ಮರ್ಕಂಜ : ರವಿಕುಮಾರ ಪೂಜಾರಿ ಬಳ್ಳಕ್ಕಾನ ನಿಧನ

ಮರ್ಕಂಜ ಗ್ರಾಮದ ಬಳ್ಳಕ್ಕಾನ ಮೋನಪ್ಪ ಪೂಜಾರಿ ಎಂಬವರ ಪುತ್ರ ರವಿಕುಮಾರ ಎಂಬವರು‌ ನಿನ್ನೆ ರಾತ್ರಿ ಅಸೌಖ್ಯದಿಂದ ನಿಧನರಾದರು. ‌ಅವರಿಗೆ 38 ವರ್ಷ ವಯಸ್ಸಾಗಿತ್ತು. ‌ಮೃತರು ತಂದೆ, ತಾಯಿ ಪುಷ್ಪಾವತಿ, ಪತ್ನಿ ಪ್ರೇಮ, ಮಗಳು ವರ್ಷಿಣಿ, ಮಗ ಪ್ರೀತಮ್, ಸಹೋದರಿ ಜಯಶ್ರೀ ಸಹೋದರ ರಾಜೇಶ್ ರನ್ನು ಅಗಲಿದ್ದಾರೆ.

ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದ ಬೆಳ್ಳಿಪ್ಪಾಡಿಯ ಯುವಕ ಮೃತ್ಯು

ಸುಳ್ಯದ ಕುರುಂಜಿಭಾಗ್ ನಲ್ಲಿರುವ ಮಧುವನ ಹೋಟೇಲ್ ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಅಲ್ಪ ಕಾಲದ ಅನಾರೋಗ್ಯದಿಂದ ಜು.21 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದಿ.ರಾಮಣ್ಣ ಗೌಡರ ಪುತ್ರ ಶಿವಪ್ರಕಾಶ್ (32) ಮೃತಪಟ್ಟ ದುರ್ದೈವಿ. ಮೃತರು ಸಹೋದರರಾದ ಪದ್ಮನಾಭ, ಸುಳ್ಯದಲ್ಲಿ ಹೋಟೆಲ್ ಉದ್ಯಮಿಗಳಾಗಿರುವ ಚಿದಾನಂದ, ಲವಕುಮಾರ್,...
Ad Widget

ಕಮಲ ತಳೂರು ನಿಧನ

ಮಡಪಾಡಿ ಗ್ರಾಮದ ತಳೂರು ಹೂವಪ್ಪ ಗೌಡರ ಧರ್ಮಪತ್ನಿ ಕಮಲ ರವರು ಅಲ್ಪ ಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಇವರು ಪತಿ ಹೂವಪ್ಪ ಗೌಡ ತಳೂರು,ಮಗ ರವಿ ತಳೂರು, ಮಗಳು ಶ್ರೀಮತಿ ರಶ್ಮಿ ಹಾಗೂ ಕುಟುಂಬಸ್ಥರನ್ನು ಅಗಲಿರುತ್ತಾರೆ.

ನಿಧನ : ದೇವರಹಳ್ಳಿ ದೊಡ್ಡಮನೆ ಲಿಂಗಪ್ಪ ಗೌಡ(ಜಯರಾಮ ಮಾಣಿಬೈಲು)

ಏನೆಕಲ್ಲು ಗ್ರಾಮದ ದೇವರಹಳ್ಳಿ ದೊಡ್ಡಮನೆ ಲಿಂಗಪ್ಪ ಗೌಡ(ಜಯರಾಮ ಮಾಣಿಬೈಲು) ಎಂಬುವವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ 64 ವರ್ಷ ವಯಸ್ಸಾಗಿತ್ತು.ಇವರು ದೇವರಹಳ್ಳಿಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ಅಲ್ಲದೇ ಮಾಣಿಬೈಲು ಕುಟುಂಬದ ಊರಿನ ದೈವದ ಪೂಜಾರಿಯಾಗಿ ಸೇವೆ ಮಾಡಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಸಹೋದರ-ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಸೋಣಂಗೇರಿ : ಕೆರೆಗೆ ಬಿದ್ದು ವೃದ್ಧೆ ಮೃತ್ಯು

ಕೆರೆಗೆ ಕಾಲು ಜಾರಿ ಬಿದ್ದು ವಯೋವೃದ್ಧೆಯೋರ್ವರು ಮೃತಪಟ್ಟ ಘಟನೆ ಜಾಲ್ಕೂರು ಗ್ರಾಮದ ಸೋಣಂಗೇರಿಯಲ್ಲಿ ಜು.15ರಂದು ಬೆಳಿಗ್ಗೆ ಸಂಭವಿಸಿದೆ.ಸೋಣಂಗೇರಿ ದಿ.ಮಂಜಪ್ಪ ಶೆಟ್ಟಿ ಅವರ ಧರ್ಮಪತ್ನಿ ಮಾನಕ್ಕರವರ ಶವ ಅವರು ಬೆಳಿಗ್ಗೆ ತಮ್ಮ ತೋಟದಲ್ಲಿ ಕೆರೆಗೆ ಬಿದ್ದಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು ಇಬ್ಬರು ಪುತ್ರಿಯರಾದ ಜಯಶ್ರೀ, ಮಂಜುಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ನಿಧನ

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಿರಿಯರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ರವರು ಇಂದು ಬೆಳಗ್ಗೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಹಾಗೂ ಓರ್ವ ಪುತ್ರ. ಶಿವಪ್ರಸಾದ್, ಓರ್ವ ಪುತ್ರಿ ಮಹಾಲಕ್ಷ್ಮಿ ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ ಕಂಚುಗಾರಗದ್ದೆ ನಿಧನ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಹೂವಪ್ಪ ಗೌಡ ಕಂಚುಗಾರಗದ್ದೆ ಅವರು ಕೆಲವು ಸಮಯಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದು, ಜುಲೈ 08 ರಂದು ರಾತ್ರಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ 59 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಕೊಲ್ಲಮೊಗ್ರು ಕಟ್ಟ ಗೋವಿಂದನಗರದ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ, ಮಕ್ಕಳಾದ ಪ್ರಜ್ವಲ್, ವೈಶಾಲಿ ಹಾಗೂ...

ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು,: ಉಳ್ಳಾಲ ಖಾಝಿ, ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ಪ್ರಾಯವಾಗಿತ್ತು.ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್...

ಚೋಮ ಮುಗೇರ ನಿಧನ

ದೇವಚಳ್ಳ ಗ್ರಾಮ ದ ಬಾಜಿನಡ್ಕ ನಿವಾಸಿ ಸುಳ್ಯದ ಎನ್ ಎಂ ಸಿ ಯಲ್ಲಿ ಎಟೆಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚೋಮ ಮುಗೇರ ಜೂ. 30 ರಂದು ಸ್ವಗೃಹ ದಲ್ಲಿ ನಿಧನರಾದರು. ಮೃತರು  ಪತ್ನಿ, ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಗೋಳ್ಯಾಡಿ ಗುರುಪ್ರಸಾದ್ ನಿಧನ

ಮಡಪ್ಪಾಡಿ ಗ್ರಾಮದ ಗೋಳ್ಯಾಡಿ ದಿ। ಕುಶಾಲಪ್ಪ ಎಂಬವರ ಪುತ್ರ ಗುರುಪ್ರಸಾದ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ 50 ವರ್ಷ ಪ್ರಾಯವಾಗಿತ್ತು. ಮೃತರು ತಾಯಿ, ಪತ್ನಿ, ಒಂದು ಗಂಡು, ಒಂದು ಹೆಣ್ಣು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!