ವೆಂಕಟ್ರಮಣ ಗೌಡ ಹುಲಿಮನೆ ನಿಧನ

ಜಾಲ್ಸೂರು ಗ್ರಾಮದ ಹುಲಿಮನೆಯವರಾದ ವೆಂಕಟ್ರಮಣ ಗೌಡರು ಬೇಂಗಮಲೆಯಲ್ಲಿ ನೆಲೆಸಿದ್ದರು. ಅಲ್ಪಕಾಲದ ಅಸೌಖ್ಯದಿಂದ ಜ.1 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 89 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ , ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಗುತ್ತಿಗಾರು : ಮೋಹಿನಿ ಬಲ್ಬೇರಿ ನಿಧನ

ಗುತ್ತಿಗಾರು ಗ್ರಾಮದ ಬಲ್ಬೇರಿ(ಪಾಲ್ತಾಡಿ) ವಾಚಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಮೋಹಿನಿ ಇವರು ಹೃದಯಾಘಾತದಿಂದ ಜ.1 ರಂದು ನಿಧನರಾದರು.ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯರಾದ ಶ್ರೀಮತಿ ಭವ್ಯ ಗಣೇಶ ನಾವೂರು, ಶ್ರೀಮತಿ ಉಮಾ ಚೇತನ್ ಇಟ್ಟಿಗುಂಡಿ, ಶ್ರೀಮತಿ ಉಷಾ ದಯಾನಂದ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

ಕೋಮಾ ಸ್ಥಿತಿಯಲ್ಲಿದ್ದ ಕೊಲ್ಲಮೊಗ್ರು ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ನಿಧನ

ಕೊಲ್ಲಮೊಗ್ರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ಅವರು ಡಿ.20ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೋ-ಬಿ.ಪಿ ಗೆ ಒಳಗಾಗಿ ಕೋಮಾ ಸ್ಥಿತಿಗೆ ಜಾರಿದ್ದ ಅವರು ಇಂದು(ಡಿ.20) ನಿಧನರಾದರು ಎಂದು ತಿಳಿದುಬಂದಿದೆ.ಮೃತರಿಗೆ 40 ವರ್ಷ ವಯಸ್ಸಾಗಿತ್ತು, ಮೃತರು...

ಮೋಹನ ಗೌಡ ನೇರ್ಪು ನಿಧನ

ಗುತ್ತಿಗಾರು ಗ್ರಾಮದ ಪೈಕ ನೇರ್ಪು ಮೋಹನ ಗೌಡ ಡಿ.17 ರಂದು ನಿಧನರಾದರು. ಮೃತರು  ಸಹೋದರ ಲೋಕಯ್ಯ ಗೌಡ ನೇರ್ಪು, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಳ್ಯದ ಸುದರ್ಶನ ಕೃಷಿ ಏಜೆನ್ಸಿ ಮಾಲಕ ಸುದೇಶ್ ಕುಮಾರ್ ಶೆಟ್ಟಿ ನಿಧನ

ಸುಳ್ಯ ಬೀರಮಂಗಲ ನಿವಾಸಿ ಉದ್ಯಮಿ ಸುಳ್ಯದಲ್ಲಿ ಸುದರ್ಶನ ಕೃಷಿ ಏಜೆನ್ಸಿಯ ಮಾಲಕರಾಗಿದ್ದ ಸುದೇಶ್ ಕುಮಾರ್ ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಕ್ಷತಾ ಶೆಟ್ಟಿ ಹಾಗೂ ಇಬ್ಬರು ಪುತ್ರರರಾದ ಸಮನ್ಯು ಹಾಗೂ ಶುಶಾನ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಬ್ರಹ್ಮಣ್ಯ – ಪಾಲಕ್ಕಾಡ್ ಕೇರಳ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭ

ಸುಬ್ರಹ್ಮಣ್ಯ ಡಿಸೆಂಬರ್ 14 : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಪಾಲಕ್ಕಾಡ್ ನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೇವೆಯನ್ನು ಆರಂಭಿಸಿದೆ. ಈ ಬಸ್ಸು ಸುಬ್ರಹ್ಮಣ್ಯದಿಂದ ರಾತ್ರಿ 7:45 ಸುಳ್ಯದಿಂದ ಹೊರಟು ಮುಲೇರಿಯಾ, ಕಾಸರಗೋಡು, ಕಾಂಞಗಾಡ್, ಪಯ್ಯನೂರು, ಕಣ್ಣೂರು, ಕ್ಯಾಲಿಕಟ್ ಮಾರ್ಗವಾಗಿ ಪಾಲಕ್ಕಾಡ್ ಅನ್ನು ಬೆಳಿಗ್ಗೆ 5:00 ತಲುಪಲಿದೆ. ಸಂಜೆ 7:00 ಗಂಟೆಗೆ ಅಲ್ಲಿಂದ ಪ್ರಯಾಣ...

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮರ್ಕಂಜದ ಕು.ಪವಿತ್ರಾ ನಿಧನ

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕು.ಪವಿತ್ರಾ ಎಂಬುವವರು ಇಂದು(ನ.10) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಮರ್ಕಂಜ ಗ್ರಾಮದ ಮಂಜೋಳ್ ಕಜೆ ದಿ.ಚಿನ್ನಪ್ಪ ಗೌಡ ಎಂಬುವವರ ಪುತ್ರಿಯಾದ ಇವರು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಇವರು ಕಳೆದ 6 ತಿಂಗಳ ಹಿಂದೆ ಟಿ.ಬಿ ಖಾಯಿಲೆ...

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ನಾಲ್ಕೂರಿನ ಯುವಕ ದುರ್ಮರಣ

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಲ್ಗುಜಿ ನಿವಾಸಿ ನಂದನ್ ಭಟ್ ಎಂಬ ಯುವಕ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಸಂಸದರು ಮಧ್ಯಪ್ರವೇಶಿಸಿ ಪ್ರಯತ್ನ ಮಾಡುತ್ತಿದ್ದಾರೆ.ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬುವವರ ಪುತ್ರರಾಗಿರುವ ಇವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು, ಅಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು.ಭಾನುವಾರ...

ನಿವೃತ್ತ ಪ್ರಾಂಶುಪಾಲ  ಡಿ.ಎಸ್.ಕುಶಾಲಪ್ಪ ದೇವರಗುಂಡ ನಿಧನ

ನಿವೃತ್ತ ಪ್ರಾಂಶುಪಾಲ ಗಾಂಧಿನಗರ ನಿವಾಸಿ ದೇವರಗುಂಡ ಡಿ.ಎಸ್.ಕುಶಾಲಪ್ಪ ಸೆ.30 ರಂದು ನಿಧನರಾದರು. ಮೃತರ ಅಂತಿಮ ದರ್ಶನ ನಾಳೆ ಅಕ್ಟೋಬರ್ 01ರಂದು ಬುಧವಾರ ಬೆಳಿಗ್ಗೆ 10:30 ರಿಂದ 12:00 ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಲಾಗಿದ್ದು, ನಂತರ ಅವರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಚಿನ್ನಪ್ಪ ಗೌಡ ಪೂಜಾರಿಮನೆ ನಿಧನ

ಏನೇಕಲ್ಲು ಗ್ರಾಮದ ಪೂಜಾರಿಮನೆ ಚಿನ್ನಪ್ಪ ಗೌಡರು  ಸೆ.21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕರ್ನಾಟಕ ಸರಕಾರದ ವಿಧಾನಸೌಧದಲ್ಲಿ ಗಣ್ಯವ್ಯಕ್ತಿಗಳ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸಿ 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವಿವಾಹಿತರಾಗಿದ್ದ ಇವರು ಅಣ್ಣ...
Loading posts...

All posts loaded

No more posts

error: Content is protected !!