ನಿಧನ : ಸೀಂಕು ಗೌರಿಹೊಳೆ ಬೆಳ್ಳಾರೆ

ಬೆಳ್ಳಾರೆ ಗ್ರಾಮದ ಗೌರಿಹೊಳೆ ಹತ್ತಿರದ ನಿವಾಸಿಯಾದ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ನೌಕರ ದಿ. ಮುದರ ಇವರ ಪತ್ನಿ ಸೀಂಕು ನಿಧನ ಹೊಂದಿದ್ದಾರೆ. ಅವರಿಗೆ 70 ವರುಷ ವಯಸ್ಸಾಗಿತ್ತು. ಇವರಿಗೆ 4 ಜನ ಮಕ್ಕಳಿದ್ದು ಎರಡು ಹೆಣ್ಣು, ಎರಡು ಗಂಡು ಮಕ್ಕಳು ಸೇರಿದಂತೆ ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೃಷ್ಣಪ್ಪ ಗೌಡ ಕುಕ್ಕುಡೇಲು ನಿಧನ

ಐವರ್ನಾಡು ಗ್ರಾಮದ ಕುಕ್ಕುಡೇಲು ಕೃಷ್ಣಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗೀತಾ , ಪುತ್ರ ಕೀರ್ತನ್, ಪುತ್ರಿ ಜಶ್ಮಿತಾ, ಸೊಸೆ ಹರ್ಷಿತಾ, ಮೊಮ್ಮಗಳು, ಸಹೋದರ ಶಾಂತಪ್ಪ ಗೌಡ, ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಓಡಬಾಯಿ : ಕಾರು – ಬೈಕ್ ಅಪಘಾತ – ಗಾಯಾಳು ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತ್ಯು

ಸುಳ್ಯದ ಓಡಬಾಯಿಯಲ್ಲಿ ಜು.31 ರಂದು ರಾತ್ರಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಆ.01 ರಂದು ವರದಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಲವಕುಮಾರ್ ಬಾರೆತ್ತಡ್ಕ ಅವರನ್ಬು ಸುಳ್ಯ ಪೊಲೀಸ್‌ ಠಾಣೆಯ ಸಿಬ್ಬಂದಿ ಪ್ರಕಾಶ್ ರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಬಳಿಕ...

ಮಾಧವ ಪೆರುಮುಂಡ ನಿಧನ

ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಪಿ. ಯಂ ಮಾಧವರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. 29 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮೋಹನಾಂಗಿ,ಪುತ್ರ ಯತೀಶ, ಪುತ್ರಿಯರಾದ ಜಯಕುಮಾರಿ, ಲತಾಮಣಿ, ಉಷಾ, ಅಳಿಯಂದಿರು, ಮೊಮ್ಮಕ್ಕಳು, ಸಹೋದರ, ಸಹೋದರಿಯರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

ಮೈಸೂರಿನಲ್ಲಿ ಬೈಕ್ ಅಪಘಾತ – ಕಾಂತಮಂಗಲದ ಯುವಕ ಮೃತ್ಯು

ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಜ್ಜಾವರ ಕಾಂತಮಂಗಲ ಯುವಕ ನಿಕೇಶ್ ಮೃತಪಟ್ಟ ಘಟನೆ ಜು.26 ನಡೆದಿದೆ. ಜು.24ರಂದು ಮೈಸೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡ ನಿಕೇಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿಕೇಶ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಮೃತರು ತಂದೆ ಜಗದೀಶ್,...

ಸಹಕಾರಿ ಧುರೀಣ ಚೆಂಬು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಮಾಜ ಸೇವಕ ಆದಂ ಕುಂಞ ಸಂಟ್ಯಾರ್ ಹೃದಯಾಘಾತದಿಂದ ನಿಧನ

ಚೆಂಬು ಗ್ರಾಮ ಪಂಚಾಯತ್ ಮತ್ತು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಜನಪ್ರೀಯ ಸಮಾಜಸೇವಕರಾದ ಆದಂ ಕುಂಞ ಸಂಟ್ಯಾರ್ ರವರು ಇದೀಗ ಹೃದಯಾಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಮೃತರಿಗೆ 60 ವರ್ಷ ವಯಸ್ಸಾಗಿತ್ತು. ಇಂದು(ಜು.25) ಸಂಪಾಜೆ ಪಯಸ್ವಿನಿ ಸಹಕಾರಿ ಬ್ಯಾಂಕ್ ಮಹಾಸಭೆ ನಡೆಯುತ್ತಿತ್ತು. ಆದಂ ರವರು ಮಹಾಸಭೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ...

ಸಾಹಿತಿ ಎ.ಕೆ. ಹಿಮಕರರಿಗೆ ಮಾತೃ ವಿಯೋಗ

ಗುತ್ತಿಗಾರು ಗ್ರಾಮದ ದಿ. ಆರ್ನೋಜಿ ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಅಕ್ಕಯ್ಯರವರು ಅಸೌಖ್ಯದಿಂದ ಜು. 21 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸಾಹಿತಿ ಎ.ಕೆ. ಹಿಮಕರ, ಪ್ರಗತಿಪರ ಕೃಷಿಕರಾದ ರಾಘವ, ಗೋಪಾಲಕೃಷ್ಣ, ಪುತ್ರಿಯರಾದ ತಾರಾವತಿ, ಭವಾನಿ, ಹೇಮಾವತಿ, ಸೊಸೆ, ಅಳಿಯಂದಿರು,ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ....

ಕೇಪಣ್ಣ ಗೌಡ ಪರಿವಾರ ನಿಧನ

ಆಲೆಟ್ಟಿ ಗ್ರಾಮದ ಪರಿವಾರ ಕುಟುಂಬದ ಹಿರಿಯರಾದ ಕೇಪಣ್ಣ ಗೌಡ ಸ್ವಗೃಹದಲ್ಲಿ ಜು.16 ರಂದು ನಿಧನರಾದರು. ಮೃತರು ಪತ್ನಿ ಮೋಹಿನಿ ಪುತ್ರ ಪುರುಷೋತ್ತಮ, ಪುತ್ರಿ ಶೀಲಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ದ. ಕ. ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿ ಲಿಗೋದರ ಆಚಾರ್ಯ ನಿಧನ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಟೈಲರ್ ಯೂನಿಯನ್ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಲಿಗೋದರ ಆಚಾರ್ಯ ಅವರು ಇಂದು ನಿಧನರಾದರು. ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಜಯಂತಿ, ಪುತ್ರಿ ಅರ್ಚನಾ, ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾಳೆ ಬೆಳಗ್ಗೆ...

ನಿಧನ : ಚಂದ್ರಶೇಖರ ನೂಚಿಲ

ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ವಾರಿಜಾಕ್ಷಿ ರವರ ಪತಿ ಚಂದ್ರಶೇಖರ ನೂಚಿಲ ರವರು ಇಂದು(ಜು.13) ನಿಧನರಾಗಿದ್ದು, ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!