ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ, ಆಟೊ ಚಾಲಕ ರಿಚರ್ಡ್ ಕ್ರಾಸ್ತ ನಿಧನ

ಸುಳ್ಯದ ಹಿರಿಯ ರಿಕ್ಷಾ ಚಾಲಕ ಹಾಗೂ ಹಿರಿಯ ಕಮ್ಯುನಿಸ್ಟ್ ಕಾರ್ಯಕರ್ತ ರಿಚರ್ಡ್ ಕ್ರಾಸ್ತರವರು ಇಂದು ಮುಂಜಾನೆ 5.30 ರ ವೇಳೆ ಹೃದಯಾಘಾತದಿಂದ ಸುಳ್ಯ ಜಯನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಸುಮಾರು 64 ವರ್ಷ ವಯಸ್ಸಾಗಿತ್ತು.  ಮುಂಜಾನೆ  ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಕೊನೆಯುಸಿರೆಳೆದರೆನ್ನಲಾಗಿದೆ. ಮನೆಯವರು ವೈದ್ಯರಲ್ಲಿ  ಮೊದಲು ಜ್ಯೋತಿ ಆಸ್ಪತ್ರೆಗೆ, ಬಳಿಕ ಕೆ.ವಿ.ಜಿ....

ಸಂಜೀವ ಮಡಿವಾಳ ಕೈವಲ್ತಡ್ಕ ನಿಧನ

ಐವರ್ನಾಡು ಗ್ರಾಮದ ಕೈವಲ್ತಡ್ಕ ಸಂಜೀವ ಮಡಿವಾಳರವರು ಜೂ.17 ರಂದು ನಿಧನರಾದರು. ಅವರಿಗೆ 79 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರರಾದ ಜಗದೀಶ ಕೈವಲ್ತಡ್ಕ ಪುತ್ರಿಯರಾದ ಶ್ರೀಮತಿ ಲೀಲಾವತಿ ,ಶ್ರೀಮತಿ ಗೀತಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

ಅಲೆಕ್ಕಾಡಿ : ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು

ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಕಾರ್ಮಿಕನೊಬ್ಬ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಅಲೆಕ್ಕಾಡಿ ಸಮೀಪ ಪಿಜಾವು ಎಂಬಲ್ಲಿ ಕಡಬದ ಕೃಷ್ಣ ಎಲೆಕ್ಟ್ರಿಕಲ್ ನ ಕಾರ್ಮಿಕ ಬೆಳ್ತಂಗಡಿಯ ಪ್ರಕಾಶ್ ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಕಂಬದಿಂದ ಬಿದ್ದು ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.ವಿದ್ಯುತ್ ಆಫ್ ಮಾಡಿ ಕೆಲಸ...

ಕಾಂತಮಂಗಲ ಕೊಲೆ ಮಾದರಿಯಲ್ಲಿ ಶವ ಪತ್ತೆ ಹಿನ್ನಲೆ ಪೋಲಿಸ್ ಇಲಾಖೆ ತನಿಖೆ ಆರಂಭ

ಸುಳ್ಯ: ಸುಳ್ಯ ಕಾಂತಮಂಗಲ ಶಾಲೆಯ ಊಟದ ಹಾಲ್ ಮುಂಭಾಗದಲ್ಲಿ ಕೊಲೆ ಮಾದರಿಯಲ್ಲಿ ಶವ ಪತ್ತೆಯಾಗಿದ್ದು ಸುಬ್ರಹ್ಮಣ್ಯ ತನಿಖಾ  ಠಾಣಾ ಎಸೈ ಮಹೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು ಇದೀಗ ಸ್ಥಳಕ್ಕೆ ಪುತ್ತೂರು ಡಿವೈಎಸ್ ಪಿ ಆಗಮಿಸಿದ್ದು ಪರಿಶೀಲನೆ ನಡೆಸಲಾಗುತ್ತಿದ್ದು ಮೃತಪಟ್ಟ ವ್ಯಕ್ತಿಯು ಅಪರಿಚಿತನಾಗಿದ್ದು, ಶವದ ಬಳಿಯಲ್ಲಿ ಒಂದು ಸಿಮ್ ಕಾರ್ಡ್ ಲಭ್ಯವಾಗಿದ್ದು ಅಲ್ಲದೆ ತಲೆ ಕಲ್ಲಿನಿಂದ ಜಜ್ಜಿದ...

ಬಾಲಕೃಷ್ಣ ಆಚಾರ್ಯ ಹೊಸಹಳ್ಳಿ, ಹಾಲೆಮಜಲು ನಿಧನ

ಪುತ್ತೂರಿನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ನಾಲ್ಕೂರು  ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ  ಬಾಲಕೃಷ್ಣ ಆಚಾರ್ಯ ಜೂ.13ರಂದು ಕೆಲ ಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ದಮಯಂತಿ, ಪತ್ನಿ  ಕಾವ್ಯ, ಪುತ್ರಿ ನಿದ್ವಿಕಾ,  ಸಹೋದರ  ಹಾಲೆಮಜಲಿನಲ್ಲಿ ಸುದ್ದಿ ವಿತರಕರಾಗಿರುವ  ವಿಜಯಕುಮಾರ್,  ಸಹೋದರ ಯತೀಶ್,  ಸಹೋದರಿ ಶ್ರೀಮತಿ ಉಷಾ ಹಾಗೂ ಕುಟುಂಬಸ್ಥರು ಹಾಗೂ...

ಪೂಜಾರಿಮನೆ ಗಂಗಾಧರ ಗೌಡ ನಿಧನ

ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ಗಂಗಾಧರ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪ್ರೇಮ ಕುಮಾರಿ, ಪುತ್ರರಾದ ವಿನೋದ್, ದೀಪಕ್ ಹನೀತ್, ದರ್ಶನ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಬಾಳುಗೋಡು: ಯುವಕ ನೇಣು ಬಿಗಿದು ಆತ್ಮಹತ್ಯೆ

ಬಾಳುಗೋಡು ಗ್ರಾಮದ ಪದಕ ನಿವಾಸಿ ವ್ಯಕ್ತಿಯೊಬ್ಬ ತನ್ನ ಮನೆಯಿಂದು ಸೂಮಾರು 4 ಕಿ .ಮಿ ದೂರದಲ್ಲಿರುವ ಮಾನಡ್ಕ ಎಂಬಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ದಿl ರಾಮಚಂದ್ರ ಆಚಾರ್ಯ ಅವರ ಪುತ್ರ, ಹರಿಹರ ಪ್ರೌಢಶಾಲಾ ಬಳಿ ಬಡಗಿ ವೃತ್ತಿ ನಡೆಸುತಿದ್ದ ಪ್ರಕಾಶ್ ಆಚಾರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 31...

ಎಡಮಂಗಲದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ

ಎಡಮಂಗಲ ಗ್ರಾಮದ ಪುಚ್ಚಾಜೆ ದಿ.ಪುಟ್ಟಣ್ಣ ಗೌಡರವರ ಪುತ್ರ ಪ್ರಸನ್ನ ಕುಮಾ‌ರ್ ಮೇ 20 ರಂದು ಬೆಂಗಳೂರಿನಲ್ಲಿ ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತರು ಬೆಂಗಳೂರಿನ ಮಾರತಹಳ್ಳಿಯ ಸಂಸ್ಥೆಯೊಂದರಲ್ಲಿ ಎ.ಸಿ ಟೆಕ್ನಿಷಿಯನ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಸಂಸ್ಥೆಯ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 26 ವರ್ಷ...

ಚೊಕ್ಕಾಡಿ : ವಿಶ್ವನಾಥ ಮುಗೇರ ಕೆ. ನಿಧನ

  ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ವಿಶ್ವನಾಥ ಮುಗೇರ .ಕೆ( 57 ವರ್ಷ)ರವರು ಮೇ.17 ರಂದು ನಿಧನ ಹೊಂದಿದರು. ಕಳೆದ 37 ವರ್ಷಗಳಿಂದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಜವಾನ ಮತ್ತು ಕಾವಲುಗಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.  ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ   ನಿಧನ ಹೊಂದಿದರು.ಮೃತರು ಪತ್ನಿ ಶ್ರೀಮತಿ ಮೀನಾಕ್ಷಿ ಹಾಗೂ ಸಹೋದರ ಸಹೋದರಿಯರನ್ನು,...

ನಡುಬೆಟ್ಟು ಕರುಣಾಕರ ಗೌಡ  ನಿಧನ

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಕರುಣಾಕರ ಗೌಡ ಎಂಬವರು ಹೃದಯಾಘಾತದಿಂದ ನಿಧನರಾದ ಘಟನೆ ಇಂದು ನಡೆದಿದೆ.ಮಡಪ್ಪಾಡಿಯ ಪುರುಷೋತ್ತಮ ಎಂಬವರು ನಡೆಸುತ್ತಿರುವ ಕೋಳಿ ಫಾರಂಗೆ ಭತ್ತದ ಹೊಟ್ಟು ತರಲು ಪುರುಷೋತ್ತಮರೊಂದಿಗೆ ಮಡಿಕೇರಿ ಇಂದು ತೆರಳಿದ್ದರು.ಅಲ್ಲಿ ವಾಹನಕ್ಕೆ ಲೋಡ್ ಮಾಡುತ್ತಿರುವ ಸಂದರ್ಭ ಕರುಣಾಕರವರು ಒಮ್ಮಿಂದೊಮ್ಮೆಲೆ ಕುಸಿದು ಬಿದ್ದರೆಂದೂ ಅ ಕೂಡಲೇ ಅಲ್ಲಿದ್ದವರು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋದರೆನ್ನಲಾಗಿದೆ. ಆ ಸಂದರ್ಭದಲ್ಲಿ...
Loading posts...

All posts loaded

No more posts

error: Content is protected !!