- Tuesday
- October 13th, 2026
ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಂದನ ಕವಿಗೋಷ್ಠಿ ಜರುಗಿತು. ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು ಅವರು ಶ್ರೀಕೃಷ್ಣ ಪ್ರತಿಮೆಗೆ ಮಂಗಳಾರತಿ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್....
ಎಲ್ಲಾ ಸರಕಾರಗಳೂ ನಡೆಯುವುದೇ ಜನರ ತೆರಿಗೆಯಿಂದಲೇ ಬಿಜೆಪಿ ಸರಕಾರಗಳು, ಕೇಂದ್ರ ಸರಕಾರ ಜನರ ತೆರಿಗೆಯನ್ನು ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ನೀಡುತ್ತಿದ್ದರೆ, ನಮ್ಮ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗೆ, ಮಹಿಳೆಯರಿಗೆ ನೀಡುತ್ತಿದ್ದಾರೆ. ಆ ಮೂಲಕ ಬಡವರ, ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ಇದನ್ನು ಮಾಡಲು ಇಚ್ಛಾಶಕ್ತಿ ಬೇಕು. ಬಿಜೆಪಿಯವರಿಗೆ ಇಚ್ಚಾಶಕ್ತಿಯ ಕೊರತೆ ಇದೆ. ಅವರಿಂದ ಇದನ್ನು ನಿರೀಕ್ಷೆಯನ್ನು...
ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯ ದಲ್ಲಿ ಸುಬ್ರಹ್ಮಣ್ಯ ದಲ್ಲಿ ನಡೆಯಲಿರುವ 53 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಆಮಂತ್ರಣ ಪತ್ರಿಕೆಯನ್ನು ಕಾಶಿಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ದಲ್ಲಿ ಬಿಡುಗಡೆಗೊಳಿಸಲಾಯಿತು. ಆರಂಭದಲ್ಲಿ ಶ್ರೀ ದೇವಳದ ಅರ್ಚಕ ಸನತ್ ನೂರಿತ್ತಾಯರು ಆಮಂತ್ರಣ ವನ್ನು ಮಹಾಗಣಪತಿ ಗೆ ಅರ್ಪಿಸಿದರು.ಬಳಿಕ ಪೂಜೆ ನೆರವೇರಿಸಿ...
ಕರ್ನಾಟಕ ಸರ್ಕಾರ, ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಲಯನ್ಸ್ ಕ್ಲಬ್ ಸುಳ್ಯ ಇದರ ಸಹಯೋಗದೊಂದಿಗೆ 2022-23ನೇ ಸಾಲಿನ ಪಂಚಾಯತ್ ಯೋಜನೆಯಡಿ ಜೇನುಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ವೀರಪ್ಪ ಗೌಡ...
ದೀಕ್ಷಿತ್ ರಾವ್ ನಿತಿನ್ ಸಾಲಿಯಾನ್ ಡಿ.ಜೆ ಫ್ರೆಂಡ್ಸ್ ಕ್ಲಬ್ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಅಂಗವಾಗಿ ನಡೆಯುವ 'ಸುಳ್ಯ ದಸರಾ' ಕಾರ್ಯಕ್ರಮದ ವೈಭವ ಮೆರವಣಿಗೆಯಲ್ಲಿ ಆಕರ್ಷಣೆಯಾಗಿ 5ನೇ ವರ್ಷದ ಹುಲಿವೇಷ ಸ್ಥಬ್ದ ಚಿತ್ರ ನಿರ್ಮಾಣದ ಡಿ.ಜೆ ಫ್ರೆಂಡ್ಸ್ ಕ್ಲಬ್ ನ ಸುಳ್ಯ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.10ರಂದು ನಡೆಯಿತು. ಸ್ಥಾಪಕಾಧ್ಯಕ್ಷ ದೀಪಕ್...
ಮೊಬೈಲಿನಿಂದ ದೂರ ಇರಿ, ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭದಲ್ಲಿ ಎಚ್ಚರ ವಹಿಸಿ, ಅಪರಿಚಿತ ವ್ಯಕ್ತಿಗಳ ಸಹವಾಸ ಮಾಡಬೇಡಿ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಸವಿತಾ ಮಕ್ಕಳಿಗೆ ಎಚ್ಚರಿಕೆ ಸಂದೇಶ ನೀಡಿದರು. ಇವರು ಸೆಪ್ಟೆಂಬರ್ 12ರಂದು ಬೆಳ್ಳಾರೆ ಜೆಸಿಐ ವತಿಯಿಂದ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆದ ಪೋಕ್ಸೋ ಮತ್ತು ಸೈಬರ್ ಕ್ರೈಂ ಮಾಹಿತಿ ಕಾರ್ಯಾಗಾರದಲ್ಲಿ...
ಸುಳ್ಯ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ 24ನೇ ಬಾರಿಗೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕವು ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ.
ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸುಳ್ಯ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಇವರ ಸಹಯೋಗದಲ್ಲಿ ಪರಿಸರ ಜಾಗೃತಿಗಾಗಿ ಗಿಡ ನೆಡುವ "ಸಸ್ಯ ಶ್ಯಾಮಲಾ ಕಾರ್ಯಕ್ರಮ" ಸೆಪ್ಟೆಂಬರ್ 11 ರಂದು ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ಶಾಸಕಿ...
ಶಾಲೆ ಮುಗಿಸಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಜಾಲ್ಸೂರು ಬಳಿ ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್ ಗುದ್ದಿ ಗಾಯಗೊಂಡಿರುವ ಘಟನೆ ಸೆ.12 ರಂದು ವರದಿಯಾಗಿದೆ. ಪುತ್ತೂರು ಕಡೆಯಿಂದ ಹಿಂತಿರುಗುತ್ತಿದ್ದ ಕೆವಿಜಿ ಅಂಬ್ಯುಲೆನ್ಸ್ ನಲ್ಲಿಯೇ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
Loading posts...
All posts loaded
No more posts
