸ್) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಏ.05) ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.ಮೃತರು ಐವರು ಹೆಣ್ಣುಮಕ್ಕಳು, ಅಳಿಯಂದಿರು, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯವನ್ನು ನಾಳೆ(ಏ.06) ಬೆಳಿಗ್ಗೆ 10:00 ಗಂಟೆಯ ಒಳಗಾಗಿ ನಡೆಸಲಾಗುವುದೆಂದು ಮೃತರ ಮನೆಯವರು ತಿಳಿಸಿದ್ದಾರೆ.

ಚೆಂಬು : ಗೌರಮ್ಮ ಚೌಟಾಜೆ ನಿಧ‌ನ

ಚೆಂಬು ಗ್ರಾಮದ ಆನೆಹಳ್ಳ ಚೌಟಾಜೆ ದಿ|ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಚೌಟಾಜೆ ಅಲ್ಪಕಾಲದ ಅಸೌಖ್ಯದಿಂದ ಇಂದು(ಏ.05) ನಿಧನರಾದರು. ಮೃತರ ಅಂತಿಮ ಸಂಸ್ಕಾರವನ್ನು ಏ.06 ಸೋಮವಾರದಂದು ಪೂರ್ವಾಹ್ನ 10:00 ಗಂಟೆಗೆ ನಡೆಯಲಿದೆ.ಮೃತರು ಪುತ್ರರಾದ ಕುಶಾಲಪ್ಪ ಚೌಟಾಜೆ, ತಿರುಮಲೇಶ್ವರ ಚೌಟಾಜೆ, ಶೇಷಪ್ಪ ಚೌಟಾಜೆ, ಅಕ್ವಾ ಸೊಲ್ಯೂಷನ್ ನ ಜಯರಾಮ ಚೌಟಾಜೆ ಹಾಗೂ ಪುತ್ರಿಯರಾದ ವಾರಿಜ, ನಿರ್ಮಲಾಕ್ಷಿ,...
Ad Widget

ನಿಧನ : ಪಿ.ಎಸ್ ರಾಜನ್ ತಳೂರು

ದೇವಚಳ್ಳ ಗ್ರಾಮದ ತಳೂರು ಶ್ರೀಧರನ್ ಎಂಬುವವರ ಪುತ್ರ ಪಿ.ಎಸ್ ರಾಜನ್ ರವರು ತೀವ್ರ ಅನಾರೋಗ್ಯದಿಂದ ಇಂದು(ಮಾ.23) ನಿಧನರಾದರು. ಮೃತರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು, ಸಹೋದರಿಯರೊಂದಿಗೆ ವಾಸಿಸುತ್ತಿದ್ದರು.

ಕಲ್ಲಡ್ಕದ ಯುವಕ ಗೂನಡ್ಕದಲ್ಲಿ ಆತ್ಮಹತ್ಯೆ

ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ತಿಲಕರಾಜ್ (29) ಎಂದು ಗುರುತಿಸಲಾಗಿದೆ.ತಿಲಕರಾಜ್ ಅವರು ಮಾ.20 ರಂದು ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆ ತೆರಳುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಗೂನಡ್ಕದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು. ಮಾ.21...

ನಿಧನ : ಬಂದ್ಯಡ್ಕ ಲಿಂಗಪ್ಪ ಗೌಡ

ದೇಲಂಪಾಡಿ ಗ್ರಾಮದ ಬಂದ್ಯಡ್ಕ ದಿ.ಹೊನ್ನಪ್ಪ ಗೌಡರ ಪುತ್ರ ಲಿಂಗಪ್ಪ ಗೌಡ ರವರು ಮಾ.19ರಂದು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಸೇಸಮ್ಮ, ಪತ್ನಿ ಭಾರತಿ, ಪುತ್ರಿಯರಾದ ಕು.ಭೂಮಿಕಾ, ಕು.ಪೂರ್ವಿಕಾ, ಪುತ್ರ ಹಾರ್ಧಿಕ್ ಹಾಗೂ ನಾಲ್ವರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು : ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಬೊಳಿಯಾನ ಮನೆಯ ಮಹಿಳೆಯೋರ್ವರ ಮೈಮೇಲೆ ಬೆಂಕಿ ತಗಲಿ ಗಾಯಗೊಂಡಿದ್ದು, 10 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.ಬೊಳಿಯಾನ ಮನೆ ದಿ.ಚಿನ್ನಪ್ಪ ಗೌಡ ಅವರ ಪತ್ನಿ ತಿಲಕ ಮಾ.10ರಂದು ಅಡುಗೆ ಮನೆಯಲ್ಲಿ ಬೆಳಿಗ್ಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹಿಡಿದು ತಿಲಕರವರ...

ನಿಧನ : ವೇದಾವತಿ ಅಗೋಳಿಕಜೆ

ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಅಗೋಳಿಕಜೆ ದಿ.ಚಂದ್ರ ಗೌಡ ಅವರ ಪತ್ನಿ ವೇದಾವತಿ(75) ಆಗೋಳಿಕಜೆ ಅವರು ಮಾ.17 ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂರು ಜನ ಪುತ್ರರಾದ ಚಿದಾನಂದ, ಶೇಖರ, ವಿನೋದ್ ಹಾಗೂ ಪುತ್ರಿ ಸುಶೀಲ ಇವರನ್ನು ಅಗಲಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಲೋಕೇಶ್ ನೂಜಾಲು ನಿಧನ

ಪಿಕಪ್-ಸ್ಕೂಟಿ ಅಪಘಾತದಲ್ಲಿ ಗಾಯಗೊಂಡಿದ್ದ ಐವರ್ನಾಡಿನ ಲೋಕೇಶ್ ನೂಜಾಲುರವರು ಮಾ.17 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.3 ತಿಂಗಳ ಹಿಂದೆ ಐವರ್ನಾಡಿನ ಚೀಮುಳ್ಳು ಎಂಬಲ್ಲಿ ಸ್ಕೂಟಿ ಮತ್ತು ಪಿಕಪ್ ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿಕಿತ್ಸೆ ಪಡೆದು ಇವರು ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಅವರು ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು...

ನಿಧನ : ಝುಲೈಖ ಕಾವಿನಮೂಲೆ ಬೆಳ್ಳಾರೆ

ಬೆಳ್ಳಾರೆ ಗ್ರಾಮದ ಕಾವಿನಮೂಲೆ ದಿ ಮೋನುಚ್ಚ ಪುಡ್ಕಜೆಯವರ ಪತ್ನಿ ಝುಲೈಖ(75) ರವರು ಮಾ 12 ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಕಾವಿನಮೂಲೆಯ ಸ್ವಗೃಹದಲ್ಲಿ ನಿಧನರಾದರು.ಮೃತರು ಏಕೈಕ ಪುತ್ರ ಬೆಳ್ಳಾರೆ ಕೆಳಗಿನ ಪೇಟೆ ಪ್ರಗತಿ ಡ್ರೆಸ್ ಸೆಂಟರ್ ಮಾಲಕ ಹಮೀದ್ ರವರನ್ನು ಅಗಲಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸುಬ್ಬಮ್ಮ ಕಟ್ಟೆಹಿತ್ಲು ನಿಧನ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಹುಟ್ಟೂರು ಕಲ್ಮಡ್ಕದ ಕಟ್ಟೆಹಿತ್ತುನಲ್ಲಿ ವಾಸವಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಅಗಿರುವ ದಿ. ರಘುಕುಮಾ‌ರ್ ನಾಗಮಂಗಲರವರ ಪತ್ನಿ ಶ್ರೀಮತಿ ಸುಬ್ಬಮ್ಮ ಕಟ್ಟೆಹಿತ್ತು ಮಾ. 9 ರಂದು ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಸಹೋದರಿಯರಾದ ಶ್ರೀಮತಿ ಜಯಲಕ್ಷ್ಮಿಯೇನೆಕಲ್ಲು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಲ್ಮಡ್ಕ ಅಂಗನವಾಡಿ...
Loading posts...

All posts loaded

No more posts

error: Content is protected !!