- Sunday
- October 11th, 2026
ಚಳಿಗಾಲ ಶುರುವಾಗಿದ್ದು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಾಗಿ ನಿಗಾವಹಿಸಬೇಕು. ಚಳಿಗಾಲ ಶುರುವಾದಂತೆ ಮಕ್ಕಳನ್ನು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಚಳಿಗಾಲದಲ್ಲಿ ಮಕ್ಕಳು ಸೋಂಕುಗಳಿಗೆ ತುತ್ತಾಗುವುದು ಸಾಮಾನ್ಯ. ಫ್ಲೂ, ನೆಗಡಿ, ಗಂಟಲು ನೋವು ಮತ್ತು ಸೈನುಸೈಟಿಸ್‌ನಂತಹ ಉಸಿರಾಟದ ಸೋಂಕುಗಳು ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಈ...
ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರಿನಲ್ಲಿ ಡಿಸೆಂಬರ್ 24ರಂದು ರಾಜ್ಯಮಟ್ಟದ ಬೆಳಕು ಸಂಭ್ರಮ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಸಂಧ್ಯಾ ಮಂಡಿಕೋಲು ಅವರಿಗೆ ರಾಷ್ಟ್ರಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಳಲಂಬೆ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿರುವ ಶಾಲಾ ವಾರ್ಷಿಕೋತ್ಸವ ಹಾಗೂ ಜನಪದ ವೈಭವದ ಪ್ರಯುಕ್ತ ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮ ಡಿ.24 ರಂದು ನಡೆಯಿತು. ಶ್ರಮದಾನದಲ್ಲಿ ಅಂಗನವಾಡಿ ಹಾಗೂ ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಎನ್.ಎಸ್.ಎಸ್. ಸೇವಾ ಸಂಗಮದ ಸದಸ್ಯರು, ಶಿಕ್ಷಕರು ಹಾಗೂ ವಿವಿಧ ಸಂಘದ ಸದಸ್ಯರು ಭಾಗವಹಿಸಿದ್ದರು.
ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರ ಭಕ್ತ ಸಾಗರವೇ ಹರಿದು ಬಂದಿತ್ತು.ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ಜಾತ್ರಾ ಸಮಯಕ್ಕಿಂತಲೂ ಅಧಿಕ ಮಂದಿ ಆದಿತ್ಯವಾರ ಕ್ಷೇತ್ರಕ್ಕೆ ಆಗಮಿಸಿರಬಹುದೆಂದು ಅಂದಾಜಿಸಲಾಗಿದೆ. ಎರಡನೇ ಶನಿವಾರ, ವಾರದ ರಜಾದಿನ, ಕ್ರಿಸ್‌ಮಸ್ ರಜೆಯ ಕಾರಣ ಸೇರಿದಂತೆ ಕ್ಷೇತ್ರದ ಜಾತ್ರೋತ್ಸವ ಸಮಾಪನದ ಪುಣ್ಯ ದಿನವಾದುದರಿಂದ ಕ್ಷೇತ್ರಕ್ಕೆ ಭಕ್ತ ಸಂದೋಹವೇ...
ಐವರ್ನಾಡಿನ ಪ್ರಗತಿಪರ ಕೃಷಿಕರಾದ ಸಿ.ಕೆ.ನವೀನ್ ಜಾತುಬಾಯಿ ಅವರಿಗೆ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯ ಸಂದರ್ಭದಲ್ಲಿ ಸಾಧಕ ರೈತ ಪುರಸ್ಕಾರ ಮಾಡಿ ಗೌರವಿಸಲಾಯಿತು.ಈ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶರವರು ಆಯೋಜಿಸಿದ್ದು, ಕೆ.ವಿ.ಕೆ.ಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಅಧ್ಯಕ್ಷತೆಯನ್ನು ವಹಿಸಿ ದ್ದರು. ಡಾ. ಕೇದಾರನಾಥ್ ಮತ್ತು ಕೆವಿಕೆಯ...
ಪೆರುವಾಜೆ ಕೊಲ್ಯ ಕೊರಗಜ್ಜ ದೇವಸ್ಥಾನದಲ್ಲಿ ಡಿ.29 ರಂದು ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಹಾಗೂ ಕೊರಗಜ್ಜನ ನೇಮೋತ್ಸವ ನಡೆಯಲಿದೆ. ಡಿ.29 ರಂದು ಬೆಳಿಗ್ಗೆ ಗಂಟೆ 8.00ಕ್ಕೆ ಗಣಪತಿಹೋಮ, ಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7.00ಕ್ಕೆ ದೈವದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ,...
ಹರಿಹರಪಲ್ಲತ್ತಡ್ಕದ ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದಲ್ಲಿ ಡಿ 24 ರಂದು 28ನೇ ವರ್ಷದ ಪೂಜೋತ್ಸವ ಮತ್ತು ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಡಿ. 24 ರಂದು ಬೆಳಿಗ್ಗೆ ಗಣಹೋಮ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ...
ಸುಳ್ಯದ ಗಾಂಧಿನಗರ ಆಟೋರಿಕ್ಷಾ ನಿಲ್ದಾಣದ ಬಳಿ ವೇಗವಾಗಿ ಬಂದ ಕಾರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಆಟೋ ರಿಕ್ಷಾಗಳಿಗೆ ಹಾಗೂ ಪಕ್ಕದಲ್ಲೆ ನಿಲ್ಲಿಸಿದ್ದ ಸ್ಕೂಟರ್ ಗಳಿಗೆ ಡಿಕ್ಕಿ ಹೊಡೆದು ಆಟೋದಲ್ಲಿ ಕುಳಿತಿದ್ದ ಅಟೋ ಚಾಲಕರಿಗೆ ಗಾಯವಾದ ಘಟನೆ ಇದೀಗ ವರದಿಯಾಗಿದೆ.ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕೊಂಡಯಾಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸುಳ್ಯ ಸಿ ಎ ಬ್ಯಾಂಕ್ ಸಹಕಾರಿ ರಂಗದ ಬೆಂಬಲಿತ ಅಭ್ಯರ್ಥಿಗಳ ಹೆಸರು ಪ್ರಕಟ , ಪ್ರಕಟಿತ ಹೆಸರಿನಲ್ಲಿ ಬದಲಾವಣೆ ಸಾಧ್ಯತೆ !
ಸುಳ್ಯ ತಾಲೂಕಿನ ಸುಳ್ಯ ನಗರ ಮತ್ತು ಅಜ್ಜಾವರ ಗ್ರಾಮಕ್ಕೆ ಸಂಭದಿಸಿದಂತೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಡಿ. ೩೧ ರಂದು ನಡೆಯಲಿದ್ದು ಇದೀಗ ಸಹಕಾರಿ ಭಾರತಿಯು ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು ಇವರ ವಿರುದ್ದವಾಗಿ ಸ್ಪರ್ಧಿಸಲು ಅಭ್ಯರ್ಥಿಗಳು ಸಹಕಾರಿ ರಂಗ ಸ್ಥಾಪಿಸಿ ಇದೀಗ ರಂಗವನ್ನು ಅಸ್ತಿತ್ವಕ್ಕೆ ತಂದಿದ್ದು ಸಹಕಾರಿ ರಂಗದ ಪರವಾಗಿ ಇಂದು ನಾಮಪತ್ರ ಸಲ್ಲಿಕೆಗಳು...
ಸುಳ್ಯ ತಾಲೂಕು ಅಮೆಚೂರು ಕಬ್ಬಡಿ ಅಸೋಸಿಯೇಶನ್ (ರಿ.)ಯವರ ಸಹಭಾಗಿತ್ವದಲ್ಲಿ ಪುರುಷರ ೬೨ ಕೆ.ಜಿ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಡಿ.೩೧ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣ ಮೂವಪ್ಪೆಯಲ್ಲಿ ನಡೆಯಲಿದೆ ಎಂದು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.)ಯ ಅಧ್ಯಕ್ಷರಾದ...
Loading posts...
All posts loaded
No more posts
