- Monday
- October 12th, 2026
ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ತೆರಳುವ ಕುರುಂಜಿಭಾಗ್ ರಸ್ತೆಯಲ್ಲಿ ನೀರು ತುಂಬಿ ಸಂಕಷ್ಟ ಪಡಬೇಕಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿ ಭಾಗ್ ರಸ್ತೆಯಲ್ಲಿರುವ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಹೊಳೆಯಾಗಿ ಮಾರ್ಪಾಡಾಗಿ ವಾಹನಸವಾರರು ಪರದಾಡುವ ಪ್ರಸಂಗ ಉಂಟಾಯಿತು. ಇನ್ನಾದರೂ ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕಿದೆ.
ನಿವೇದಿತಾ ಸಂಚಾಲನ ಸಮಿತಿ ಅಮರಪಡ್ನೂರು ಇವರ ವತಿಯಿಂದ ಭಾರತ ಮಾತಾ ಪೂಜಾನಾ ಕಾರ್ಯಕ್ರಮ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಂಚಾಲನ ಸಮಿತಿಯ ಸಂಚಾಲಕಿ ಗೀತಾ ಕೊರತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಕುಸುಮಾಧರ ಎ ಟಿ ಬೌದ್ಧಿಕ್ ನೀಡಿದರು. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ.)ಇದರ ಆಡಳಿತ...
ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಕ್ಲಸ್ಟರ್ ನ ಎಲ್ಲ ಶಾಲೆಗಳಿಗೆ ಹಾಗೂ ಸುಬ್ರಹ್ಮಣ್ಯ ಕ್ಲಸ್ಟರ್ ನ ಆಯ್ದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ. ಸುಬ್ರಹ್ಮಣ್ಯ ಕ್ಲಸ್ಟರ್ ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ,ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ...
ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ) ಬಿ ಯಂ ಯಸ್ ಸಂಯೋಜಿತ ವತಿಯಿಂದ ಬಿ ಯಂ ಯಸ್ (ಭಾರತೀಯ ಮಜ್ದೂರ್ ಸಂಘ) ಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನು ಹಳೆಗೇಟಿನ ಸಂಘದ ಕಟ್ಟಡ ಕಾರ್ಮಿಕರ ತಿಲಕಭವನದಲ್ಲಿ ಜು.23 ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಸ್ಥಾಪಕಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಮಾತನಾಡಿದರು.ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ...
ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸೇತುವೆ ಇಂದು ಸುರಿದ ಭಾರಿ ಮಳೆಗೆ ಕಳೆದ ವರ್ಷದಂತೆ ಈ ಬಾರಿಯೂ ಸಂಪರ್ಕ ಕಳೆದುಕೊಂಡಿದೆ. ನಿನ್ನೆಯಿಂದ ಕಲ್ಮಕಾರು, ಕೂಜುಮಲೆ, ಕಡಮಕಲ್ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಮೋರಿ ಅಳವಡಿಸಿ ಮರಳು ಚೀಲ ಇರಿಸಿ ನಿರ್ಮಿಸಿದ್ದ ಸಂಪರ್ಕ ಮತ್ತೆ ಕೊಚ್ಚಿಹೋಗಿದೆ. ಕಳೆದ ಬಾರಿ ಉಂಟಾದ...
ಭಾರಿ ಮಳೆಯಿಂದಾಗಿ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದ್ದು, ಪಂಜ ಸಮೀಪದ ಪುಳಿಕುಕ್ಕು ಎಂಬಲ್ಲಿ ಹೊಳೆ ನೀರಿನ ನೆರೆ ಮುಖ್ಯ ರಸ್ತೆಯಲ್ಲಿ ತುಂಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಕಡಬ-ಪಂಜ ಕಡೆಗೆ ಸಂಚರಿಸಲು ನಿಂತಿಕಲ್ಲು -ಎಡಮಂಗಲ ರಸ್ತೆಯಾಗಿ ಪರ್ಯಾಯ ರಸ್ತೆಯನ್ನು ಬಳಸಬೇಕಾಗಿದೆ.
✍️ ಭಾಸ್ಕರ ಜೋಗಿಬೆಟ್ಟು ಭಾರಿ ಮಳೆ ಸುರಿಯುತ್ತಿರುವುದರಿಂದ ಜೋಗಿಬೆಟ್ಟು ಮಂಞನಕಾನ ಸಂಪರ್ಕ ಮಾಡುವ ರಸ್ತೆಯು ಹದೆಗೆಟ್ಟು ಈ ಭಾಗದ ಜನರಿಗೆ ಬಹಳ ತೊಂದರೆಯುನ್ನು ಉಂಟುಮಾಡುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಅಧೋಗತಿಯನ್ನು ನೋಡುವವರು ಕೇಳುವವರು ಯಾರು ಇಲ್ಲದಂತಾಗಿದೆ. ಸರಿಯಾದ ಚರಂಡಿ ವ್ಯವಸ್ತೆ ಇಲ್ಲದೆ ಮಳೆಯ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯುವುದರಿಂದ...
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚನೆ ಉಂಟಾಯಿತು.ಕುಮಾರಧಾರ ನದಿಯಲ್ಲಿ ಬಾರೀ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.ಮಂಜೇಶ್ವರ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನದಿಯ...
ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಟಿ ತಿಂಗಳ ವಿಶಿಷ್ಟ ಖಾದ್ಯಗಳ ಪ್ರದರ್ಶನ ಮತ್ತು ಆಟಿ ಆಚರಣೆ ಜುಲೈ 22 ರಂದು ನಡೆಯಿತು. ತುಳುನಾಡು ಅನೇಕ ವಿಶಿಷ್ಟ ಹಬ್ಬಗಳ ತವರೂರು, ಇಲ್ಲಿನ ಭಾಷೆ ಸಂಸ್ಕೃತಿ ಆಚರಣೆ ಹಬ್ಬ ಹರಿದಿನ ಪ್ರತಿಯೊಂದರಲ್ಲೂ ತುಳುನಾಡಿನ ಮಣ್ಣಿನ ಸೊಗಡು ಘಮಘಮಿಸುತ್ತಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಶಾಲೆಯಲ್ಲಿ ಹಲವಾರು...
ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ ಜು.22ರಂದು ನಡೆಯಿತು. ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ ಸಹಕಾರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಷನ್ ಸೊಸೈಟಿ ಬಾಳಿಲ ಇದರ ಕೋಶಾಧಿಕಾರಿಯಾದ ರಾಧಾಕೃಷ್ಣ ರಾವ್ ಉಡುವೆಕೋಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾಬು ಅಜಿಲ ಆಟಿ ತಿಂಗಳ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಶಾಲಾ...
Loading posts...
All posts loaded
No more posts
