- Tuesday
- July 28th, 2026
ಆಲೆಟ್ಟಿ ಗ್ರಾಮದ ಮಾಣಿಮರ್ಧು ಜನಾರ್ದನ ನಾಯ್ಕ ಎಂಬವರು ಅಗಸ್ಟ್ 31 ನಿಧನರಾದರು. ಅನಾರೋಗ್ಯಕ್ಕೊಳಗಾದ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಹೃದಯಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಶ್ರೀದೇವಿ, ಸುನಿತ, ದಮಯಂತಿ,ದೇವಿಪ್ರಸಾದ ಮತ್ತು ಸಹೊದರ ಸಹೋದರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಸ್ನೇಹಜೀವಿ ಪುಷ್ಪಾಕರ ಮಾವಿನಕಟ್ಟೆ ಅಲ್ಪ ಕಾಲದ ಅಸೌಖ್ಯದಿಂದ ಇಂದು(ಆ.26) ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಂದೆ,ತಾಯಿ, ಪತ್ನಿ, ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅಟೋ ಚಾಲಕರಾಗಿ ಜನರೊಂದಿಗೆ ಸ್ನೇಹಜೀವಿಯಾಗಿದ್ದ ಇವರು ತಾ.ಪಂ.ಸದಸ್ಯೆ ಯಶೋಧ ಬಾಳೆಗುಡ್ಡೆ ಯವರ ಸಹೋದರ.
ಕೆವಿಜಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೊಲ್ಲಮೊಗ್ರದ ಸತ್ತಾರ್ (35) ಎಂಬ ಯುವಕ ಮಾನಸಿಕ ಅಸ್ವಸ್ಥರಾಗಿ ಚಿಕಿತ್ಸೆ ಎರಡು ದಿನಗಳ ಹಿಂದೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಇಂದು ಸಂಜೆ ವೇಳೆಗೆ ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದರೆಂದು ತಿಳಿದು ಬಂದಿದೆ. ಅವರನ್ನು ಜೊತೆಗಿದ್ದ ವ್ಯಕ್ತಿ...
ಅಮರಮುಡ್ನೂರು ಗ್ರಾಮದ ದೊಡ್ಡತೋಟ ನಿವಾಸಿ, ಅಮರಮುಡ್ನೂರು ಗ್ರಾ.ಪಂ. ಮಾಜಿ ಸದಸ್ಯ ಶಿವರಾಮ ಗೌಡ ಕಾಸಿನಗೋಡ್ಲು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 6೦ ವರ್ಷ ವಯಸ್ಸಾಗಿತ್ತು. 2000-05 ನೇ ಅವಧಿಯಲ್ಲಿ ಅಮರಮುಡ್ನೂರು ಗ್ರಾ.ಪಂ. ಸದಸ್ಯರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ ಮಾಜಿ ಗ್ರಾ.ಪಂ. ಸದಸ್ಯೆ ಶಾಲಿನಿ, ಪುತ್ರ ಶರತ್,...
ದೇಶದ 13 ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಇಂದು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್ 19 ಭಾದಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. 1935 ಡಿಸೆಂಬರ್ 11 ರಂದು ಪಶ್ಚಿಮ ಬಂಗಾಳದ ಬೀರ್ ಬೂಂ ನಲ್ಲಿ ಜನಿಸಿದ್ದರು. ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಾಂಗ್ಲಾ ಕಾಂಗ್ರೆಸ್ ನಿಂದ ರಾಜಕೀಯಕ್ಕೆ ಬಂದ ಇವರು...
ಗುತ್ತಿಗಾರು ಗ್ರಾಮದ ಅಡ್ಡನಪಾರೆ ಲಕ್ಷ್ಮಣ ಆಚಾರ್ಯ ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 5 ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೋಭಾವತಿ, ಪುತ್ರರಾದ ಮಾಜಿ ಗ್ರಾ.ಪಂ.ಸದಸ್ಯರುಗಳಾದ ಗಂಗಾಧರ, ಭವಾನಿಶಂಕರ, ಪುತ್ರಿ ಚಂದ್ರಕಲಾ ಅಳಿಯ,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ. ಶೇಷಪ್ಪ ಗೌಡರ ಪುತ್ರ ಪದ್ಮಯ್ಯ ಗೌಡ ಆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಪದ್ಮಾವತಿ,ಮೂವರು ಪುತ್ರಿಯರು, ಅಳಿಯಂದಿರು, ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
ಕನಕಮಜಲಿನ ಅಬೂಬಕ್ಕರ್ ಉಸ್ತಾದ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಮಸ್ತದ ಹಿರಿಯ ಗುರುಗಳಾಗಿದ್ದು ಅಪಾರ ಅನುಯಾಯಿಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.
ಜಾಲ್ಸೂರು ಗ್ರಾಮದ ಕೆಮನಬಳ್ಳಿ ದಿ.ಶೀನಪ್ಪ ಗೌಡರ ಧರ್ಮಪತ್ನಿ ಅಮ್ಮಕ್ಕ ಕೆಮನಬಳ್ಳಿ(87) ಇಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಓರ್ವ ಪುತ್ರ, ಏಳು ಪುತ್ರಿಯರು,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts
