ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ನಿಧನ

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ( ಮೇ. 15 ) ನಿಧನರಾದರು.ಅರಂತೋಡುನ ಬಿಳಿಯಾರಿನಲ್ಲಿ ವಾಸವಾಗಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ಕುಸುಮಾಧರ, ಪುತ್ರಿಯರಾದ ಪ್ರೇಮಲತಾ, ವಸಂತಿ, ಸುಲೋಚನ, ಡಾ. ಅನುರಾಧಾ ಕುರುಂಜಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಧರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕೊಡಿಯಾಲ : ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವಕ; ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪೊಲೀಸ್ ದೂರು

ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುದರಿಂದ, ಪೋಷಕರು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.ಕೊಡಿಯಾಲ ಗ್ರಾಮದ ಪೋನಡ್ಕ ಮನೆ ತಿಮ್ಮಪ್ಪ ಎಂಬವರ ಪುತ್ರ ನಿತಿನ್ ಕುಮಾರ್ (19) ಎಂಬ ಯುವಕ  ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೇ.8 ರಂದು ಮೃತಪಟ್ಟಿದ್ದಾರೆ.  ಈ ಬಗ್ಗೆ ಖಾಸಗಿ...
Ad Widget

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಇತ್ತೀಚೆಗೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ...

ಹೃದಯಾಘಾತವಾಗಿ ಕೇಶವ ಗೌಡ ಹುದೇರಿ  ನಿಧನ

ಮುರುಳ್ಯ ಗ್ರಾಮದ ಹುದೇರಿ ದಿ.ಸಂಕಪ್ಪ ಗೌಡರ ಪುತ್ರ ಕೇಶವರವರು ಹೃದಯಾಘಾತದಿಂದ ಎ.29 ರಂದು ಮುಂಬೈಯಲ್ಲಿ ನಿಧನರಾದರು. ಇವರು ಮುಂಬೈಯ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಮೃತರು ಪತ್ನಿ ತಾರಾ, ಇಬ್ಬರು ಪುತ್ರಿಯರು, ಇಬ್ಬರು ಸಹೋದರರು, ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತದೇಹವು ಮುಂಬೈಯಿಂದ ಊರಿಗೆ ತಲುಪಿದ್ದು,  ಅಂತ್ಯಸಂಸ್ಕಾರ ಮಾಡಲಾಯಿತು.

ಮಂಡೆಕೋಲು : ಮನೆಯೊಳಗೆ ಕುಸಿದು ಬಿದ್ದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ !!

ಮಂಡೆಕೋಲು ಗ್ರಾಮದ ಕುತ್ಯಾಡಿ ಎಂಬಲ್ಲಿ ಯುವಕನೋರ್ವ ಕುಸಿದುಬಿದ್ದು ತಲೆಗೆ ಏಟು ತಗುಲಿ ಮೃತಪಟ್ಟ ರೀತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಇದೀಗ ವರದಿಯಾಗಿದೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು,ತನಿಖೆ‌ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಹೆಚ್ವಿನ ತನಿಖೆಗಾಗಿ ವಿಧಿವಿಜ್ಞಾನ ಇಲಾಖೆಯ ತಂಡ ಆಗಮಿಸಲಿದೆ ಎನ್ನಲಾಗಿದೆ. ಮೃತಪಟ್ಟ ಯುವಕನನ್ನು ಸಚಿನ್ ಎಂದು ಹೇಳಲಾಗುತ್ತಿದ್ದು ಈತನು ಪೈಟಿಂಗ್ ವೃತ್ತಿಯನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು...

ಅಗಲಿದ ಕರಸೇವಕ ಗಂಗಾಧರ ಮಾವಿನಗೋಡ್ಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ರಾಷ್ಟೀಯ ಸ್ವಯಂ ಸೇವಾಸಂಘ ಎಲಿಮಲೆ ಶಾಖೆ, ವಿಶ್ವಹಿಂದು ಪರಿಷತ್ ಬಜರಂಗದಳ ಅಯ್ಯೋದ್ಯೆ ಶಾಖೆ ಎಲಿಮಲೆ ಮಿತ್ರ ಬಳಗ(ರಿ) ಎಲಿಮಲೆ ಇದರ ನೇತೃತ್ವದಲ್ಲಿ  ದಿ.ಗಂಗಾಧರ ಮಾವಿನಗೋಡ್ಲು ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಮಾ.೩೧ ಅದಿತ್ಯವಾರ ಸಂಜೆ ಗಂಟೆ ೬ಕ್ಕೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮೃತರು ಅನೇಕ ವರ್ಷಗಳ ಕಾಲ ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ...

ಕಲ್ಲುಗುಂಡಿ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು  ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತ್ಯು!

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪಾಜೆಯ ವ್ಯಕ್ತಿ ಮೃತ ಪಟ್ಟ ಘಟನೆ ವರದಿಯಾಗಿದೆ.ಸಂಪಾಜೆ ಗ್ರಾಮದ ಕಲ್ಲುಗುಂಡಿ ಮೇಲಿನ ಪೇಟೆಯಲ್ಲಿ ರಸ್ತೆ ಬದಿಯಲ್ಲಿರುವ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಕಳೆದ ವಾರ  ನಡೆದಿತ್ತು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಇದೀಗ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ದ.ಕ. ಸಂಪಾಜೆ ಗ್ರಾಮದ...

ಅಡ್ಕಾರು: ಕಟ್ಟಡದಿಂದ ಬಿದ್ದು  ವ್ಯಕ್ತಿ ಮೃತ್ಯು!

ಅಡ್ಕಾರಿನಲ್ಲಿ  ವ್ಯಕ್ತಿ ಓರ್ವ ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಾ.7ರಂದು   ವರದಿಯಾಗಿದೆ.ಪೈಟಿಂಗ್ ಕೆಲಸಕ್ಕಾಗಿ ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ‌ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದರು. ಕೂಡಲೇ ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ತಲೆಗೆ ಗಂಭೀರ...

ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ !

ಸುಳ್ಯ ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 52 ವರ್ಷದ ವಸಂತ ಎಂಬವರು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಇವರು ಕೆಲ ದಿನಗಳ ಹಿಂದೆ ಕುಡಿತದ ಚಟ ಹೊಂದಿದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತರು ಪತ್ನಿ...

ಸುಳ್ಯ; ಕುಸಿದು ಬಿದ್ದು ಗ್ಯಾರೇಜ್ ಉದ್ಯೋಗಿ ಮೃತ್ಯು

ಸುಳ್ಯದ ಗ್ಯಾರೇಜ್ ನಲ್ಲಿ ಕೇರಳ ಮೂಲದ ಉದ್ಯೋಗಿ ಕುಸಿದು ಬಿದ್ದು ಸಾವನನಪ್ಪಿದ ಘಟನೆ, ಸುಳ್ಯದ ಮೆಸ್ಕಾಂ ಕಚೇರಿಯ ಎದುರುಗಡೆ ಇರುವ ಭಗವತಿ ಗ್ಯಾರೇಜ್ ನಲ್ಲಿ ನಡೆಯಿತು. ಕೇರಳದ ಕೊಲ್ಲಂ ನಿವಾಸಿ ಮಣಿ ಎಂಬವರು ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗ್ಯಾರೇಜ್ ನಲ್ಲಿ ಆರು ತಿಂಗಳ ಹಿಂದೆ ಪೈಂಟಿಂಗ್‌ ಕೆಲಸಕ್ಕೆ...
Loading posts...

All posts loaded

No more posts

error: Content is protected !!