- Tuesday
- July 28th, 2026
ಕಲ್ಲಾಜೆ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ಡೆಪ್ಟೇಶನ್ ಮೂಲಕ ಬಾನಡ್ಕ ಕಿ.ಪ್ರಾ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಮಾಸ್ತರ್ ಮಾದನಮನೆಯವರು ಡಿ. 1ರಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 52 ವರ್ಷ ವಯಸ್ಸಾಗಿತ್ತು. ವಿಶೇಷ ಚೇತನ ಮಕ್ಕಳ ಏಳಿಗೆಗಾಗಿ ಶಶಾಂಕ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿ ಆ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿಯಾಗಿದ್ದರು. ಮೃತರು ಪತ್ನಿ ಬಾನಡ್ಕ...
ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ.ಶೇಷಪ್ಪ ಗೌಡರ ಧರ್ಮಪತ್ನಿ ದೇವಕಿ (75) ಅಲ್ಪಕಾಲದ ಅಸೌಖ್ಯದಿಂದ ನ.22ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಮೋಹನ,ರವೀಂದ್ರ, ಉದಯಕುಮಾರ, ಪುತ್ರಿ ಶೇಷಮ್ಮ ಹಾಗೂ ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.
ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ದುಗಲಡ್ಕದ ನೀರಬಿದಿರೆ (ಕೊಯಿಕುಳಿ ಶಾಲಾ ಬಳಿ) ನಾರಾಯಣ ಎಂಬವರ ಪತ್ನಿ ಲಲಿತ (40) ಸಂಬಂಧಿಕರಾದ ನಾಗೇಶ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದರೆಂದೂ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೇ ಅವರು...
ಶೇಣಿ ನಾಟಿ ವೈದ್ಯೆ ರತ್ನವತಿ ಅ. 28 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಹಲವಾರು ವರ್ಷಗಳಿಂದ ನಾಟಿವೈದ್ಯೆಯಾಗಿ ಹೆಸರುವಾಸಿಯಾಗಿದ್ದರು.ಇವರಿಗೆ 82 ವರ್ಷ ವಯಸ್ಸಾಗಿತ್ತು. ಮೖತರು ಪುತ್ರರಾದ ಮಾಯಿಲಪ್ಪ, ಜನಾರ್ದನ ಪುತ್ರಿಯರಾದ ಪಾರ್ವತಿ, ಮೋಹಿನಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಮರ್ಕಂಜದಿಂದ ಒಂದುವರೆ ವರ್ಷಗಳ ಹಿಂದೆ ಪುತ್ತೂರಿನ ಕಾವು ಗೆ ಮದುವೆಯಾಗಿದ್ದ ಮಹಿಳೆ ಅ.15 ರಂದು ಹೆರಿಗೆ ವೇಳೆ ರಕ್ತಸ್ರಾವಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25 ) ಮೃತಪಟ್ಟ ದುರ್ದೈವಿ. ಹೆರಿಗೆಗೆಂದು ಪುತ್ತೂರಿನ ಪ್ರಗತಿ ಹಾಸ್ಟಿಟಲ್ ಗೆ ದಾಖಲಾಗಿದ್ದರು. ಅಲ್ಲಿ ಹೆರಿಗೆ ವೇಳೆ ರಕ್ತಸ್ರಾವ...
ಎಡಮಂಗಲ ಗ್ರಾಮದ ಕೋಡಿಮಜಲು ಜಾನಕಿ ಬಂಗೇರರು ಅ. 8 ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿ ದುಡಿದಿರುವುದಲ್ಲದೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎಡಮಂಗಲ ಗ್ರಾ.ಪಂ. ಸದಸ್ಯರಾಗಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಡಮಂಗಲ...
ಅರಂತೋಡು ಗ್ರಾಮದ ಬಿಳಿಯಾರು ಕಾಟೂರು ಐತಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಜನಾರ್ದನ ಕಾಟೂರು, ಗೋಪಾಲಕೃಷ್ಣ ಕಾಟೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ದೇವಚಳ್ಳ ಗ್ರಾಮದ ಅಡ್ಡನಪಾರೆ ದಿ.ಬಟ್ಯ ಅಜಲ ರ ಪುತ್ರ ಕುಸುಮಾಧರ ಅಡ್ಡನಪಾರೆ ಅಲ್ಪಕಾಲದ ಅಸೌಖ್ಯದಿಂದ ಅ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜ್ವರ, ವಾಂತಿ ಭೇದಿ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಉಲ್ಬಣಿಸಿ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗಲಿಲ್ಲವೆಂದು ತಿಳಿದುಬಂದಿದೆ. ಅವರಿಗೆ 32 ವರ್ಷ ವಯಸ್ಸಾಗಿತ್ತು....
ಬಾಳಿಲ ಪಾಜಪಳ್ಳ ದಿ. ಸೈಯದ್ ಹುಸೈನ್ ರವರ ಪತ್ನಿ ಬೆಹರುನ್ನೀಸಾ ಸೆ.29 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುಳ್ಯದ ಗುರು ಪ್ರಕಾಶ್ ಕೇಬಲ್ ನೆಟ್ ವರ್ಕ್ ಮಾಲಕ, ಹಿರಿಯ ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕ ಗುರುದತ್ ನಾಯಕ್ ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.ಕಿಡ್ನಿ ಸಮಸ್ಯೆಯಿಂದ ಕೆಲ ಸಮಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಆರಂಭಿಸಲಾಗಿತ್ತು. ವಾರದ ಹಿಂದೆ ಅಸೌಖ್ಯ ಉಲ್ಬಣಗೊಂಡಿತ್ತು. ಅವರ ಅಂತ್ಯ ಸಂಸ್ಕಾರ...
Loading posts...
All posts loaded
No more posts
