ನಾಲ್ಕೂರು : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಚ್ಛತಾ ಜಾಗೃತಿ ನಾಮಫಲಕ ಅಳವಡಿಕೆ

ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಪರಿಸರ ಹಾಗೂ ಸ್ವಚ್ಚತಾ ಅಭಿಯಾನದ ಅಂಗವಾಗಿ ಜಾಗೃತಿ ನಾಮಫಲಕವನ್ನು ತಾಲೂಕು ಭಜನಾ ಪರಿಷತ್ ನಿರ್ದೇಶಕ ಶ್ರೀ ವಿಜಯಕುಮಾರ್ ಚಾರ್ಮತ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಕೊಯಿಲ ಅನಾವರಗೊಳಿಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ವಲಯ ಮೇಲ್ವಿಚಾರಕ ಶ್ರೀ ಬಾಲಕೃಷ್ಣ ಗೌಡ, ವಿಪತ್ತು ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ,...

ಸುಳ್ಯ : ಸಾಹಿತಿ ಶಿವರಾಮ ಕಾರಂತರ ಜನ್ಮ ದಿನಾಚರಣೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಘ ಐಕ್ಯೂಏಸಿ ವಿಭಾಗ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರುಗಳ ಆಶ್ರಯದಲ್ಲಿ ಖ್ಯಾತ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಫ್ರೊ‌.ದಾಮೋದರ ಕಣಜಾಲುರವರು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ "ಶಿವರಾಮ...
Ad Widget

ಅಕ್ಷಯ್ ಗುತ್ತಿಗಾರು ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ

ಗುತ್ತಿಗಾರಿನ ರಾಘವೇಂದ್ರ ಬೇಕರಿಯ ಮಾಲಕ ಅನಿಲ್  ಮತ್ತು ಶಿಮ್ನಾ ದಂಪತಿಗಳ ಪುತ್ರ ಅಕ್ಷಯ್ ಗುತ್ತಿಗಾರು ಉನ್ನತ ಶಿಕ್ಷಣಕ್ಕಾಗಿ ಅ.13 ರಂದು ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರು Machatronic and Cyber Physical System ಎಂಬ ಕೋರ್ಸ್‌ ನ್ನು ಎರಡು ವರ್ಷಗಳ ಕಾಲ ವ್ಯಾಸಂಗ ಮಾಡಲಿದ್ದಾರೆ. ಇವರು ರಾಷ್ಟ್ರೀಯ ಪುಟ್ಬಾಲ್ ಆಟಗಾರರಾಗಿಯೂ ಸಾಧನೆ...

ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರ ಪ್ರತಿನಿಧಿಸಲಿರುವ ಡಾ. ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು ಇವರು ಅಕ್ಟೋಬರ್ 14 ಮತ್ತು 15 ರಂದು ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡ “ನಾನೂ,,,,,,ನಾಯಕ-23” ಎಂಬ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿದದಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಘನ ಸರಕಾರದ ಸಚಿವರುಗಳ ಉಪಸ್ಥಿತಿಯಲ್ಲಿ...

ತಳೂರು : ಶ್ರೀ ವಿಷ್ಣು ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

ತಳೂರಿನ ಪೂಜಾರಿಮನೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಿಷ್ಣು ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಇತ್ತೀಚೆಗೆ ಶುಭಾರಂಭಗೊಂಡಿತು. ದುರ್ಗಾಪ್ರಸಾದ್ ಮೇಲಡ್ತಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಪದ್ಮನಾಭ ಪೂಜಾರಿಮನೆ, ಶೈಲೇಶ್ ಅಂಬೆಕಲ್ಲು, ಅಶ್ವಿಜಾ ರಾಮ್ ಸುಳ್ಯ, ಮೋಹಿನಿ ಮಂದ್ರಪ್ಪಾಡಿ ಮತ್ತು ಮನೆಯವರು ಹಾಗೂ ಊರವರು ಉಪಸ್ಥಿತರಿದ್ದರು.ನಮ್ಮಲ್ಲಿ ಕಿಟಕಿ ಬಾಗಿಲು, ಶೋಕೇಸ್, ಪಾರ್ಟಿಶನ್, ಶೀಲಿಂಗ್, ಪ್ಲೈವುಡ್ ಬಾಗಿಲು,...

ಇಸ್ರೆಲ್ ಯುದ್ದ ಭೂಮಿಯಲ್ಲಿ ಸುಳ್ಯ ಮೂಲದ ಮಹಿಳೆ ಮತ್ತು ಪತಿ ಸುರಕ್ಷಿತವಾಗಿ ಇದ್ದಾರೆ ಕುಟುಂಬದಿಂದ ಮಾಹಿತಿ.

ವಿಶ್ವವನ್ನೆ ನಿಬ್ಬೆರೆಗಾಗಿಸಿದ ಹಮಾಸ್ ಉಗ್ರರು ಇಸ್ರೆಲ್ ಮೇಲೆ ಶನಿವಾರ ಯುದ್ದ ಸಾರಿದ್ದು ಪ್ರತಿಯಾಗಿ ಇಸ್ರೆಲ್ ಕೂಡ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿ ಉಗ್ರರು ಮತ್ತು ಇಸ್ರೆಲ್ ಸೇನೆ ನಡುವೆ ಇದೀಗ ಯುದ್ದಗಳು ನಡೆಯುತ್ತಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ, ಇದೇ ಯುದ್ದ ಭೂಮಿಯಲ್ಲಿ ಸುಳ್ಯ ಮೂಲದ ಮಹಿಳೆ ಮತ್ತು ಅವರ ಪತಿ ಕೂಡ ಇದ್ದಾರೆ...

ಸುಳ್ಯ ಬಸ್ಸು ಹತ್ತಲು ಹೋದಾಗ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು.

ಸುಳ್ಯ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ದಿನಾಂಕ 6-10-23 ರ ಸಂಜೆ ಸುಮಾರು 6:30ರಿಂದ 45 ರ ಒಳಗೆ ತೆರಳುವ ಖಾಸಗಿ ಬಸ್ಸು ಹತ್ತಲು ಕರುಣಾಕರ ಎಂಬುವವರು ಹೋದಾಗ ಕಾಲು ಜಾರಿ ಬಿದ್ದು ರಸ್ತೆಗೆ ತಲೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಇದೀಗ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇದೀಗ ಪೋಲಿಸ್ ಅಧಿಕಾರಿಗಳು ಮತ್ತು...

ಬೆಳ್ತಂಗಡಿ ದೇವಣ್ಣ ಗೌಡರ ಮನೆ ದ್ವಂಸ ಸ್ಥಳಕ್ಕೆ ಸುಳ್ಯ ಶಾಸಕಿ ಭೇಟಿ.

ಬೆಳ್ತಂಗಡಿ ತಾಲೂಕಿನ ಕಳೆಂಜದ ದೇವಣ್ಣ ಗೌಡರ ಮನೆ ದ್ವಂಸಗೊಳಿಸಲು ಮತ್ತೆ ಮುಂದಾದ ಅರಣ್ಯ ಇಲಾಖೆ ವಿರುದ್ಧ ದ.ಕ ಜಿಲ್ಲೆಯ ಬಿಜೆಪಿ ಶಾಸಕರೊಂದಿಗೆ ಸಂಘಟಿತ ಹೋರಾಟದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭಾಗಿಯಾದರು. ಈ ಸಂದರ್ಭದಲ್ಲಿ ಶಾಸಕರಾ ಹರೀಶ್ ಪೂಂಜ , ರಾಜೇಶ್ , ಪ್ರತಾಪ್ ಸಿಂಹ ನಾಯಕ್ , ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯದ ಯುವ ಪ್ರತಿಭೆ ಅವನಿ ಎಂ‌.ಎಸ್. ಗೆ ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ

ಜನ್ಮಭೂಮಿ ಸೇವಾ ಟ್ರಸ್ಟ್ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ 2023ರ ಸಾಲಿನ ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ ಯನ್ನು ಕಲಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಹುಮುಖ ಪ್ರತಿಭೆ ಯಾದ ಕುಮಾರಿ ಅವನಿ ಎಂ ಎಸ್‌ ಸುಳ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸುಳ್ಯದ ಲಕ್ಷ್ಮಿ ವಿಲಾಸ್ ಹೋಟೆಲ್ ಗೆ ನವೀನ್ ಡಿ ಪಡೀಲ್, ಉಮೇಶ್ ಮಿಜಾರ್ ಭೇಟಿ

ಸುಳ್ಯದ ಬಸ್ ನಿಲ್ದಾಣದ ಎದುರು ಇರುವ ಹೋಟೆಲ್ ಲಕ್ಷ್ಮಿ ವಿಲಾಸ್ ಗೆ ಖ್ಯಾತ ತುಳು ಚಲನಚಿತ್ರ ನಟರಾದ ನವೀನ್ ಡಿ ಪಡೀಲ್, ಉಮೇಶ್ ಮಿಜಾರ್ ಆಗಮಿಸಿದ್ದರು. ಈ ವೇಳೆ ಮಾಲಕರಾದ ಲಕ್ಷ್ಮೀಶ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
Loading posts...

All posts loaded

No more posts

error: Content is protected !!