- Saturday
- September 26th, 2026
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀಮತಿ ಸಾವಿತ್ರಿ ಮತ್ತು ಮೋಹನಕುಮಾರ ಗೌಡರ ಸುಪುತ್ರ ಮುರಳಿಕೃಷ್ಣ ಅವರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಎಡಮಂಗಲ ಗ್ರಾಮದ ನಾಗನಕಜೆ ಶ್ರೀಮತಿ ಉಮಾವತಿ ಮತ್ತು ನಾರ್ಣಪ್ಪ ಗೌಡರ ಪುತ್ರಿ ಸತ್ಯವತಿ(ಸರಿತಾ) ರೊಂದಿಗೆ ನ.14 ರಂದು ವಧುವಿನ ಮನೆಯಲ್ಲಿ ನಡೆಯಿತು.
ಬಾಲ್ಯದಲ್ಲಿ ಮಕ್ಕಳ ದಿನವೆಂದರೆ ಹಬ್ಬದ ದಿನವಾಗಿರುವುದು ಅಕ್ಷರಶಃ ಸತ್ಯ .ಬೆನ್ನಿಗೆ ಹತ್ತು ಕೆಜಿಗೆ ಸಮಾನವಾದ ಬ್ಯಾಗ್ ಹಾಕಿ ಶಾಲೆಗೆ ನಡೆದಾಗ ಒಂದೊಮ್ಮೆ ರಜೆ ಸಿಗಲಿ ಎನ್ನುತ್ತಿದ್ದೆವು. ಮಕ್ಕಳಿಗಿಂತ ಬ್ಯಾಗ್ ಗಳ ತೂಕವೇ ಅಧಿಕವಾದರೆ ಅಂತಹ ಬ್ಯಾಗ್ ಇಲ್ಲದೆ ಶಾಲೆಗೆ ತೆರಳುವ ದಿನಗಳಲ್ಲಿ ಮಕ್ಕಳ ದಿನಾಚರಣೆಯು ಒಂದಾಗಿತ್ತು. ಸಮವಸ್ತ್ರ ಧರಿಸಿ ಕೈ ಬೀಸಿ ಬರುವಾಗ ಯಾರಾದರೂ ಬ್ಯಾಗ್...
ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನ.10 ರಂದು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವತಿಯಿಂದ ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸರಿತಾ, ಸಹ ಶಿಕ್ಷಕಿ ಕುಮಾರಿ, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಶ್ರೀಮತಿ ಭಾರತಿ ಮೂಕಮಲೆ ಹಾಗೂ ಎಸ್.ಡಿ.ಎಂ.ಸಿ...
ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ಸಮಾನ ಮನಸ್ಕರ ಯುವಕರ ತಂಡ ‘ಹೊಂಬೆಳಕು’ ನ.14ರಂದು ಅಸ್ವಿತ್ವಕ್ಕೆ ಬಂದಿತು. ‘ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾದ ತಂಡವನ್ನು ಕೃಷಿಕರಾದ ಎಂ.ಕೆ.ಮೋಹನ್ ಕುಮಾರ್‌ರವರು ತಂಡದ ಸದಸ್ಯರಿಗೆ ಸಮವಸ್ತ್ರ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ತಂಡವು ಗ್ರಾಮದ ಬಸ್ಸು ತಂಗುದಾಣ, ಶಾಲೆ ಹಾಗೂ ಇನ್ನಿತರ ಸರ್ಕಾರಿ ಸ್ವಾಮ್ಯದ...
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ ಇದರ ಸುವಿಚಾರ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆಯನ್ನು ಸಾಹಿತ್ಯ ಸಂವಾದವನ್ನು ನಡೆಸುವುದರ ಮೂಲಕ ನೀಡಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇದರ ಪ್ರೌಢಶಾಲಾ ವಿಭಾಗದ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯಕುಮಾರ್ ಇವರು ವಿದ್ಯಾರ್ಥಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ಮೊದಲು ಉತ್ತಮ ಸಾಹಿತ್ಯಗಳನ್ನು ಆಲಿಸುವ, ವಿಚಾರಗಳ ಬಗ್ಗೆ ಮಾತನಾಡುವ,...
ಇತ್ತೀಚೆಗೆ ನಿಧನರಾದ ಕಳಂಜ ಗ್ರಾಮದ ಸೀತಮ್ಮ ಕಳಂಜ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನ.14ರಂದುಸ್ವಗೃಹದಲ್ಲಿ ನಡೆಯಿತು. ಮೃತರ ಗೌರವಾರ್ಥ ಮೃತರ ಸಂಬಂಧಿ ರಾಮಣ್ಣ ಗೌಡ ಕಾಣಿಯೂರು ನುಡಿನಮನಗೈದರು. ಈ ಸಂದರ್ಭದಲ್ಲಿ ಶ್ರೀಮತಿ ಸೀತಮ್ಮರವರ ಪತಿ ಸುಬ್ರಾಯ ಗೌಡ, ಸಹೋದರಿ ಹೊನ್ನಮ್ಮ, ಪುತ್ರ ಪುರಂದರ ಗೌಡ, ಸೊಸೆ ಶ್ರೀಮತಿ ರಮ್ಯ, ಮೊಮ್ಮಗಳು ಬೇಬಿ ಜನನಿ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ,...
ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ ಮಕ್ಕಳ ದಿನಾಚರಣೆಯನ್ನು ನ.14ರಂದು ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಯಾದ ಹರಿಪ್ರಸಾದ್ ಆಳ್ವರವರು ಮಕ್ಕಳಿಗೆ ಪ್ರೀತಿಯ ಕೊಡುಗೆಯಾಗಿ ಸುಮಾರು ರೂ. 45,000 ಮೌಲ್ಯದ ಬೆಂಚು, ಡೆಸ್ಕುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹರಿಪ್ರಸಾದ್ ಆಳ್ವರವರ ತಾಯಿ ಶ್ರೀಮತಿ ವಾರಿಜ, ಸಹೋದರಿ ಶ್ರೀಮತಿ ಸುಪ್ರಿಯಾ ಆಳ್ವ, ಸುಳ್ಯ ತಾಲೂಕು ಮಹಿಳಾ ವಿವಿದ್ಧೋದೇಶ...
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.14 ಆದಿತ್ಯವಾರದಂದು ಆರಂಭಗೊಂಡಿದ್ದು, ಬೆಳಗ್ಗೆ ಶ್ರೀ ದೇವರಿಗೆ ಪ್ರಾರ್ಥನೆ, ಬಳಿಕ ಪಂಡಿತ್ ದೇವರಾಯ ಕಿಣಿ ಮತ್ತು ಬಳಗದವರಿಂದ ಸಂತವಾಣಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ....
ಕೊಡಗು, ದ.ಕ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಸಭೆ ನ.18 ರಂದು ಸುಳ್ಯ ವೆಂಕಟ್ರಮಣ ದೇವಸ್ಥಾನದಲ್ಲಿ ಬೆ.11 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು ತಿಳಿಸಿದ್ದಾರೆ. ನ.೧೩ ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಭೆಯಲ್ಲಿ ರಾಜ್ಯ ರೈತ ಮೋರ್ಚಾದ ಪ್ರಮುಖರು, ಜಿಲ್ಲಾ ಹಾಗೂ ತಾಲೂಕು ಮಟ್ಟದ...
Loading posts...
All posts loaded
No more posts
