ವಿ.ಎಚ್.ಪಿ. ಗೋಪೂಜೆ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ ಇದರ ವತಿಯಿಂದ ನ. 18 ರಂದು ನಡೆಯುವ ಗೋಪೂಜೆ ಕಾರ್ಯಕ್ರಮದ ಕರಪತ್ರ ಬಿಡುಗಡೆಯು ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷದ್ ಬಜರಂಗದಳ ನಗರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ: ಸರ್ಪಸಂಸ್ಕಾರಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ. 8ರಂದು ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ.ಬೆಂಗಳೂರಿನ ಕೆಂಗೇರಿಯ 55 ವರ್ಷದ ವ್ಯಕ್ತಿ ಮೃತಪಟ್ಟವರು. ಬೆಂಗಳೂರಿನಿಂದ ಬಂದಿದ್ದ ಕುಟುಂಬ ಸದಸ್ಯರು ನ.8ರಂದು ಕೊನೆಯ ದಿನದ ಸರ್ಪ ಸಂಸ್ಕಾರ ಪೂಜೆಯಾಗಿ ವಸತಿ ಗೃಹದಲ್ಲಿದ್ದ ಸಂದರ್ಭ ಅವರಿಗೆ ಹೃದಯಾಘಾತವಾಗಿತ್ತು.
Ad Widget

ಮದುವೆಗದ್ದೆ ಐಶ್ವರ್ಯ ಆತ್ಮಹತ್ಯೆ ಪ್ರಕರಣ- ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಮದುವೆಗದ್ದೆಯ ನಿವಾಸಿಯಾಗಿರುವ ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಮನೆಯವರ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಕೆಯ ಡೆತ್ ನೋಟ್ ಮತ್ತು ತಾಯಿಯ ದೂರಿನ‌ ಮೇರೆಗೆ ಕೇಸು ದಾಖಲಾಗಿದ್ದ ಹತ್ತು ಆರೋಪಿಗಳ ಪೈಕಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಹತ್ತು ಆರೋಪಿಗಳ ಪೈಕಿ ಐಶ್ವರ್ಯ , ಪತಿ ರಾಜೇಶ್, ಮಾವ ಗಿರಿಯಪ್ಪ ಕಾಪಿಲ, ಅತ್ತೆ ಸೀತಾ,...

ಅಮರ ಸುದ್ದಿ ದೀಪಾವಳಿ ವಿಶೇಷಾಂಕ 2023 ಬಿಡುಗಡೆ

ಅಮರ ಸುಳ್ಯ ಸುದ್ದಿ ಬಳಗ ಸತತ 7 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕ 2023 ರ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಸ್ವರ್ಣಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಬಿಳಿಮಲೆ ಸಂಚಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಹಿರಿಯ ವರದಿಗಾರ ಪದ್ಮನಾಭ ಅರಂಬೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಸಂಪಾದಕ ಮುರಳೀಧರ ಅಡ್ಡನಪಾರೆ ಕೃತಜ್ಞತೆ ಸಲ್ಲಿಸಿದರು....

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ ನ.8 ರಂದು ದೇವಸ್ಥಾನದ ಆಡಳಿತ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ರಾಜ್ಯ ಧಾರ್ಮಿಕ...

ಪೇರಾಲು : ಯುವಕ ನೇಣು ಬಿಗಿದು ಆತ್ಮಹತ್ಯೆ

ಪೆರಾಲು ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇರಾಲು ನಿವಾಸಿ ಮಹೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪೇರಾಲು ಎಂಬಲ್ಲಿ ಅಂಚೆ ಕಛೇರಿಯಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ನೀರಿನ ಟ್ಯಾಂಕ್ ಬಳಿಯ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳೀಯರಿಂದ ವಿಚಾರ ತಿಳಿದು ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆಂದು ಎಂದು ತಿಳಿದುಬಂದಿದೆ.

ಪೇರಾಲು ಪೋಸ್ಟ್ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ.

ಸುಳ್ಯ ಪೇರಾಲು ನಿವಾಸಿ ಪೆರಾಲು ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಮಹೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪೇರಾಲು ಎಂಬಲ್ಲಿ ಅಂಚೆ ಕಛೇರಿಯಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಆತನು ಗ್ರಾಮ ಪಂಚಾಯತ್ ಗೆ ಸಂಭದ ಪಟ್ಟ ನೀರಿನ ಟ್ಯಾಂಕ್ ಬಳಿಯ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಪ್ರಕಣವು ಸ್ಥಳೀಯರು ಗಮನಿಸಿ...

ಸುಳ್ಯ : ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ನೂತನ ಪ್ರಾoಶುಪಾಲರಾಗಿ ಮಿಥಾಲಿ ಪಿ ರೈ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಮಿಥಾಲಿ ಪಿ ರೈ ನೇಮಕಗೊಂಡಿದ್ದಾರೆ. ಮೂಲತ ಪುತ್ತೂರಿನವರಾದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಯುನೈಟೆಡ್ ಅಕಾಡೆಮಿ ಹಾಸನದಲ್ಲಿ ಪಡೆದು , ಪಿಯು ಮತ್ತು ಪದವಿ ಶಿಕ್ಷಣವನ್ನು ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿ ಪೂರೈಸಿ, ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯ...

ಸುಬ್ರಹ್ಮಣ್ಯ : ಸಂಚಾರಿ ವಿಜ್ಞಾನ ಪ್ರದರ್ಶನ ಉದ್ಘಾಟನೆ

ದಕ್ಷಿಣ ಕನ್ನಡ ಸೈನ್ಸ್ ಫೌಂಡೇಶನ್ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದಕ್ಷಿಣ ಕನ್ನಡ ಘಟಕ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಕಡಬ, ಇವುಗಳ ಜಂಟಿ ಆಶ್ರಯದಲ್ಲಿ ಸಂಚಾರಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮವು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನವಂಬರ್ 6 ಸೋಮವಾರದಂದು ಉದ್ಘಾಟನೆಗೊಂಡಿತು.                  ಉದ್ಘಾಟನೆಯನ್ನು ನೆರವೇರಿಸಿದ...

ಕೆ.ಎಫ್.ಡಿ.ಸಿ‌.ಕಾರ್ಮಿಕರಿಗೆ ದೀಪಾವಳಿ ಬೋನಸ್, ಸಂಬಳ ನೀಡದೆ ವಿಳಂಬ – ಆಕ್ರೋಶ

ಸುಳ್ಯ ಹಾಗೂ ಪುತ್ತೂರು ತಾಲೂಕಿನ ಕೆ ಎಫ್ ಡಿ ಸಿ ನಿಗಮದಲ್ಲಿ ಸಾವಿರಾರು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ತಮಿಳು ಕಾರ್ಮಿಕರು ದೀಪಾವಳಿ ಹಬ್ಬವನ್ನು ವಿಶೇಷ ವಾಗಿ ಆಚರಣೆ ಮಾಡುತ್ತಾರೆ. ಈ ಬಾರಿಯ ದೀಪಾವಳಿ ಆಚರಣೆಗೆ ನಿಗಮದಿಂದ ಸರಿಯಾದ ಸಮಯಕ್ಕೆ ಕಾರ್ಮಿಕರಿಗೆ ಬೋನಸ್ ಸಂಬಳ ನೀಡದೆ ಹಬ್ಬ ಆಚರಣೆಗೆ ಅಧಿಕಾರಿಗಳು ತಣ್ಣೀರು ಎರಚಿದ್ದಾರೆ. ಕಾರ್ಮಿಕರು, ಮಕ್ಕಳಿಗೆ ಹೊಸ...
Loading posts...

All posts loaded

No more posts

error: Content is protected !!