- Sunday
- October 11th, 2026
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಸುಳ್ಯ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕರಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಆರೋಗ್ಯ ಕೊಠಡಿ, ಪ್ರಾಂಶುಪಾಲರ ನೂತನ ಕೊಠಡಿ, ಐಟಿ ಮತ್ತು ಕಂಪ್ಯೂಟರ್ ಕೊಠಡಿ,...
ಅಚ್ರಪ್ಪಾಡಿ ಸ. ಕಿ. ಪ್ರಾ. ಶಾಲೆ ಮೇ.31ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಸಂತ ಬೊಳ್ಳಾಜೆ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಆರತಿ ಮಾಡಿ, ಹೂ ನೀಡುವುದರ ಮೂಲಕ ಪ್ರೀತಿಯಿಂದ ಶಾಲೆಗೆ ಶಾಲಾ ಪೋಷಕರು ಬರಮಾಡಿಕೊಂಡರು. ತದನಂತರ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಶ್ರೀಯುತ ವಸಂತ ಬೊಳ್ಳಾಜೆ ದೀಪ ಬೆಳಗಿ ಕಾರ್ಯಕ್ರಮ...
ಎಲಿಮಲೆ ಸರಕಾರಿ ಪ್ರೌಢ ಶಾಲೆ ಶಾಲಾ ಪ್ರಾರಂಭೋತ್ಸವವು ಮೇ. 31ರಂದು ನಡೆಯಿತು. ಶಾಲೆಯನ್ನು ತಳಿರು, ತೋರಣ ,ರಂಗೋಲಿಗಳಿಂದ ಶೃಂಗರಿಸಿ, ಶಾಲಾ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಯವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಶಾಲಾ ಸಭಾಂಗಣದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಎಸ್. ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶ್ರೀಯುತ...
ಗ್ರಾಮ ಪಂಚಾಯತ್ ದೇವಚಳ್ಳ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಜೂನ್ 4 ರಂದು ದೇವಚಳ್ಳ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಕು.ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗ್ರಾ.ಪಂ.ಸದಸ್ಯ...
ಹಿಂದೂ ಕಾರ್ಯಕರ್ತರ ಕಣ್ಮಣಿ , ಹಿಂದೂ ಪರ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ಜೂನ್ 4 ರಂದು ಅಡ್ಕಾರ್ ದೇವಸ್ಥಾನಕ್ಕೆ ಆಗಮಿಸಲಿದ್ದು ಜಾಲ್ಸೂರಿನಿಂದ ಭವ್ಯ ಮೆರವಣಿಗೆ ಮುಖಾಂತರ ಸ್ವಾಗತಕ್ಕೆ ಕೇಸರಿ ಪಡೆ ಸಜ್ಜಾಗಿದೆ. ಜಾಲ್ಸೂರಿನಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.
ಮೇ. 31ರಂದು ಪೈಕ ಸ.ಕಿ.ಪ್ರಾ.ಶಾಲೆಯಲ್ಲಿ 2023_24 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ವನ್ನು ನಡೆಸಲಾಯಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ರಾದ ಶ್ರೀ ಮಂಜುನಾಥ ರವರು ದೀಪ ಬೆಳಗಿಸುವುದರ ಮೂಲಕ ಶಾಲಾ ಪ್ರಾರಂಭಕ್ಕೆ ಚಾಲನೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಸ್ನೇಹ ಲತಾ ರವರು ಶೈಕ್ಷಣಿಕ ವರ್ಷದ ಕಲಿಕಾ ಚಟುವಟಿಕೆ ಗಳ ಮಾಹಿತಿಯನ್ನು ನೀಡಿದರು. ನಂತರ ಉಚಿತ ಪಠ್ಯ...
ಸುಬ್ರಹ್ಮಣ್ಯ: ದೇವಳದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರಕುವುದು ಭಾಗ್ಯ. ಇಂತಹ ಪುಣ್ಯದ ಕಾರ್ಯವನ್ನು ಕಾರ್ಯತತ್ಪರತೆ ಮತ್ತು ನಿಷ್ಠಾವಂತಿಕೆಯಿಂದ ನೆರವೇರಿಸಿದರೆ ಭಗವಂತನ ಕೃಪೆ ಬದುಕಿನಾದ್ಯಂತ ಇರುತ್ತದೆ.ವೃತ್ತಿ ಮತ್ತು ನಿವೃತ್ತಿಯು ಒಂದೇ ನಾಣ್ಯದ ಎರಡು ಮುಖಗಳು ಇವೆರಡನ್ನು ಸಮ ಪ್ರಯಾಣದಲ್ಲಿ ಅನುಭವಿಸಿದರೆ ಜೀವನ ಪಾವನ. ಶ್ರೀ ದೇವಳದಲ್ಲಿ ಸೇವೆ ಸಲ್ಲಿಸಿದ ಹಾಲವ್ವ ಅವರ ಸೇವಾಕಾಂಕ್ಷಿತ್ವವು ಸರ್ವರಿಗೂ ಮಾದರಿ.ತಮಗೆ ವಹಿಸಿದ...
ಸುಬ್ರಹ್ಮಣ್ಯ: ಗುರುವಾರ ಸಂಜೆ ಕಾರು ಹರಿದು ಕಾಲಿಗೆ ಗಾಯಗೊಂಡು ಪುತ್ತೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ ಎಸ್ ಪಿ ಯು ಕಾಲೇಜಿನ ವಿದ್ಯಾರ್ಥಿನಿಯರಾದ ಹನಿಷ್ಕಾ ಮತ್ತು ಬಿಂಬಿಕಾ ಅವರ ಯೋಗಕ್ಷೇಮವನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಸ್ ಎಸ್ ಪಿ ಯು ಕಾಲೇಜಿನ ಕಾರ್ಯದರ್ಶಿಗಳೂ ಆದ ಡಾ.ನಿಂಗಯ್ಯ ಶುಕ್ರವಾರ ವಿಚಾರಿಸಿದರು....
ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ಕಳೆದ 29 ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಹಿರಿಯ ಗುಮಾಸ್ತೆಯಾಗಿ ಮೇ. 31ರಂದು ನಿವೃತ್ತರಾದ ಶ್ರೀಮತಿ ಜಲಜಾಕ್ಷಿ ಪಿ ಕೆ ಇವರಿಗೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಬಾಲಗೋಪಾಲ ಎಂ ಉಪಸ್ಥಿತರಿದ್ದು ನಿವೃತ್ತರಿಗೆ ಸನ್ಮಾನಿಸಿ, ಶುಭ ಹಾರೈಸಿದರು. ಮುಖ್ಯ...
ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಒಬ್ಬರು ಗಂಭೀರ ಗಾಯಗೊಂಡು, ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಲೈನ್ ಮ್ಯಾನ್ ಅನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ. ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್...
Loading posts...
All posts loaded
No more posts
