ಕೆ.ಎಸ್.ಆರ್.ಟಿ.ಸಿ ಮೆಕ್ಯಾನಿಕ್ ಹರೀಶ್ ಕುದ್ಪಾಜೆಗೆ ಉತ್ತಮ ಪ್ರಶಂಸನಾ ಪುರಸ್ಕಾರ

ಕೆ.ಎಸ್.ಟಿ.ಸಿ ಮೆಕ್ಯಾನಿಕಲ್ ಹರೀಶ್ ಕುದ್ಪಾಜೆ ಅವರು 2022 ನೇ ಸಾಲಿನಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮದಿಂದ ನೀಡಲಾಗುವ ಉತ್ತಮ ಪ್ರಶಂಸನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪುರಸ್ಕಾರವನ್ನು ಪುತ್ತೂರು ಘಟಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಲಾಯಿತು. ಇವರು ಪುತ್ತೂರು ಘಟಕದ ಸುಳ್ಯ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಬರಡ್ಕ ಗ್ರಾಮದ ಕುದ್ಪಾಜೆಯವರು. ಇವರ ಪತ್ನಿ ಪಲ್ಲವಿ ಸುಳ್ಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದಾರೆ.

ಸುಬ್ರಹ್ಮಣ್ಯ : ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಬ್ರಹ್ಮಣ್ಯ: ಪ್ರತಿಷ್ಠಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಇದರ 53ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ  ವಿನ್ಯಾಸ್ ಹೊಸೋಳಿಕೆ, ನಿತೀನ್ ಭಟ್, ಸುಹಾಸ್ ಎಚ್.ಎಲ್, ಗುರುಪ್ರಸಾದ್ ಆದಿ  ನೇಮಕಗೊಂಡರು. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು  ರಾಜೇಶ್ ಎನ್.ಎಸ್ ಸಂಚಾಲಕರಾಗಿ ಆಯ್ಕೆಯಾದರು. 52ನೇ ವರ್ಷದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಅಧ್ಯಕ್ಷತೆಯಲ್ಲಿ ನಡೆದ...
Ad Widget

ಅಂಬೇಡ್ಕರ್ ರಕ್ಷಣಾ ವೇದಿಕೆಯ ಗುತ್ತಿಗಾರು ಘಟಕ ಉದ್ಘಾಟನೆ

ಅಂಬೇಡ್ಕರ್ ರಕ್ಷಣಾ ವೇದಿಕೆಯ ಗುತ್ತಿಗಾರು ಘಟಕದ ಉದ್ಘಾಟನೆ ಆ.20 ರಂದು ಗುತ್ತಿಗಾರು ಗ್ರಾಮದ ಚತ್ರಪ್ಪಾಡಿ ಬಾಲಕೃಷ್ಣರವರ ಮನೆಯ ವಠಾರದಲ್ಲಿ ನಡೆಯಿತು. ಗಂಗಾಧರ ಚತ್ರಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂಘಟನೆಯ ಬಗ್ಗೆ ಮಾತನಾಡಿದರು. ಸುಳ್ಯ ತಾಲೂಕು ಅಧ್ಯಕ್ಷರಾದ ರಮೇಶ...

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ ಡಾ.ಕುಲದೀಪ್ ಎಂ.ಡಿ. ನೇಮಕ

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಡಾ.ಕುಲದೀಪ್‌ಎಂ.ಡಿ.ಯವರು ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ತೆರವಿರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ ಹುದ್ದೆಗೆ ಇವರನ್ನು ನೇಮಿಸಲಾಗಿದೆ. ಪ್ರಸ್ತುತ ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಯಾಗಿರುವುದಾಗಿ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ನಂದಕುಮಾರ್ ತಿಳಿಸಿದ್ದಾರೆ. ಡಾ.ಕುಲದೀಪ್ ಇವರು ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ದುಗಲಡ್ಕ...

ತುಳುನಾಡಿನ ಆದಿ ಮೂಲ ನಾಗ ಬೆರ್ಮರ ಆರಾಧನೆ

✍️ ಭಾಸ್ಕರ ಜೋಗಿಬೆಟ್ಟು ತುಳುನಾಡಿನ ನಾಗರಾಧನೆಗೂ ಬೇರೆ ಪ್ರದೇಶಗಳಲ್ಲಿ ಆಚರಿಸುವ ನಾಗರಾಧನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಇಲ್ಲಿ ಭೂಮಿಯ ಒಡೆಯ ದೈವ ನಾಗ ಬೆರ್ಮರ ಆರಾಧನೆ ನಡೆಯುತ್ತದೆ. ನಮ್ಮ ತುಳುನಾಡಿನಲ್ಲಿ ಪುರಾತನ ಕಾಲದಿಂದಲೂ ಇಲ್ಲಿನ ಆದಿ ಜನಾಂಗದವರು ಭಯ ಭಕ್ತಿಯಿಂದ ನಾಗನನ್ನು ದೈವಗಳ ರೂಪದಲ್ಲಿ ಆರಾಧಿಸಿಕೊಂಡು ಬಂದರು. ದೈವಗಳನ್ನು , ನಾಗನನ್ನು ಚಾವಡಿ, ಗುಡಿಗಳಲ್ಲಿ ಆರಾಧಿಸದೆ...

ಸುಳ್ಯ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ

ಸುಳ್ಯದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ, ಭಾರತ ರತ್ನ ದಿ. ರಾಜೀವ್ ಗಾಂಧಿಯವರ 89ನೇ ಹಾಗೂ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ. ದೇವರಾಜ ಅರಸು ರವರ 108ನೇ ಜನ್ಮದಿನಾಚರಣೆಯನ್ನು ಸುಳ್ಯ ನಗರದ ಕಾಂಗ್ರೆಸ್ ಕಾರ್ಯಕರ್ತರು ಸುಳ್ಯ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಆಚರಿಸಿದರು. ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿಸಿ ಜಯರಾಮ್...

ಆಲೆಟ್ಟಿ ಕ್ರಾಸ್ ರಸ್ತೆಯಲ್ಲಿ ಸ್ಲ್ಯಾಬ್ ಕುಸಿತ – ಶೀಘ್ರ ದುರಸ್ತಿಗೆ ಒತ್ತಾಯ

ಗಾಂಧಿನಗರ : ಆಲೆಟ್ಟಿ ಕ್ರಾಸ್  ರಸ್ತೆಯ ಚರಂಡಿಯ ಮೇಲೆ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್ ಇಂದು ಬೆಳಗ್ಗೆ ಕುಸಿತಗೊಂಡಿದ್ದು ಅಪಾಯ ಆಹ್ವಾನಿಸುತ್ತಿದೆ. ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ಶೀಘ್ರವಾಗಿ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಸುಳ್ಯದಲ್ಲಿ ಇಂದು ಲೋಕಾಯುಕ್ತ ಇಲಾಖೆ ಮಿಂಚಿನ ದಾಳಿ ನಡೆಸಿ ಲಂಚ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿಯನ್ನು ಖೆಡ್ಡಕ್ಕೆ ಬೀಳಿಸಿದ್ದು, ಇದೀಗ ನ್ಯಾಯಮೂರ್ತಿ ಸೌಮ್ಯ ಜೆ ಎಮ್ ಎಫ್ ಸಿ 3ನೇ ಬೆಂಚು ಇವರ ಮುಂದೆ ಹಾಜರುಪಡಿಸಿದ್ದು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಅ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ್ದಾರೆ ಎಂದು...

ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕಿನಿಂದ ಪ್ರಶಸ್ತಿ

ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ  ಸಹಕಾರಿ ಸಂಘ ಇದರ 2022- 23ನೇ ಸಾಲಿನ ಸಮಗ್ರ ಕಾರ್ಯ ಚಟುವಟಿಕೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ನೀಡಲ್ಪಡುವ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರಿಂದ ಇಂದು ಮಂಗಳೂರಿನ ಜಿಲ್ಲಾ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಅಲ್ಪಸಂಖ್ಯಾತರ...

ನೆಲ್ಲೂರು ಕೆಮ್ರಾಜೆ ಸೊಸೈಟಿಗೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

ಆ.19 ರಂದು ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ 2022-23 ನೇ ಸಾಲಿನಲ್ಲಿ ಮಾಡಿದ ಸಾಧನೆ ಪರಿಗಣಿಸಿ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ನಿರ್ದೆಶಕರುಗಳಾದ ಉಮೇಶ್ ಪ್ರಭು, ಚಂದ್ರ ದಾಸನಕಜೆ, ಚೇತನ್ ಅತ್ತಿಮಾರಡ್ಕ...
Loading posts...

All posts loaded

No more posts

error: Content is protected !!