ಅ.26: ಅರೆಭಾಷೆ ಅಕಾಡೆಮಿಯಿಂದ ಬಡ್ಡಡ್ಕದಲ್ಲಿ “ಅರೆಭಾಷೆ ಗ್ರಾಮೋತ್ಸವ” – ಕಾರ್ಯಕ್ರಮದ ವಿವರ ನೀಡಿದ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಕ್ಟೋಬರ್ 26ರ ಭಾನುವಾರದಂದು ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರ ಬಡ್ಡಡ್ಕ, ಆಶೆಟ್ಟಿ ಮತ್ತು ಕಲ್ಲಪ್ಪಳ್ಳಿ ವ್ಯಾಪ್ತಿಯಲ್ಲಿ 'ಅರೆಭಾಷೆ ಗ್ರಾಮೋತ್ಸವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಆಚಾರ ವಿಚಾರಗಳು ಮರೆತು ಹೋಗದಂತೆ ಹಾಗೂ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಿಸುವ...

ನಾಳೆ (ಅ-20) ಅರಂತೋಡಿನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

ನಾಳೆ(ಅ -20)ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರಿಂ ಪೈಚಾರು ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಬೆಳಿಗ್ಗೆ 9 ಘಂಟೆಗೆ ಶುಭಾರಂಭಗೊಳ್ಳಲಿದೆ. ಸಸ್ಯಾಹಾರ ಹಾಗೂ ಮಾಂಸಾಹಾರದ ಹೋಟೆಲ್ ಇದಾಗಿದ್ದು, ಇಲ್ಲಿ ದಕ್ಷಿಣ ಭಾರತ, ಉತ್ತರ ಭಾರತ,ಚೈನೀಸ್,ಸಮುದ್ರ ಆಹಾರ,ಅರೇಬಿಯನ್,ಮನೆ ಆಹಾರಗಳು,ತಾಜಾ ತಂಪಾದ ಜ್ಯೂಸ್ ಐಟಂಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ. ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ
Ad Widget

ಐವರ್ನಾಡು : ಬೇಂಗಮಲೆಯಲ್ಲಿ ಕಸ ಎಸೆದು ದಂಡ ಪಾವತಿಸಲು ನಿರಾಕರಣೆ – ಅಯೋಧ್ಯಾ ಮೆನ್ಸ್ ಡ್ರೆಸ್ ಶಾಪ್ ವಿರುದ್ಧ ಗ್ರಾ.ಪಂ.ನಿಂದ ಪೋಲೀಸ್ ದೂರು – ಇದು ಉದ್ದೇಶಪೂರ್ವಕ ಷಡ್ಯಂತ್ರ ಎಂದ ಮಾಲಕರು

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಶಾಪ್ ವಿರುದ್ದ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಅ.15 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆಯಲ್ಲಿ 3 ಕಡೆಗಳಲ್ಲಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು...

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಸುಳ್ಯ ತಾಲೂಕು ಆಸ್ಪತ್ರೆಯ ಆವರಣ ಸ್ವಚ್ಚತೆ

ಪಂಚಸಪ್ತತಿ - 2025 ಸ್ವಚ್ಚತಾ ಕಾರ್ಯಕ್ರಮವನ್ನು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ನೇತೃತ್ವದಲ್ಲಿ 10ನೇ ದಿನದ ಸ್ವಚ್ಚತಾ ಕಾರ್ಯಕ್ರಮವಾಗಿ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು, ಸಾಂಸ್ಕೃತಿಕ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಆಸ್ಪತ್ರೆಯ ಅಧಿಕಾರಿಗಳು ಹಾಗೂ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ...

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಬಸ್ಸು ತಗುದಾಣಗಳ ನವೀಕರಣ

ಸುಬ್ರಹ್ಮಣ್ಯ ಅಕ್ಟೋಬರ್ 18 : ಲಯನ್ಸ್  ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಒಳಪಟ್ಟ 12 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಅಂದಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುವುದಾಗಿದೆ. ಅದರಂತೆ ಈಗಾಗಲೇ 4 ಬಸ್ಸು ತಗುದಾಣ ಗಳಾದ ಅರಂಪಾಡಿ, ಹೊಸಳಿಕೆ, ಪರ್ವತಮುಖಿ,ಹಾಗೂ ಕುಲ್ಕುಂದ ಬಸ್ಸು ತಂಗುದಾಣಗಳನ್ನು ಪೈಂಟಿಂಗ್...

ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ – ವಿದ್ಯಾರ್ಥಿ ಕವಿಗೋಷ್ಠಿಗೆ ಕವನಗಳ ಆಹ್ವಾನ

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಇದರ ಸಲುವಾಗಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಕವಿಗೋಷ್ಠಿ” ಯನ್ನು ಹಮ್ಮಿಕೊಳ್ಳಲಾಗಿದೆ. ಪಂಜ ಹೋಬಳಿಯ ಗ್ರಾಮಗಳಾದ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಐವತೊಕ್ಲು,...

ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಗೋಪೂಜೆ ಆಚರಣೆ

ಅಕ್ಟೋಬರ್ 18ರಂದು  ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೀಪಾವಳಿಯ ಮಹತ್ವ ಸಾರುವ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳ ಮಹತ್ವವನ್ನು ತಿಳಿಸುವ ಪ್ರಯತ್ನದೊಂದಿಗೆ ಶಾಲೆಯಲ್ಲಿ ಗೋವನ್ನು ಜಳಕ ಮಾಡಿಸಿ, ಹೂಹಾರ ಹಾಕಿ, ಅರಸಿನ-ಕುಂಕುಮ ಹಚ್ಚಿ ದೀಪಾರತಿ ಬೆಳಗಿಸಿ ಹಣ್ಣು -ಹಂಪಲುಗಳನ್ನು ನೀಡಲಾಯಿತು. ಗೋಮಾತೆಗೆ ಪ್ರದಕ್ಷಿಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುತ್ತದೆ ಎಂಬಂತೆ ಆಚರಿಸಲಾಯಿತು....

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ” ದೀಪಾವಳಿ ವಿಶೇಷ ಆಫರ್ ಗೆ ಗ್ರಾಹಕರ ಉತ್ತಮ ಸ್ಪಂದನೆ ; ಚಿನ್ನ ಖರೀದಿಗೆ ಸ್ವರ್ಣಂ ನಲ್ಲಿ  ಮುಗಿಬಿದ್ದ ಗ್ರಾಹಕರು

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅ.15 ರಿಂದ ಅ.25 ರವರೆಗೆ ಪ್ರತೀ ಆಭರಣಗಳಿಗೆ  ದೀಪಾವಳಿ ಹಬ್ಬದ ಪ್ರಯುಕ್ತ “ಸ್ವರ್ಣಂ ದೀಪಂ” ದೀಪಾವಳಿ ವಿಶೇಷ ಆಫರ್ ನೀಡಲಾಗಿದ್ದು  ಚಿನ್ನ ಖರೀದಿಯಲ್ಲಿ  ಗ್ರಾಹಕರು ಉತ್ತಮ ಸ್ಪಂದನೆ ನೀಡಿದ್ದಾರೆ.ಸ್ವರ್ಣಂ ಜ್ಯುವೆಲ್ಸ್ ನ ಪ್ರತೀ ಆಯೋಜನೆಗೂ ಗ್ರಾಹಕರ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ,...

ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ದೀಪಾವಳಿ ಆಚರಣೆ

ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಕಾಲೇಜಿನ ವಠಾರವನ್ನು ದೀಪದಿಂದ ಬೆಳಗಿಸಿ ಅಲಂಕರಿಸಲಾಯಿತು. ದೀಪಾವಳಿ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಮಹಾತ್ಮ ಗಾಂಧಿ ಸ್ಮಾರಕ ಪ್ರೌಢಶಾಲೆಯ ಸಂಚಾಲಕರಾದ ಶ್ರೀ ದೊಡ್ಡಣ್ಣ ಬರಮೇಲು ರವರು ಉದ್ಘಾಟಿಸಿ ದೀಪಾವಳಿಯ ಸಂಭ್ರಮದ ಕ್ರಮ ಮತ್ತು ಆಚರಣೆಯ ಉದ್ದೇಶವನ್ನು ಇಂದಿನ ಮಕ್ಕಳು...

ಮಂಡೆಕೋಲು : ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ

“ನಿರಂತರ ಕಲಿಕೆಯಿಂದ ವೃತ್ತಿಯಲ್ಲಿ ಕೌಶಲ್ಯತೆ ಹೊಂದಲು ಸಾಧ್ಯ” – ಟೋನಿ ಮೈಕಲ್

ಮಂಡೆಕೋಲು : “ನಿರಂತರ ಕಲಿಕೆ ಹಾಗೂ ಸತತ ಪರಿಶ್ರಮ ಇದ್ದರೆ ಯಾವುದೇ ಕೆಲಸದಲ್ಲಿ ಉತ್ತಮ ಕೌಶಲ್ಯತೆ ಹೊಂದಬಹುದು” ಎಂದು ಕೇಂದ್ರೀಯ ರಬ್ಬರ್ ಪ್ರಾಧಿಕಾರದ ಪುತ್ತೂರು ವಿಭಾಗದ ಸಹಾಯಕ ಅಭಿವೃದ್ಧಿ ಅಧಿಕಾರಿ ಟೋನಿ ಮೈಕಲ್ ಹೇಳಿದರು.ಕೇಂದ್ರೀಯ ರಬ್ಬರ್ ಪ್ರಾಧಿಕಾರ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ನ ಅರಿವು ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಎಂಟು ದಿನಗಳ ರಬ್ಬರ್ ಟ್ಯಾಪಿಂಗ್...
Loading posts...

All posts loaded

No more posts

error: Content is protected !!